ಸ್ಯಾಂಡಲ್ವುಡ್ನಲ್ಲಿ ಮಾಸ್ ಸಿನಿಮಾ ಇಮೇಜ್ ಹೊಂದಿರುವ ನಟ ಮರಿ ಟೈಗರ್ ವಿನೋದ್ ಪ್ರಭಾಕರ್. ಇವರೀಗ ಟೈಗರ್ ಟಾಕೀಸ್ ಸಂಸ್ಥೆಯ ಮೂಲಕ 'ಲಂಕಾಸುರ' ಸಿನಿಮಾ ನಿರ್ಮಿಸುತ್ತಿದ್ದಾರೆ. ಟೀಸರ್ನಿಂದ ಸದ್ದು ಮಾಡುತ್ತಿರುವ ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದೆ.
![Vinnod Prabhakar](https://etvbharatimages.akamaized.net/etvbharat/prod-images/kn-bng-04-lankasurra-movieyindha-gamana-seleyuthiro-vindod-prabhakar-7204735_30072022220535_3007f_1659198935_623.jpg)
ಪ್ರಮೋದ್ ಕುಮಾರ್ ಸಿನಿಮಾ ನಿರ್ದೇಶಿಸಿದ್ದು, ಗೀತರಚನೆಕಾರ ಚೇತನ್ ಕುಮಾರ್ ಬರೆದಿರುವ "ಅಣ್ಣ ಗನ್ ಹಿಡ್ದು ನಿಂತ ಅಂದ್ರೆ ಭಸ್ಮಾಸುರ, ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ.. ಲಂಕಾಸುರ ಲಂಕಾಸುರ " ಟೈಟಲ್ ಟ್ರ್ಯಾಕ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡನ್ನು ಈಗಾಗಲೇ ಒಂದು ಮಿಲಿಯನ್ಗೂ ಅಧಿಕ ಜನ ವೀಕ್ಷಿಸಿದ್ದಾರೆ.
- " class="align-text-top noRightClick twitterSection" data="">
ವಿಜೇತ್ ಕೃಷ್ಣ ಈ ಹಾಡು ಹಾಡಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸುಜ್ಞಾನ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್.ಕುಮಾರ್ ಸಂಕಲನ ಹಾಗೂ ಮೋಹನ್ ನೃತ್ಯ ನಿರ್ದೇಶಿಸಿದ್ದಾರೆ. 'ಲಂಕಾಸುರ'ನನ್ನು ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಡಾಕ್ಟರ್ ಮತ್ತು ಆ್ಯಕ್ಟರ್ ಶೈಲಿಯಲ್ಲಿ ಮಗನ ಫಸ್ಟ್ ಫೋಟೋಶೂಟ್ ಮಾಡಿಸಿದ ಸಂಜನಾ ಗಲ್ರಾನಿ