ETV Bharat / entertainment

ಮುಂಬೈನಲ್ಲಿ ಕನ್ನಡಾಭಿಮಾನಿಗಳು ಇದ್ದಾರೆ: ಗಾಳಿಪಟ ನಟಿ ವೈಭವಿ ಶಾಂಡಿಲ್ಯ - Galipata 2 film success

ಮುಂಬೈನಲ್ಲಿ ಕನ್ನಡಾಭಿಮಾನಿಗಳು ಇದ್ದಾರೆ. ನನ್ನ ಸ್ನೇಹಿತರಿಗೆ ಕನ್ನಡ ಅರ್ಥವಾಗದಿದ್ರೂ ಇಂಗ್ಲೀಷ್ ಸಬ್ ಟೈಟಲ್ ಮೂಲಕ ಸಿನಿಮಾ ನೋಡಿ ಮೆಚ್ಚಿಕೊಂಡರು ಎಂದು ಗಾಳಿಪಟ ನಟಿ ವೈಭವಿ ಶಾಂಡಿಲ್ಯ ಅಭಿಪ್ರಾಯ ಹಂಚಿಕೊಂಡರು.

Galipata actress Vaibhavi Shandilya opinion on Kannada
ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಗಾಳಿಪಟ 2 ಚಿತ್ರತಂಡ
author img

By

Published : Aug 18, 2022, 6:01 PM IST

ಗಣೇಶ್, ಯೋಗರಾಜ್​ ಭಟ್ ಕಾಂಬಿನೇಷನ್​ನ ಗಾಳಿಪಟ 2 ಸಿನಿಮಾ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ಹೋಟೆಲ್​​ನಲ್ಲಿ ಚಿತ್ರದ ಜರ್ನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದೆ.

ಗಾಳಿಪಟ ನಟಿ ವೈಭವಿ ಶಾಂಡಿಲ್ಯ ಮಾತನಾಡಿ, ಕನ್ನಡ ಸಿನಿಮಾಗಳನ್ನು ಮುಂಬೈನಲ್ಲಿ ನೋಡುವ ಪ್ರೇಕ್ಷಕರು ಇದ್ದಾರೆ. ನನ್ನ ಸ್ನೇಹಿತರಿಗೆ ಕನ್ನಡ ಅರ್ಥವಾಗದಿದ್ರೂ ಇಂಗ್ಲೀಷ್ ಸಬ್ ಟೈಟಲ್ ಮೂಲಕ ಸಿನಿಮಾ ನೋಡಿ ಮೆಚ್ಚಿಕೊಂಡರು. ಅದರಲ್ಲೂ ಆಸ್ಪತ್ರೆಯಲ್ಲಿ ಗಣೇಶ್ ಹಾಗು ತಾಯಿ ಸೆಂಟಿಮೆಂಟ್ ಸೀನ್ ನಿಜಕ್ಕೂ ಎಲ್ಲರ ಮನ ಮುಟ್ಟಿದೆ. ಗಣೇಶ್ ಸರ್ ಆ್ಯಕ್ಟಿಂಗ್ ಸೂಪರ್. ಅಷ್ಟೇ ಅಲ್ಲ, ಗಾಳಿಪಟ 2 ಸಿನಿಮಾ ನೋಡಿದ ಬಾಂಬೆ ಜನರು ನನ್ನನ್ನು ಶ್ವೇತಾ ಅಂತಾ ಗುರುತಿಸಿದ್ದು ತುಂಬಾನೇ ಖುಷಿಯಾಗಿದೆ. ಮುಂಬೈನಲ್ಲಿ ಕನ್ನಡ ಸಿನಿಮಾಗಳು ಹೆಚ್ಚಾಗಿ ಸದ್ದು ಮಾಡುತ್ತಿವೆ ಅಂತಾ ಮುಂಬೈ ಬೆಡಗಿ ವೈಭವಿ ಶಾಂಡಿಲ್ಯ ಹರ್ಷ ವ್ಯಕ್ತಪಡಿಸಿದರು.

ಗಾಳಿಪಟ 2 ಚಿತ್ರತಂಡದಿಂದ ಮಾಹಿತಿ..

ಇದನ್ನೂ ಓದಿ: ಭಟ್ರೇ, ನೀವು ನನಗಾಗಿ ಬರೆಯುವ ಸ್ಕ್ರಿಪ್ಟ್​ಗೆ ಸದಾ ಋಣಿ: ನಟ ಗಣೇಶ್

ಟೀಚರ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿರುವ ನಟಿ ಶರ್ಮಿಳಾ ಮಾಂಡ್ರೆ, ನಾನು ಈ ಸಿನಿಮಾದ ಸಕ್ಸಸ್​ನಲ್ಲಿ ಭಾಗಿಯಾಗಿರೋದು ನನ್ನ ಅದೃಷ್ಟ. ಯೋಗರಾಜ್ ಭಟ್ ಸರ್, ನನಗೆ ಪಾತ್ರ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನನ್ನ ಪವನ್ ಕುಮಾರ್ ಜೋಡಿ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.