ETV Bharat / entertainment

'ಗೇಮ್​ ಚೇಂಜರ್​' ಸಿನಿಮಾದ ಹೊಸ ಹಾಡು ಲೀಕ್..; ಕೋಪಗೊಂಡ ರಾಮ್​ಚರಣ್​ ಫ್ಯಾನ್ಸ್​ - ಈಟಿವಿ ಭಾರತ ಕನ್ನಡ

Game Changer movie song leaked: ರಾಮ್​ಚರಣ್​ ನಟನೆಯ 'ಗೇಮ್​ ಚೇಂಜರ್​' ಚಿತ್ರದ ಹೊಸ ಹಾಡು ಲೀಕ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Game Changer movie song leaked on social media
'ಗೇಮ್​ ಚೇಂಜರ್​'
author img

By ETV Bharat Karnataka Team

Published : Sep 16, 2023, 4:14 PM IST

Updated : Sep 16, 2023, 6:03 PM IST

'ಆರ್​ಆರ್​ಆರ್'​ ಖ್ಯಾತಿಯ ರಾಮ್​ಚರಣ್ ಅವರ​ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್​ ಚೇಂಜರ್​'. ನಿರ್ದೇಶಕ ಶಂಕರ್​ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಪ್ಯಾನ್​ ಇಂಡಿಯಾ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾದಿಂದ ಇಲ್ಲಿಯವರೆಗೆ ಯಾವುದೇ ಅಪ್​ಡೇಟ್​ ಬಂದಿಲ್ಲ. ಆದರೆ ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಕೆಲವು ವಿಚಾರಗಳು ಸೋರಿಕೆಯಾಗುತ್ತಿವೆ. ಇದೀಗ 'ಗೇಮ್​ ಚೇಂಜರ್​'ನ ಹೊಸ ಹಾಡು ಲೀಕ್​ ಆಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಆದರೆ ಲೀಕ್​ ಆದ ಹಾಡು ಅಂತಿಮವಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಜಸ್ಟ್​ ಟೆಸ್ಟಿಂಗ್​ ಹಾಡಾಗಿತ್ತು. ಅಲ್ಲದೇ ಸ್ಟಾರ್​ ಗಾಯಕರು ಈ ಹಾಡಿಗೆ ಧ್ವನಿಯಾಗಲಿದ್ದಾರೆ. ಫೈನಲ್​ ಮಿಕ್ಸ್​ನಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆಯಂತೆ. ಸೌಂಡ್​ ಮಿಕ್ಸಿಂಗ್​ ನಂತರ ಈ ಹಾಡು ಮತ್ತಷ್ಟು ಚೆನ್ನಾಗಿ ಮೂಡಿಬರಲಿದೆ ಎನ್ನಲಾಗಿದೆ. ಇಲ್ಲದಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾ ತಯಾರಕರು ಹಾಡು ಲೀಕ್​ ಆದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದರು. ಏನೇ ಆಗಲಿ, ಇದು ಒರಿಜಿನಲ್​ ಹಾಡು ಅಲ್ಲ ಎಂಬುದು ಸ್ಪಷ್ಟವಾಗಿದೆ.

  • The leaked song is a very basic composing version of it. Please refain from spreading it and forming opinions based on it. The singers are also basic track singers and not final. A very inferior copy of the final copy.

    — .... (@ynakg2) September 15, 2023 " class="align-text-top noRightClick twitterSection" data=" ">

ಕೋಪಗೊಂಡ ರಾಮ್​ಚರಣ್​ ಅಭಿಮಾನಿಗಳು: ಮತ್ತೊಂದೆಡೆ, 'ಗೇಮ್​ ಚೇಂಜರ್​' ಹಾಡು ಲೀಕ್​ ಆದ ಹಿನ್ನೆಲೆ ರಾಮ್​ಚರಣ್​ ಅಭಿಮಾನಿಗಳು ಕೋಪಗೊಂಡಿದ್ದಾರೆ. ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ ಈ ರೀತಿ ಮಾಡುವುದು ನಿಜಕ್ಕೂ ಸರಿಯಲ್ಲ ಎನ್ನುತ್ತಿದ್ದಾರೆ. ದಯವಿಟ್ಟು ಈ ಹಾಡನ್ನು ಶೇರ್​ ಮಾಡುವುದನ್ನು ನಿಲ್ಲಿಸಿ ಎಂದು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ಈಗಾಗಲೇ ಈ ಹಾಡು ಸಾಕಷ್ಟು ವೈರಲ್​ ಆಗುತ್ತಿದೆ.

ಲೀಕ್​ ಆದ ಹಾಡಿಗೆ ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ. ಇಲ್ಲವಾದರೆ, ಶಂಕರ್​ ಅವರ ಸಿನಿಮಾಗಳಲ್ಲಿ ಹಾಡುಗಳ ರೇಂಜ್ ಎಷ್ಟಿದೆ ಎಂಬುದು ನಮಗೆ ಈಗಾಗಲೇ ಗೊತ್ತಿದೆ. ಅವರು ತಮ್ಮ ಚಿತ್ರದ ಹಾಡುಗಳಿಗೆ ವಿಶೇಷ ಗಮನ ನೀಡುತ್ತಾರೆ. ಅದ್ಭುತವಾದ ಸಾಹಿತ್ಯವು ಕಣ್ಣಿಗೆ ಕಟ್ಟುವಂತೆ ಇರುತ್ತದೆ. ಆದರೆ ಸದ್ಯ ಲೀಕ್​ ಆದ 'ಗೇಮ್​ ಚೇಂಜರ್​'ನ ಸಾಹಿತ್ಯ ಚೆನ್ನಾಗಿಲ್ಲ ಎಂಬ ಕಮೆಂಟ್​ಗಳು ಬರುತ್ತಿವೆ. ತಮನ್​​ ಬೀಟ್​ ಕೂಡ ಚೆನ್ನಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಹಾಡಿನಲ್ಲಿ ಚಿತ್ರತಂಡ ಏನಾದರೂ ಬದಲಾವಣೆ ಮಾಡುತ್ತಾರೆಯೇ? ಎಂದು ಕಾದು ನೋಡಬೇಕಿದೆ.​

ಚಿತ್ರತಂಡ ಹೀಗಿದೆ.. 'ಗೇಮ್​ ಚೇಂಜರ್​' ಸಿನಿಮಾವನ್ನು ಖ್ಯಾತ ನಿರ್ಮಾಪಕ ದಿಲ್​ ರಾಜು ಅದ್ಧೂರಿ ಬಜೆಟ್​ನಲ್ಲಿ ನಿರ್ಮಿಸುತ್ತಿದ್ದಾರೆ. ಆಕ್ಷನ್​ ಎಂಟರ್​ಟೈನ್​ಮೆಂಟ್​ ಚಿತ್ರವಾಗಿ ಇದು ತಯಾರಾಗುತ್ತಿದೆ. ಸಿನಿಮಾದಲ್ಲಿ ರಾಮ್​ಚರಣ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್​ಚರಣ್​ಗೆ ನಾಯಕಿಯಾಗಿ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ತಮನ್​ ಸಂಗೀತಾ ಸಂಯೋಜನೆ ಇರಲಿದೆ. ಹಿರಿಯ ನಟ ಎಸ್​.ಜೆ ಸೂರ್ಯ, ಅಂಜಲಿ, ಶ್ರೀಕಾಂತ್​, ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್​ ನಂತರ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಫ್ರಾನ್ಸ್​ ಪ್ರವಾಸದಲ್ಲಿ ರಾಮ್​ಚರಣ್​ ದಂಪತಿ; ಮುಂದಿನ ವಾರ 'ಗೇಮ್​ ಚೇಂಜರ್'​ ಶೂಟಿಂಗ್​ ಪುನಾರಂಭ

Last Updated : Sep 16, 2023, 6:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.