ವಾಷಿಂಗ್ಟನ್: ಕೆನಾಡಿಯನ್ ಗಾಯಕ- ಹಾಡು ಬರಹಗಾರ ದಿ ವೀಕೆಂಡ್ ನಥಿಂಗ್ ಇಸ್ ಲಾಸ್ಟ್ ಹಾಡು ಬಿಡುಗಡೆಗೆ ಮುಂದಾಗಿದ್ದಾರೆ. ಜೇಮ್ಸ್ ಕ್ಯಾಮೆರೊನ್ 'ಅವತಾರ್: ದಿ ವೇ ಆಫ್ ವಾಟರ್'ನ ಥೀಮ್ ಸೌಂಡ್ಟ್ರಾಕ್ ಬಿಡುಗಡೆಗೆ ಸಜ್ಜಾಗಿದೆ. ಅಮೆರಿಕನ್ ಮೀಡಿಯಾ ಕಂಪನಿ, ಹಾಡು ಕಳೆದ ವಾರ ಗಾಯಕರಿಂದ ಪೂರ್ಣಗೊಂಡಿದ್ದು, ಮುಂದಿನ ಡಿಸೆಂಬರ್ 15ರಂದು ಹಾಲಿವುಡ್ ರೆಕಾರ್ಡ್ಸ್ನಲ್ಲಿ ಬಿಡುಗಡೆಯಾಗಲಿದೆ.
ವೀಕೆಂಡ್ ಹಾಡನ್ನು ಬರೆದಿದ್ದು ಸಿಮೊನ್ ಫ್ರಾಗ್ಲೆನ್ ಜೊತೆ ಸ್ವಿಡೀಶ್ ಹೌಸ್ ಮಾಫಿಯಾ ಇದರ ನಿರ್ಮಾಣ ಮಾಡಿದೆ. ಗ್ರಾಮಿ ಪುರಸ್ಕೃತ ಸಂಯೋಜಕ ಸಿಮೊನ್ ಫ್ರಾಗ್ಲೆನ್ ಕೂಡ ಈ ಅಲ್ಬಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿ. 16ಕ್ಕೆ ಚಿತ್ರಮಂದಿಗರಳಲ್ಲಿ ಇದು ತೆರೆ ಕಾಣಲಿದೆ.
'ಅವತಾರ್: ದಿ ವೇ ಆಫ್ ವಾಟರ್'ನಲ್ಲಿ ಜಿಯೊ ಸಲ್ದಾನ್, ಸ್ಯಾಮ್ ವರ್ಥಿಂಗ್ಟನ್, ಸಿಗೊರನಿ ವೇವರ್, ಸ್ಟೆಫನ್ ಲಾಂಗ್, ಕ್ಲಿಫ್ ಕರ್ಟಿಸ್, ಜೊಯಲ್ ಡೇವಿಡ್ ಮೊರ್, ಸಿಸಿಎಚ್ ಪೌಂಡರ್, ಎಡಿ ಫಲ್ಗೊ, ಜೆಮೈನಿ ಸ್ಲೆಮೆನಟ್ ಮತ್ತು ಕೇಟ್ ವಿನ್ಸಟ್ ತಾರಾಗಣವಿದೆ. ಇತ್ತೀಚೆಗಷ್ಟೆ ವೀಕೆಂಡ್ ಕಳೆದ ತಿಂಗಳ ಉತ್ತರ ಅಮೇರಿಕದಲ್ಲಿ ಸಂಗೀತ ಪ್ರವಾಸವನ್ನು ಮುಗಿಸಿದ್ದಾರೆ.
ಇದನ್ನೂ ಓದಿ: ಹಿನಾ ಖಾನ್ - ರಾಕಿ ಜೈಸ್ವಾಲ್ ಸಂಬಂಧದಲ್ಲಿ ಬಿರುಕು ವದಂತಿಗೆ ಬ್ರೇಕ್