ETV Bharat / entertainment

ಕನ್ನಡಿಗರ ಮನದ ಮುಗಿಲಲ್ಲಿ ಪ್ರೇಮದ 'ಗಾಳಿಪಟ 2' ಹಾರಿಸಲು ಸಜ್ಜಾದ ಗಣೇಶ್​ - Etv Bharath kannada news

ಬುಕ್ ಮೈ ಶೋನಲ್ಲಿ ಇಂದಿನಿಂದ ಗಾಳಿಪಟ 2 ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ನಿಮ್ಮ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಬಂದು ಸಿನಿಮಾ ನೋಡಿ ಅಂತಾ ಗಣೇಶ್ ಮನವಿ ಮಾಡಿದ್ದಾರೆ.

ಗಾಳಿಪಟ ಸಿನಿಮಾ 2 ಪೋಸ್ಟರ್
ಗಾಳಿಪಟ ಸಿನಿಮಾ 2 ಪೋಸ್ಟರ್
author img

By

Published : Aug 8, 2022, 10:49 PM IST

ಕನ್ನಡ ಚಿತ್ರರಂಗದಲ್ಲಿ ಹಾಡುಗಳು ಹಾಗೂ ಟ್ರೈಲರ್​ನಿಂದ ಹೆಸರು ಮಾಡುತ್ತಿರುವ ಸಿನಿಮಾ ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ ಸಿನಿಮಾದ ಟ್ರೈಲರ್‌ಗೆ ಮಿಲಿಯನ್‌ಗಟ್ಟಲೆ ವೀಕ್ಷಣೆ ಸಿಕ್ಕಿದೆ.

ಚಿತ್ರದ ಟ್ರೈಲರ್ ನೋಡಿದವರು ಯಾವಾಗ ಸಿನಿಮಾ ಬಿಡುಗಡೆ ಆಗುತ್ತೆ ಎಂದು ಕಾಯುತ್ತಿದ್ದಾರೆ. ಈ ಹಿಂದೆ ಚಿತ್ರತಂಡ ಹೇಳಿದಂತೆ ಆಗಸ್ಟ್ 12 ರಂದು ಕನ್ನಡಿಗರ ಮನದ ಮುಗಿಲಲ್ಲಿ ಪ್ರೇಮದ ಗಾಳಿಪಟ ಹಾರಿಸಲು ರೆಡಿಯಾಗಿದೆ. ಈ ಹಿನ್ನೆಲೆಯಲ್ಲಿ ಗಣೇಶ್ ಗಾಳಿಪಟ 2 ಚಿತ್ರದ ಟಿಕೆಟ್​ಗಳ ಬುಕ್ಕಿಂಗ್ ಅನೌನ್ಸ್​ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಇಂದಿನಿಂದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ನಿಮ್ಮ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಬಂದು ಸಿನಿಮಾ ನೋಡಿ ಎಂದು ಗಣೇಶ್ ಮನವಿ ಮಾಡಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟ್ರೈನರ್​ ಜೊತೆಗೆ ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಗಾಳಿಪಟ- 2 ಪ್ರೇಕ್ಷಕರ ಮನ ಗೆಲ್ಲಲಿದೆ ಎನ್ನಲಾಗುತ್ತಿದೆ. ಮೂವರು ಸ್ನೇಹಿತರ ಬಾಳಿಗೆ ಮೂವರು ಹುಡುಗಿಯರು ಬಂದ ಮೇಲೆ ಏನೆಲ್ಲಾ ಆಗುತ್ತದೆ ಅನ್ನೋದನ್ನು ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

ಗಣೇಶ್, ದಿಗಂತ್, ಪವನ್ ಕುಮಾರ್ ಜೋಡಿಗಳಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಅಭಿನಯಿಸಿದ್ದಾರೆ. ಹಿರಿಯ ನಟರಾದ ಅನಂತ್ ನಾಗ್, ರಂಗಾಯಣ ರಘು, ಸುಧಾ ಬೆಳವಾಡಿ ಹೀಗೆ ದೊಡ್ಡ ತಾರಾಬಳಗವೇ ಇದೆ.ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅದ್ದೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆೆ. ಆಗಸ್ಟ್ 12ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: 'ಎಲ್ರ ಕಾಲೆಳಿಯತ್ತೆ ಕಾಲ' ಎನ್ನುತ್ತಿರುವ ಚಂದನ್ ಶೆಟ್ಟಿ: ಹಾಡು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.