ETV Bharat / entertainment

'ಮರೆಯಲಾಗದ ಭಾರತದ ಮೊದಲ ಪ್ರವಾಸ'.. ಅಂಬಾನಿ ಕುಟುಂಬಕ್ಕೆ ಥ್ಯಾಂಕ್ಸ್​ ಎಂದ ಸೂಪರ್​ ಮಾಡೆಲ್​ ಜಿಜಿ ಹಡಿದ್​ - ಸೂಪರ್ ಮಾಡೆಲ್ ಜಿಜಿ ಹಡಿದ್

ಸೂಪರ್ ಮಾಡೆಲ್ ಜಿಜಿ ಹಡಿದ್ ಭಾರತಕ್ಕೆ ಆಹ್ವಾನಿಸಿದಕ್ಕಾಗಿ, ಭಾರತೀಯ ಸಂಸ್ಕೃತಿಯನ್ನು ಅನುಭವಿಸುವಂತೆ ಮಾಡಿದ್ದಕ್ಕಾಗಿ ಅಂಬಾನಿ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

The Photo shared by Gigi Hadid
ಮಾಡೆಲ್​ ಜಿಜಿ ಹಡಿದ್​ ಹಂಚಿಕೊಂಡ ಫೋಟೋ
author img

By

Published : Apr 3, 2023, 5:50 PM IST

ಮುಂಬೈ: ಮುಖೇಶ್​ ಅಂಬಾನಿ ಪತ್ನಿ, ರಿಲಯನ್ಸ್​ ಫೌಂಡೇಶನ್​ ಅಧ್ಯಕ್ಷೆ ನೀತಾ ಮುಖೇಶ್​ ಅಂಬಾನಿ ಅವರ ಕನಸಿನ ಯೋಜನೆ ಕಲ್ಚರಲ್​ ಸೆಂಟರ್​ (ಎನ್​ಎಂಎಸಿಸಿ) ಉದ್ಘಾಟನಾ ಕಾರ್ಯಕ್ರಮ ಶುಕ್ರವಾರವಷ್ಟೇ ಅದ್ಧೂರಿಯಾಗಿ ನೆರವೇರಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ದೇಶ - ವಿದೇಶದ ಸಿನಿಕ್ಷೇತ್ರ ಮಾತ್ರವಲ್ಲದೇ, ವಿವಿಧ ಕ್ಷೇತ್ರಗಳ ಗಣ್ಯವ್ಯಕ್ತಿಗಳು ಅತಿಥಿಗಳಾಗಿ ಆಗಮಿಸಿದ್ದರು. ಅಮೆರಿಕದ ಮಾಡೆಲ್​ ಜಿಜಿ ಹಡಿದ್​ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಲ್ಚರಲ್​ ಸೆಂಟರ್​ ಉದ್ಘಾಟನೆಗೆಂದು ಭಾರತಕ್ಕೆ ಆಗಮಿಸಿದ್ದ ಜಿಜಿ ಹಡಿದ್​ ಮುಂಬೈನ್ ಛತ್ರಪತಿ ಶಿವಾಜಿ ಮಹಾರಾಜ್​ ಟರ್ಮಿನಸ್​, ಮಾತ್ರವಲ್ಲದೇ ಗೇಟ್​ ವೇ ಆಫ್​ ಇಂಡಿಯಾಗೂ ಭೇಟಿ ನೀಡಿದ್ದಾರೆ. ಅವುಗಳ ಮುಂದೆ ನಿಂತು ಪೋಟೋ ತೆಗೆಸಿಕೊಂಡಿರುವ ಜಿಜಿ ಹಡಿದ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಅಂಬಾನಿ ಕುಟುಂಬಕ್ಕೂ ಧನ್ಯವಾದವನ್ನು ಸಲ್ಲಿಸಿದ್ದಾರೆ. ಸದ್ಯ ಜಿಜಿ ಹಡಿದ್​ ಛತ್ರಪತಿ ಶಿವಾಜಿ ಮಹಾರಾಜ್​ ಟರ್ಮಿನಸ್ ಮುಂದೆ ನಿಂತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ತನ್ನ ತಂಡದೊಂದಿಗೆ ರೈಲ್ವೇ ನಿಲ್ದಾಣದ ಫೋಟೋ ತೆಗೆದುಕೊಳ್ಳುತ್ತಿರುವ ಚಿತ್ರಗಳಿವೆ. ಗಿಗಿ ಹಡಿದ್​ ತನ್ನ ಇನ್​ಸ್ಟಾಗ್ರಾಂನಲ್ಲಿ ಕಲ್ಚರಲ್​ ಹಾಲ್​ ಉದ್ಘಾಟನೆಯ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ಗೇಟ್​ ವೇ ಆಫ್​ ಇಂಡಿಯಾದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಎಳನೀರು ಕುಡಿಯುವ ಫೋಟೋ ವನ್ನೂ ಮಾಡೆಲ್​ ಶೇರ್​ ಮಾಡಿಕೊಂಡಿದ್ದಾರೆ.

@nmacc.india ದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ಮುಂಬೈನಲ್ಲಿ ನನಗೆ ಆತಿಥ್ಯ ನೀಡಿದ್ದಕ್ಕಾಗಿ ಅಂಬಾನಿ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳು. ಭಾರತದ ಸೃಜನಶೀಲತೆ ಮತ್ತು ಪರಂಪರೆ ಆಚರಿಸಲು ಮತ್ತು ಬೆಳೆಸಲು ನಿರ್ಮಿಸಿರುವ ಜಗತ್ತಿನ ಅತೀ ಸುಂದರವಾರ ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರದ ನಿಮ್ಮ ಕುಟುಂಬದ ಕನಸು ನನಸಾಗುವ ಕ್ಷಣಕ್ಕೆ ನಾನು ಸಾಕ್ಷಿಯಾಗಿರುವುದು ನನಗೆ ಗೌರವಪೂರ್ವಕವಾಗಿದೆ. "ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್' ಮತ್ತು 'ಇಂಡಿಯಾ ಇನ್ ಫ್ಯಾಶನ್' ಉದ್ಘಾಟನಾ ರಾತ್ರಿಗಳನ್ನು ನೋಡಿದ ನಂತರ, ನಾನು ತುಂಬಾ ಕಲಿತಿದ್ದೇನೆ ಮತ್ತು ಈ ಸ್ಥಳವು ಭವಿಷ್ಯದ ಪೀಳಿಗೆಗೆ ಅವರ ಭಾವೋದ್ರೇಕಗಳನ್ನು ಅನ್ವೇಷಿಸಲು, ನೃತ್ಯದಿಂದ ವಿನ್ಯಾಸ, ಸಂಗೀತದಿಂದ ಕಲೆಯನ್ನು ಬೆಳೆಸಲು ನೆರವಾಗುತ್ತದೆ ಎಂದು ತಿಳಿದಿದ್ದೇನೆ. ನೀವು ಕಲ್ಚರಲ್​ ಸೆಂಟರ್​ಗೆ ಭೇಟಿ ನೀಡುವ ಅವಕಾಶವಿದೆ ಎಂದಾದರೆ, ನಾನೇ ಹೆಚ್ಚು ಶಿಫಾರಸು ಮಾಡುತ್ತೇನೆ!!!! ಭಾರತಕ್ಕೆ ಮರೆಯಲಾಗದ ಮೊದಲ ಪ್ರವಾಸ, ತುಂಬಾ ಪ್ರೀತಿಯೊಂದಿಗೆ." ಎಂದು ಎನ್​ಎಂಎಸಿಸಿ ಅನ್ನು ಟ್ಯಾಗ್​ ಮಾಡಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

ಭಾರತವನ್ನು ಪ್ರೀತಿಸುವ ಅಮೆರಿಕದ ಮಾಡೆಲ್​ ಜಿಜಿ ಹಡಿದ್, ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​ನ ಅದ್ಧೂರಿನ ಉದ್ಘಾಟನಾ ಕಾರ್ಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಮುಂಬೈಗೆ ಆಗಮಿಸಿದ್ದರು. ಅಂದಿನಿಂದ ಜಿಜಿ ಹಡಿದ್​ ಭಾರತದ ಸೌಂದರ್ಯದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಜಿ ಹಡಿದ್​ ಎರಡನೇ ದಿನದಂದು ಕಸ್ಟಮ್ ಅಬು ಜಾನಿ ಸಂದೀಪ್ ಖೋಸ್ಲಾ ಚಿಕಂಕರಿ ಸೀರೆ ಮತ್ತು ಚಿನ್ನದ ರತ್ನದ ಕುಪ್ಪಸವನ್ನು ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 'ಎನ್​ಎಂಎಸಿಸಿ' ಉದ್ಘಾಟನೆ: ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.