ETV Bharat / entertainment

ಗರಡಿ ಬಿಡುಗಡೆಗೆ ಇನ್ನೊಂದೆ ದಿನ ಬಾಕಿ: ಹೆಚ್ಚಿತು ಪ್ರೇಕ್ಷಕರ ಕುತೂಹಲ - Garadi

Garadi movie: ಕನ್ನಡ ಚಿತ್ರರಂಗ‌ದ ಬಹುನಿರೀಕ್ಷಿತ ಸಿನಿಮಾ ಗರಡಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

Garadi movie
ಗರಡಿ ಸಿನಿಮಾ
author img

By ETV Bharat Karnataka Team

Published : Nov 8, 2023, 8:02 PM IST

ಗರಡಿ ಬಿಡುಗಡೆಗೆ ಕ್ಷಣಗಣನೆ

'ಗರಡಿ'.....ಕನ್ನಡ ಚಿತ್ರರಂಗ‌ದಲ್ಲಿ ಸಖತ್​ ಸದ್ದು ಮಾಡುತ್ತಿರುವ ಸಿನಿಮಾ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೂ ಗಮನ ಸೆಳೆದಿರುವ 2023ರ ಬಹು ನಿರೀಕ್ಷಿತ ಚಿತ್ರ. ಮಾಜಿ ಸಚಿವ, ನಟ ಬಿ.‌ಸಿ ಪಾಟೀಲ್, ಯಶಸ್ ಸೂರ್ಯ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗರಡಿ ಚಿತ್ರದ ಕ್ರೇಜ್​​ ಜೋರಾಗೇ ಇದೆ.

ನಿರ್ದೇಶಕ ಯೋಗರಾಜ್ ಭಟ್ ಅವರು ನಮ್ಮ ದೇಸಿ ಕ್ರೀಡೆ ಕುಸ್ತಿ ಕಥೆಯನ್ನು ಒಳಗೊಂಡಿರುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇದೆ. ಇತ್ತೀಚೆಗೆ ಅನಾವರಣಗೊಂಡಿರುವ ಟ್ರೇಲರ್​ ಅನ್ನು ಹೆಚ್ಚಿನ ಸಂಖ್ಯೆಯ ಜನರು ವೀಕ್ಷಿಸಿದ್ದಾರೆ. ಒಂದೊಳ್ಳೆ ಕಂಟೆಂಟ್​ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ.

  • " class="align-text-top noRightClick twitterSection" data="">

ಟ್ರೇಲರ್​ ಲಾಂಚ್​ ಈವೆಂಟ್​ನ​ ಸುಂದರ ವಿಡಿಯೋ ಅನಾವರಣ: ಇತ್ತೀಚೆಗೆ ಅನಾವರಣಗೊಂಡಿರುವ ಟ್ರೇಲರ್​ ನೋಡಿದ್ರೆ, ಗರಡಿ 2023ರ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಹಾಗೂ ಕುಸ್ತಿ ಪಟುಗಳ ತಾಕತ್ ಏನು ಎಂಬುದರ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಕುಸ್ತಿ ಉಸ್ತಾದ್ ಆಗಿ ಬಿ.ಸಿ ಪಾಟೀಲ್, ಹಳ್ಳಿ ಕುಸ್ತಿ ಪಟುವಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ಈ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ದರ್ಶನ್ ಎಂಟ್ರಿ ಕೊಟ್ಟಿದ್ದು, ಇದು ಚಿತ್ರದ ಹೈಲೆಟ್​ ಆಗಲಿದೆ. ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ಟ್ರೇಲರ್​​ ಅನಾವರಣಗೊಳಿಸಲಾಗಿತ್ತು. ಟ್ರೇಲರ್​​ ಬಿಡುಗಡೆಯ ಸುಂದರ ಕ್ಷಣಗಳ ವಿಡಿಯೋವನ್ನು ಸಹ ಚಿತ್ರತಂಡ ರಿವೀಲ್ ಮಾಡಿ ಗಮನ ಸೆಳೆದಿದೆ.

ಇನ್ನೂ ಚಿತ್ರದ ಹೆಸರೇ ಹೇಳುವ ಹಾಗೇ ಗರಡಿ ಪೈಲ್ವಾನ್ ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಮಾಡಿರುವ ಸಿನಿಮಾ. ಈ ಚಿತ್ರದಲ್ಲಿ ನಟ‌ ಯಶಸ್ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಬಿ.ಸಿ ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಕೂಡ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಮೊಣಕಾಲು ಶಸ್ತ್ರಚಿಕಿತ್ಸೆ: ಇಟಲಿಯಿಂದ ಹೈದರಾಬಾದ್​ಗೆ ಮರಳಿದ ಸಲಾರ್ ನಟ ಪ್ರಭಾಸ್

ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿ. ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಇದೆ. ಚಿತ್ರ ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ: 'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್​ ದೇವರಕೊಂಡ ಪ್ರತಿಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.