ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನಿರ್ದೇಶಕ ಮಹೇಶ್ ಗೌಡ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ತ್ರಿಬಲ್ ರೈಡಿಂಗ್'. 'ಗಾಳಿಪಟ 2' ಸಿನಿಮಾ ಸಕ್ಸಸ್ ನಂತರ ಗಣಿ ಸ್ಟಾರ್ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಟ್ರೈಲರ್, ಹಾಡುಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ಟಾಕ್ ಆಗುತ್ತಿರುವ 'ತ್ರಿಬಲ್ ರೈಡಿಂಗ್' ಸಿನಿಮಾದ ನಾಲ್ಕನೇ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದೆ.
'ನಿಜವೇ ಅಥವಾ ಇದು ಕನಸೇ ನಗುವೆ ಅಥವಾ ಇದು ಸಿಹಿ ತಿನಿಸೇ' ಎಂಬ ಹಾಡನ್ನು ಪ್ರೇಮ ಕವಿ ಜಯಂತ್ ಕಾಯ್ಕಿಣಿ ಬರೆದಿದ್ದು, ಗಾಯಕ ಸೋನು ನಿಗಮ್ ಮತ್ತು ಸರಸು ಚಂದ್ರಿಕಾ ಹಾಡಿದ್ದಾರೆ. ಸಾಯಿ ಕಾರ್ತಿಕ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಮೇಘಾ ಶೆಟ್ಟಿ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಿದ್ದು, ಅದ್ಧೂರಿಯಾಗಿ ಮೂಡಿಬಂದಿದೆ.
ಈ ಹಾಡಿನಲ್ಲಿ ಗಣೇಶ್ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿದ್ದು, ಮೇಘಾ ಶೆಟ್ಟಿ ಬಬ್ಲೀಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಯುವ ಪೀಳಿಗೆಯನ್ನ ಇಂಪ್ರೆಸ್ ಮಾಡುತ್ತಿದೆ. ಹೆಸರಿಗೆ ತಕ್ಕಂತೆ ತ್ರಿಬಲ್ ರೈಡಿಂಗ್ ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಕಾಮಿಡಿ ಕಥೆ ಹೊಂದಿರುವ ಸಿನಿಮಾ. ಹೀಗಾಗಿ ನಿರೀಕ್ಷೆ ಹೆಚ್ಚಾಗಿದೆ.
- " class="align-text-top noRightClick twitterSection" data="">
ನಟಿಯರಾದ ರಚನಾ ಇಂದರ್, ಮೇಘಾ ಶೆಟ್ಟಿ ಹಾಗೂ ಅದಿತಿ ಪ್ರಭುದೇವ ಎಂಬ ಮುದ್ದಾದ ಬೆಡಗಿಯರ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. ಇವರಲ್ಲದೆ ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ಸೇರಿ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದೆ. ಆನಂದ್ ಅವರ ಕ್ಯಾಮರಾ ವರ್ಕ್ ಇದೆ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯವಿದೆ.
ರಗಡ್ ಸಿನಿಮಾ ಮಾಡಿ ಗಮನ ಸೆಳೆದಿರೋ ನಿರ್ದೇಶಕ ಮಹೇಶ್ ಗೌಡ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಮಹೇಶ್ ಗೌಡ ಈ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ. ಕೃಪಾಳು ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ವೈ.ಎಮ್. ರಾಮ್ ಗೋಪಾಲ್ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಗಣೇಶ್ ಹಾಗು ಮೇಘಾ ಶೆಟ್ಟಿ ನಡುವಿನ ರೊಮ್ಯಾಂಟಿಕ್ ಹಾಡು ನೋಡುಗರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : ಕೆಜಿಎಫ್, ಚಾರ್ಲಿ, ಆರ್ಆರ್ಆರ್ ದಾಖಲೆ ಬ್ರೇಕ್ ಮಾಡಿದ ಕಾಂತಾರ