ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಸಾಕ್ಷ್ಯ ಚಿತ್ರ 'ಗಂಧದ ಗುಡಿ'. ಪವರ್ ಸ್ಟಾರ್ ಇಹಲೋಕ ತ್ಯಜಿಸಿ ಕಳೆದ 29ಕ್ಕೆ ಒಂದು ವರ್ಷವಾಗಿದ್ದು, 28ರಂದು ಈ ಚಿತ್ರ ಬಿಡುಗಡೆ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿದೆ. ಎಲ್ಲಾ ಚಿತ್ರಮಂದಿರಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ವಿಶೇಷವಾಗಿ ಮಕ್ಕಳು ನೋಡಬೇಕು ಎಂಬುದು ಪುನೀತ್ ರಾಜ್‌ಕುಮಾರ್ ಅವರ ಆಸೆ ಆಗಿತ್ತು. ಹಾಗಾಗಿ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಈ ಕುರಿತು ಪಿಆರ್ಕೆ ಪ್ರೊಡಕ್ಷನ್ಸ್ ಮಾಹಿತಿ ಹಂಚಿಕೊಂಡಿದೆ.
"ಗಂಧದಗುಡಿ ಅಪ್ಪು ಅವರ ಒಂದು ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು. ಅದರಲ್ಲೂ ಮಕ್ಕಳು ನೋಡಬೇಕೆಂಬುದು. ಈ ಸಲುವಾಗಿ ನಮ್ಮ ಚಿತ್ರತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ಗಂಧದ ಗುಡಿಯನ್ನು 07-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ. ನಿನ್ನೆಯಿಂದ ಕಡಿಮೆ ಬೆಲೆಗೆ ಪ್ರದರ್ಶನ ಆರಂಭಗೊಂಡಿದ್ದು, ಗುರುವಾರದವರೆಗೂ ಅವಕಾಶ ಇದೆ.
-
ಪ್ರೀತಿಯ ಮಕ್ಕಳೇ, #ಗಂಧದಗುಡಿ ಚಿತ್ರದಲ್ಲಿನ ನಿಮ್ಮ ನೆಚ್ಚಿನ ದೃಶ್ಯವನ್ನು ಕುರಿತು... ನೀವು ಮಾತನಾಡುವ ಒಂದು ವಿಡಿಯೋವನ್ನು ಮಾಡಿ.
— PRK Productions (@PRK_Productions) November 7, 2022 " class="align-text-top noRightClick twitterSection" data="
Dear kids, post a video talking about your favourite moment from the film #GandhadaGudi. pic.twitter.com/PSquwFmRdj
">ಪ್ರೀತಿಯ ಮಕ್ಕಳೇ, #ಗಂಧದಗುಡಿ ಚಿತ್ರದಲ್ಲಿನ ನಿಮ್ಮ ನೆಚ್ಚಿನ ದೃಶ್ಯವನ್ನು ಕುರಿತು... ನೀವು ಮಾತನಾಡುವ ಒಂದು ವಿಡಿಯೋವನ್ನು ಮಾಡಿ.
— PRK Productions (@PRK_Productions) November 7, 2022
Dear kids, post a video talking about your favourite moment from the film #GandhadaGudi. pic.twitter.com/PSquwFmRdjಪ್ರೀತಿಯ ಮಕ್ಕಳೇ, #ಗಂಧದಗುಡಿ ಚಿತ್ರದಲ್ಲಿನ ನಿಮ್ಮ ನೆಚ್ಚಿನ ದೃಶ್ಯವನ್ನು ಕುರಿತು... ನೀವು ಮಾತನಾಡುವ ಒಂದು ವಿಡಿಯೋವನ್ನು ಮಾಡಿ.
— PRK Productions (@PRK_Productions) November 7, 2022
Dear kids, post a video talking about your favourite moment from the film #GandhadaGudi. pic.twitter.com/PSquwFmRdj
ಪಿಆರ್ಕೆ ಪ್ರೊಡಕ್ಷನ್ ಟ್ವೀಟ್: ಕರೆದಿದೆ ಗಂಧದಗುಡಿಯಿದು ಮಕ್ಕಳೇ, ಪ್ರಕೃತಿಯೊಂದಿಗೆ ನಡೆಯುವ ಬನ್ನಿರೇ, ಅಪ್ಪು ಕಂಡ ಕನಸಿನ ಜೊತೆಗೆ, ಇದುವೇ ನಿಮಗೆ ನಮ್ಮಯ ಕೊಡುಗೆ...ಎಂದು ಪಿಆರ್ಕೆ ಪ್ರೊಡಕ್ಷನ್ ಟ್ವೀಟ್ ಮಾಡಿದೆ.
ಪ್ರೀತಿಯ ಮಕ್ಕಳೇ, ಗಂಧದಗುಡಿ ಚಿತ್ರದಲ್ಲಿನ ನಿಮ್ಮ ನೆಚ್ಚಿನ ದೃಶ್ಯವನ್ನು ಕುರಿತು, ನೀವು ಮಾತನಾಡುವ ಒಂದು ವಿಡಿಯೋ ಮಾಡಿ ಹಂಚಿಕೊಳ್ಳಿ ಎಂದು ಸಹ ಪಿಆರ್ಕೆ ಪ್ರೊಡಕ್ಷನ್ ಟ್ವೀಟ್ ಮಾಡಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಅಧಿಕೃತ ಖಾತೆಗಳಾದ ಪಿಆರ್ಕೆ ಪ್ರೊಡಕ್ಷನ್, ಪಿಆರ್ಕೆ ಆಡಿಯೋ, mudskiper ಗೆ ಟ್ಯಾಗ್ ಮಾಡಿ ಹಂಚಿಕೊಳ್ಳಬೇಕು. ವಿಶೇಷ ವಿಡಿಯೋ ಮಾಡಿದವರಿಗೆ ವಿಶೇಷ ಬಹುಮಾನ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಿರ್ದೇಶಕ ಅಮೋಘ ವರ್ಷ ಅವರೊಂದಿಗೆ ಮಾತನಾಡುವ ಅವಕಾಶ ದೊರೆಯುತ್ತದೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಚಿತ್ರ ತಂಡದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: 'ಚಕ್ಡಾ ಎಕ್ಸ್‌ಪ್ರೆಸ್'ನಲ್ಲಿ ಅನುಷ್ಕಾ ಶರ್ಮಾ: ಅಂತಿಮ ಹಂತದಲ್ಲಿದೆ ಜೂಲನ್ ಬಯೋಪಿಕ್
ಅಮೋಘವರ್ಷ ನಿರ್ದೇಶನದ ಗಂಧದ ಗುಡಿ ಚಿತ್ರವನ್ನು ಅನೇಕ ಗಣ್ಯರು, ಚಿತ್ರರಂಗದವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪ್ರಕೃತಿ ಸೌಂದರ್ಯವನ್ನು ತೆರೆ ಮೇಲೆ ಅಮೋಘವಾಗಿ ತೋರಿಸಲಾಗಿದೆ ಎಂದು ಚಿತ್ರದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ.