ETV Bharat / entertainment

'ಶೀ ಈಸ್​ ಇನ್​ ಲವ್​' ಹಾಡಿಗೆ ಯಶ ಶಿವಕುಮಾರ್ ಜೊತೆ ಪ್ರಜ್ವಲ್ ದೇವರಾಜ್ ರೋಮ್ಯಾನ್ಸ್ - ಈಟಿವಿ ಭಾರತ ಕನ್ನಡ

ಪ್ರಜ್ವಲ್​ ದೇವರಾಜ್​ ನಟನೆಯ 'ಗಣ' ಸಿನಿಮಾದ 'ಶೀ ಈಸ್​ ಇನ್​ ಲವ್​' ಎಂಬ ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಿದೆ.

Gana movie she is in love song released
'ಶೀ ಇಸ್​ ಇನ್​ ಲವ್​' ಹಾಡಿಗೆ ಯಶ ಶಿವಕುಮಾರ್ ಜೊತೆ ಪ್ರಜ್ವಲ್ ದೇವರಾಜ್ ರೋಮ್ಯಾನ್ಸ್
author img

By ETV Bharat Karnataka Team

Published : Oct 29, 2023, 6:00 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಅದರಲ್ಲಿ ಬಹುನಿರೀಕ್ಷಿತ 'ಗಣ' ಸಿನಿಮಾ ಕೂಡ ಒಂದು. ಇದೀಗ ಈ ಚಿತ್ರದ ರೊಮ್ಯಾಂಟಿಕ್​ ಹಾಡೊಂದು ರಿಲೀಸ್​ ಆಗಿದೆ. 'ಶೀ ಈಸ್​ ಇನ್​ ಲವ್​' ಎಂಬ ಸುಮಧುರ ಹಾಡಿಗೆ ಜನರು ಫಿದಾ ಆಗಿದ್ದಾರೆ.

ಈ ಹಾಡನ್ನು ಗೀತರಚನೆಕಾರ ಪ್ರಮೋದ್ ಮರವಂತೆ ಬರೆದಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ನೀಡಿರುವ ಹಾಡಿಗೆ ವಿಜಯ್​ ಪ್ರಕಾಶ್​ ಧ್ವನಿಯಾಗಿದ್ದಾರೆ. ಮುರಳಿ ಮಾಸ್ಟರ್​ ನೃತ್ಯ ಸಂಯೋಜಿಸಿದ್ದು, ಪ್ರಜ್ವಲ್​ ದೇವರಾಜ್​ ಹಾಗೂ ಯಶ ಶಿವಕುಮಾರ್​ ಹೆಜ್ಜೆ ಹಾಕಿದ್ದಾರೆ. ಹಾಡು ತುಂಬಾ ಸುಂದರವಾಗಿ ಮತ್ತು ಮಧುರವಾಗಿ ಮೂಡಿಬಂದಿದೆ.

ಪ್ರಜ್ವಲ್ ದೇವರಾಜ್ ಅವರು ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಥ್ರಿಲ್ಲರ್ ಹೀಗೆ ನಾನಾ ಬಗೆಯ ಪಾತ್ರಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ ನಟನೆಯ ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹಲವು ಚಿತ್ರೀಕರಣ ಹಂತದಲ್ಲಿವೆ. ಅಲ್ಲದೇ ಮೊದಲ ಪ್ಯಾನ್​ ಇಂಡಿಯಾ ಚಿತ್ರವೊಂದಕ್ಕೆ ಗ್ರೀನ್​ ಸಿಗ್ನಲ್​ ಕೂಡ ಕೊಟ್ಟಿದ್ದಾರೆ. ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ ಗಣ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ.

ಇದನ್ನೂ ಓದಿ: ಮುಂದಿನ ವರ್ಷ ತೆರೆ ಕಾಣಲಿದೆ 'ಆರಾಮ್​ ಅರವಿಂದ್​ ಸ್ವಾಮಿ' ಚಿತ್ರ

ತೆರೆಯ ಹಿಂದಿನ ರೂವಾರಿಗಳು : ಹರಿಪ್ರಸಾದ್ ಜಕ್ಕ ಆ್ಯಕ್ಷನ್​ ಕಟ್​​ ಹೇಳಿರುವ ಸಿನಿಮಾವನ್ನು ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ನಿರ್ಮಾಣ ಮಾಡಿದ್ದಾರೆ. ಜೈ ಆನಂದ್ ಕ್ಯಾಮರಾ ವರ್ಕ್, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಎಡಿಟಿಂಗ್​, ಸತೀಶ್ ಎ. ಕಲಾ ನಿರ್ದೇಶನ ಸಿನಿಮಾಗಿದ್ದು ಡಿ.ಜೆ ಕ್ರಿಯೇಟಿವ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಯಶ ಶಿವಕುಮಾರ್​, ವೇದಿಕ ಕುಮಾರ್, ಕೃಷಿ ತಾಪಂಡ, ವಿಶಾಲ್​ ಹೆಗಡೆ, ರವಿ ಕಾಳೆ, ಸಂಪತ್​ ರಾಜ್​, ಶಿವರಾಜ್​ ಕೆ.ಆರ್​ ಪೇಟೆ, ರಮೇಶ್​ ಭಟ್​​ ಸೇರಿದಂತೆ ಹಲವರು ನಟಿಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ 80 ದಿನಗಳ ಕಾಲ ಶೂಟಿಂಗ್​​ ನಡೆದಿದೆ. ಜೂನ್​ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಂಡಿತ್ತು. ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

ಇದಲ್ಲದೇ, ಪ್ರಜ್ವಲ್ ದೇವರಾಜ್ ಮೊದಲ ಬಾರಿಗೆ ಬಿಗ್ ಬಜೆಟ್​ ಪ್ಯಾನ್ ಇಂಡಿಯಾ ಸಿನಿಮಾ "ಜಾತರೆ"ಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್​ಟೈನ್​​ಮೆಂಟ್ಸ್ ಮೂಲಕ ಗೋವರ್ಧನ್ ರೆಡ್ಡಿ ಅವರು ನಿರ್ಮಿಸಲಿರುವ ಜಾತರೆ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಮೂಡಿಬರಲಿದೆ. ಬರುವ ಜನವರಿ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.

ಇದನ್ನೂ ಓದಿ: 'ಟಗರು ಪಲ್ಯ' ಬ್ಲಾಕ್​ಬಸ್ಟರ್​; ಹ್ಯಾಟ್ರಿಕ್​ ಗೆಲುವಿನಲ್ಲಿ ಡಾಲಿ ಧನಂಜಯ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.