ETV Bharat / entertainment

ಭಟ್ರೇ, ನೀವು ನನಗಾಗಿ ಬರೆಯುವ ಸ್ಕ್ರಿಪ್ಟ್​ಗೆ ಸದಾ ಋಣಿ: ನಟ ಗಣೇಶ್ - ganesh compliments on Yogaraj Bhat

ಯೋಗರಾಜ್ ಭಟ್ ಅವರು ನಾನು ಕಂಡ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿ. ನೀವು ನನಗಾಗಿ ಬರೆಯುವ ಸ್ಕ್ರಿಪ್ಟ್​ಗೆ ನಾನು ಸದಾ ಋಣಿ ಎಂದು ನಟ ಗಣೇಶ್ ಅಭಿನಂದಿಸಿದ್ದಾರೆ.

actor ganesh
ನಟ ಗಣೇಶ್
author img

By

Published : Aug 18, 2022, 3:41 PM IST

ಗಾಳಿಪಟ 2 ಸಿನಿಮಾ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ಹೋಟೆಲ್​​ನಲ್ಲಿ ಚಿತ್ರದ ಜರ್ನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದೆ. ನಟ, ನಿರ್ದೇಶಕ ಪವನ್ ಕುಮಾರ್ ಮಾತನಾಡಿ, ಗಾಳಿಪಟ 2 ಸಿನಿಮಾ ಶೂಟಿಂಗ್​ಗೆ ಕುದುರೆಮುಖದಲ್ಲಿದ್ದೆವು. ಆಗ ಗಣೇಶ್ ಬಂದು ಈ ಸಿನಿಮಾದ ಕಥೆ ಡಿಫ್ರೆಂಟ್ ಆಗಿದೆ, ಈ ಸಿನಿಮಾ ಹಿಟ್ ಆಗುತ್ತೆ ಅಂತಾ ಹೇಳಿದ್ದರು. ನಾನು ನಂಬಿರಲಿಲ್ಲ, ಇವತ್ತು ಗಣೇಶ್ ಮಾತಿನಂತೆ ಗಾಳಿಪಟ 2 ಸಿನಿಮಾ ಹಿಟ್ ಆಗಿದ್ದು, ತುಂಬಾನೇ ಖುಷಿಯಾಗುತ್ತಿದೆ ಅಂದರು.

ನಾನು ಡೈರೆಕ್ಷನ್ ಹಾಗು ಸ್ಕ್ರಿಪ್ಟ್ ಬರೆಯೋದನ್ನು ಕಲಿತಿದ್ದು ನಿರ್ದೇಶಕ ಯೋಗರಾಜ್ ಭಟ್ ಸರ್ ಅನ್ನು ನೋಡಿ. ಅನಂತ್​ ಸರ್ ಕಜಾಕಿಸ್ತಾನಕ್ಕೆ ಬಂದಿದ್ದರೆನ್ನುವ ಹಾಗೆ ಶೂಟಿಂಗ್ ಮಾಡಿರೋದನ್ನು ನೋಡಿದ್ರೆ ಯೋಗರಾಜ್ ಭಟ್ ಟೆಕ್ನಿಕಲಿ ಎಷ್ಟು ಮುಂದಿದ್ದಾರೆಂದು ಗೊತ್ತಾಗುತ್ತದೆ. ನಿಜ ಹೇಳಬೇಕೆಂದ್ರೆ ಅನಂತ್ ನಾಗ್ ಕಜಾಕಿಸ್ತಾನಕ್ಕೆ ಬಂದೇ ಇಲ್ಲ. ಯಾವ ಹಾಲಿವುಡ್ ಸಿನಿಮಾ ಟೆಕ್ನಾಲಜಿಗೂ ಕಡಿಮೆ ಇಲ್ಲ ಎನ್ನವ ರೀತಿ ಶೂಟ್ ಮಾಡಲಾಗಿದೆ. ಅವರು ಯುವ ನಿರ್ದೇಶಕರಿಗೆ ಮಾದರಿ ಎಂದು ತಿಳಿಸಿದರು.

ಗಾಳಿಪಟ 2 ಸಿನಿಮಾ ಚಿತ್ರತಂಡದಿಂದ ಮಾಹಿತಿ..

ನಟ ಗಣೇಶ್ ಮಾತನಾಡಿ, ಯೋಗರಾಜ್ ಭಟ್ ನಾನು ಕಂಡ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿ. ನೀವು ನನಗಾಗಿ ಬರೆಯುವ ಸ್ಕ್ರಿಪ್ಟ್​ಗೆ ನಾನು ಸದಾ ಋಣಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗಣೇಶ್ ಅವರು ಯೋಗರಾಜ್ ಭಟ್ ಬಗೆಗಿನ ಕೆಲ ಹಾಸ್ಯಾಸ್ಪದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ನಾನು ಸ್ಕ್ರಿಪ್ಟ್ ಅರ್ಥ ಆಗದೇ ರಾತ್ರಿ 12 ಗಂಟೆಗೆ ಕರೆ ಮಾಡಿ ಕೇಳಿದ್ದೆ. ಬಳಿಕ ಅನಂತ್ ನಾಗ್ ಅವರು ಸ್ಕ್ರಿಪ್ಟ್​ನಲ್ಲಿ ಬದಲಾವಣೆ ಮಾಡಿದ್ದರು. ಜಯಂತ್ ಸರ್ ಹೇಳಿದ ಹಾಗೇ ಭಟ್ರದ್ದು ತಿಕ್ಲುತನದ ವ್ಯಕ್ತಿತ್ವ. ಒಮ್ಮೆ ಅವರ ಹೆಂಡತಿಯ ಜೀನ್ಸ್ ಹಾಕಿಕೊಂಡು ಬಂದಿದ್ದರು. ಕೆಲವೊಮ್ಮೆ ಒಂದು ಕಾಲಿಗೆ ಚಪ್ಪಲಿ, ಮತ್ತೊಂದು ಕಾಲಿಗೆ ಶೂ ಹಾಕಿಕೊಂಡು ಬಂದಿದ್ದಾರೆ, ಇನ್ನೊಮ್ಮೆ ಒಂದೇ ಹೆಂಡತಿ ಜೊತೆ ಇದ್ದೀಯಲ್ಲಾ ನಿನಗೆ ಬೇಜಾರು ಆಗೋಲ್ವಾ ಅಂತಾ ಕೇಳಿದ್ದರು. ಇಷ್ಟೆಲ್ಲಾ ಹುಚ್ಚುತನ ಇರುವ ಭಟ್ರು ಸಿನಿಮಾದ ವಿಷ್ಯದಲ್ಲಿ ಎತ್ತಿದ ಕೈ. ಭಟ್ರ ಯೋಚನಾ ಲಹರಿಗೆ ಮೆಚ್ಚಬೇಕು' ಎಂದು ಅವರನ್ನು ಗಣೇಶ ಗುಣಗಾನ ಮಾಡಿದ್ರು.

ಇದನ್ನೂ ಓದಿ: ಯಶಸ್ಸಿನ ಹಾದಿಯಲ್ಲಿ ಗಾಳಿಪಟ 2 ಸಿನಿಮಾ.. ಸಂತಸ ಹಂಚಿಕೊಂಡ ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.