ಕೆನಡಾದಲ್ಲಿರುವ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ನಿವಾಸದ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಈ ದಾಳಿ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ. ಆತನ ಹೆಸರಿನ ಫೇಸ್‌ಬುಕ್ ಪೋಸ್ಟ್ ಇದನ್ನು ಸೂಚಿಸುತ್ತಿದೆ.
ಕೆನಡಾ ದೇಶದ ವ್ಯಾಂಕೋವರ್‌ನ ವೈಟ್ ರಾಕ್ ಪ್ರದೇಶದಲ್ಲಿ ನೆಲೆಸಿರುವ ಗಿಪ್ಪಿ ಗ್ರೆವಾಲ್ ಅವರ ಬಂಗಲೆ ಮೇಲೆ ಶನಿವಾರ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಗಿಪ್ಪಿ ಗ್ರೆವಾಲ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಮತ್ತೊಂದೆಡೆ, ಲಾರೆನ್ಸ್ ಬಿಷ್ಣೋಯ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ಕೃತ್ಯವನ್ನು ತಾನೇ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಹೆಸರಿನ ಫೇಸ್‌ಬುಕ್ ಖಾತೆಯು ಪೂರ್ವಯೋಜಿತ ದಾಳಿಯ ಬಗ್ಗೆ ಪೋಸ್ಟ್ ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ ಸಲ್ಮಾನ್ ಖಾನ್ ಹೆಸರೂ ಕೂಡ ಉಲ್ಲೇಖವಾಗಿದೆ.
ಗಿಪ್ಪಿ ಗ್ರೆವಾಲ್ ಸದ್ಯ ದರೋಡೆಕೋರ ಬಿಷ್ಣೋಯ್ನ ಗುರಿಯಾಗಿದ್ದಾರೆಂದು ಹೇಳಲಾಗಿದೆ. ಇದೇ ವೇಳೆ, ಬಾಲಿವುಡ್ ನಟನನ್ನು ಯಾರೂ ಕೂಡಾ ರಕ್ಷಿಸಲು ಸಾಧ್ಯವಿಲ್ಲ ಎಂದು ಬಿಷ್ಣೋಯ್ ಬೆದರಿಕೆ ಹಾಕಿದ್ದಾನೆ.
ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬಿಷ್ಣೋಯ್, ದಿ. ಗಾಯಕ ಸಿಧು ಮೂಸೆವಾಲಾ ಸಾವಿಗೆ ಗ್ರೆವಾಲ್ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಟೀಕಿಸಿದ್ದಾನೆ. ಮೃತ ಸಂಗೀತಗಾರನೊಂದಿಗಿನ ಅವರ ಸಂಬಂಧವನ್ನು ಪ್ರಶ್ನಿಸಿದ್ದಾನೆ. ಸಾವಿನ ಸಂದರ್ಭ ಅಷ್ಟೊಂದು ರಿಯಾಕ್ಟ್ ಮಾಡಿದ್ದೇಕೆ ಎಂದು ಕೇಳಿದ್ದಾನೆ. ಅಲ್ಲದೇ ಗ್ರೆವಾಲ್ ಅವರ ಕ್ರಮಗಳು ನನ್ನ ಗಮನ ಸೆಳೆದಿದೆ ಎಂದಿದ್ದಾನೆ. "ನೀವು ಯಾವುದೇ ದೇಶಕ್ಕೆ ಪಲಾಯನ ಮಾಡಿ, ಆದ್ರೆ ನೆನಪಿಡಿ, ಸಾವಿಗೆ ವೀಸಾ ಅಗತ್ಯವಿಲ್ಲ, ಅದು ಆಹ್ವಾನಿಸದೇ ಬರುತ್ತದೆ" ಎಂದು ಎಚ್ಚರಿಕೆ ನೀಡಿದ್ದಾನೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ಗೆಳೆಯನಿಗೆ ಎದುರಾದ ಮದುವೆ ಪ್ರಶ್ನೆ: ವಿಜಯ್ ವರ್ಮಾ ಉತ್ತರವೇನು?
ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ನಂತರ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ ಗೋಲ್ಡಿ ಬ್ರಾರ್ ಹೆಸರಿನ ಕೆನಡಾ ಮೂಲದ ದರೋಡೆಕೋರ ಗಾಯಕನ ಕೊಲೆ ಮಾಡಿರಬಹುದೆಂಬ ಆರೋಪವಿತ್ತು. ಆದ್ರೀಗ ಈ ಪ್ರಕರಣ ಸಂಬಂಧದಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿಬಂದಿದೆ. ಗೋಲ್ಡಿ ಬ್ರಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ತನ್ನ ಮತ್ತು ಲಾರೆನ್ಸ್ ಬಿಷ್ಣೋಯ್ ಗುಂಪು ಸೇರಿ ಈ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: 7 ಭಾಷೆಗಳಲ್ಲಿ 'ಕಾಂತಾರ' ದರ್ಶನ: 100 ಕೋಟಿ ಬಜೆಟ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ಗೆ ಕಾತರ