ETV Bharat / entertainment

ಭಟ್ಟರು ಗಾಳಿಪಟ 2 ಅಡ್ಡದಿಂದ ಹೊರಬಂತು ಮತ್ತೊಂದು ಸುಂದರ ಹಾಡು!

author img

By

Published : Jul 25, 2022, 2:40 PM IST

ಗೋಲ್ಡನ್‌ಸ್ಟಾರ್‌ ಗಣೇಶ್‌ ಹಾಗೂ ನಿರ್ದೇಶಕ ಯೋಗರಾಜ್‌ ಭಟ್‌ ಕಾಂಬಿನೇಶನಲ್ಲಿ ಬರುತ್ತಿರುವ ಗಾಳಿಪಟ 2 ಚಿತ್ರದ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಈಗ ಈ ಚಿತ್ರದ ಎರಡನೇ ಹಾಡು ರಿಲೀಸ್​ ಆಗಿದೆ.

Galipata 2 movie second song release, Galipata 2 movie release date, Galipata 2 movie songs, Galipata 2 movie jukebox, ಗಾಳಿಪಟ 2 ಚಿತ್ರದ ಎರಡನೇ ಹಾಡು ಬಿಡುಗಡೆ, ಗಾಳಿಪಟ 2 ಚಿತ್ರ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು, ಗಾಳಿಪಟ 2 ಚಿತ್ರದ ಜೂಕ್ ಬಾಕ್ಸ್,
ಭಟ್ಟರು ಗಾಳಿಪಟ 2 ಅಡ್ಡದಿಂದ ಹೊರಬಂತು ಮತ್ತೊಂದು ಸುಂದರ ಹಾಡು

ಗಣೇಶ್ ಜೊತೆಗೆ ದಿಗಂತ್ ಹಾಗೂ ಪವನ್ ಕುಮಾರ್ ನಟನೆಯ ಗಾಳಿಪಟ 2 ಚಿತ್ರ, ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತಿದೆ. ಇದೀಗ ಪವನ್ ಕುಮಾರ್ ಹಾಗು ಶರ್ಮಿಳಾ ಮಂಡ್ರೆ ಕಾಂಬಿನೇಷನ್​ ರೊಮ್ಯಾಂಟಿಕ್ ಹಾಡೊಂದು ಅನಾವರಣಗೊಂಡಿದೆ.

ರೊಮ್ಯಾಂಟಿಕ್ ಗೀತೆಗಳ ಗುರು, ಜಯಂತ ಕಾಯ್ಕಿಣಿ ಬರೆದಿರುವ "ನೀನು ಬಗೆಹರಿಯದ ಹಾಡು" ಎಂಬ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು, ಖ್ಯಾತ ಗಾಯಕ ನಿಹಾಲ್ ತಾವ್ರೋ ಹಾಡಿದ್ದಾರೆ. ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕುದುರೆಮುಖದ ಸುಂದರ ಪರಿಸರದಲ್ಲಿ ಈ ಹಾಡಿನ‌ ಚಿತ್ರೀಕರಣ ಮಾಡಿದ್ದು, ಕೊರಿಯೋಗ್ರಾಪರ್ ಧನು ಈ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಹೀಗೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದ್ದಾರೆ. ಇನ್ನು ಪ್ರಖ್ಯಾತ ನಿರ್ಮಾಪಕ, ರಮೇಶ್‌ ರೆಡ್ಡಿ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಜಿಕ್ ಇದ್ದು, ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಗಾಳಿಪಟ 2 ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸದ್ಯದಲ್ಲೇ ಟೀಸರ್, ಟ್ರೇಲರ್ ಹಾಗೂ ಇನ್ನೂ ಎರಡು ಹಾಡುಗಳ ಬಿಡುಗಡೆಯಾಗಲಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ. ಮತ್ತೊಂದು ಕಡೆ ಈ ಚಿತ್ರ ಬಿಡುಗಡೆಗೆ ಅಭಿಮಾನಿ ಸಮೂಹ ಕಾತರದಿಂದ ಕಾಯುತ್ತಿದ್ದಾರೆ.

ಓದಿ: ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೂ ಮುನ್ನ ಗಾಳಿಪಟ-2 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.