ETV Bharat / entertainment

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೂ ಮುನ್ನ ಗಾಳಿಪಟ-2 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್ - ಗಾಳಿಪಟ 2 ಚಿತ್ರತಂಡದಿಂದ ನಟ ಗಣೇಶ್​ಗೆ ಸ್ಪೆಷಲ್ ಗಿಫ್ಟ್​

ಗಾಳಿಪಟ- 2 ಚಿತ್ರದ 'ನಾನಾಡದ ಮಾತೆಲ್ಲವ' ಎಂಬ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

ಗಾಳಿಪಟ -2
ಗಾಳಿಪಟ -2
author img

By

Published : Jun 29, 2022, 10:40 PM IST

Updated : Jun 30, 2022, 2:32 PM IST

ಕನ್ನಡ ಚಿತ್ರರಂಗದಲ್ಲಿ 2008ರಲ್ಲಿ ಹೊಸ ಟ್ರೆಂಡ್ ಕ್ರಿಯೇಟ್​ ಮಾಡಿದ ಸಿನಿಮಾ ಗಾಳಿಪಟ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್​​ನಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಲೆಕ್ಷನ್ ಮಾಡಿತ್ತು. ಇದೀಗ ಗಾಳಿಪಟ 2 ಸಿನಿಮಾ ರಿಲೀಸ್​ ಆಗುತ್ತಿದ್ದು, ನಟ ಗಣೇಶ್, ನಿರ್ದೇಶಕ ಯೋಗರಾಜ್ ಭಟ್ ಜೋಡಿ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಲು ಸಜ್ಜಾಗಿದೆ.

ಜುಲೈ 2ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಹೀಗಾಗಿ, ನಿನ್ನೆಯಷ್ಟೇ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆಯುವ ಮುಖಾಂತರ ನಾನು ಈ ವರ್ಷ ಮನೆಯಲ್ಲಿ ಇರುವುದಿಲ್ಲ. ಅದಕ್ಕಾಗಿ ಅಭಿಮಾನಿಗಳು ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಗಾಳಿಪಟ-2 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ಚಿತ್ರತಂಡದಿಂದ ವಿಶೇಷ ಉಡುಗೊರೆ: ಈ ಹಿನ್ನೆಲೆಯಲ್ಲಿ ಗಾಳಿಪಟ 2 ಚಿತ್ರತಂಡ ಗಣೇಶ್ ಬರ್ತ್ ಡೇಗೂ ಎರಡು ದಿನ ಮುಂಚಿತವಾಗಿ ಸ್ಪೆಷಲ್ ಉಡುಗೊರೆ ನೀಡಲಿದೆ. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಮೇಶ್ ರೆಡ್ಡಿ, ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೆ, ಗಾಳಿಪಟ- 2 ಚಿತ್ರದ 'ನಾನಾಡದ ಮಾತೆಲ್ಲವ' ಎಂಬ ರೊಮ್ಯಾಂಟಿಕ್ ಹಾಡಿನ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದರು.

ಈ ಹಾಡಿನಲ್ಲಿ ಗಣೇಶ್ ಹಾಗೂ ವೈಭವಿ ಶಾಂಡಿಲ್ಯ ಕಾಣಿಸಿಕೊಂಡಿದ್ದು, ರೊಮ್ಯಾಂಟಿಕ್ ಗೀತೆಗಳ ಗುರು ಜಯಂತ್ ಕಾಯ್ಕಿಣಿ ಹಾಡು ಬರೆದಿದ್ದಾರೆ. ಸೋನು ನಿಗಮ್ ಹಾಡಿದ್ದು, ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದಾರೆ.

ನಟ ಗಣೇಶ್​ ಅವರು ಮಾತನಾಡಿರುವುದು

ಈ ಹಾಡಿನ ವಿಶೇಷತೆ ಬಗ್ಗೆ ಮಾತನಾಡಿದ ಗಣೇಶ್, ಕುದುರೆಮುಖದಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿತ್ತು. ಭಟ್ರು ಹಾಗು ಜಯಂತ್ ಆಸೆಯಂತೆ ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೀನಿ. ಈ ಹಾಡಿನಲ್ಲಿ ಇಸ್ರ್ತಿ ಪೆಟ್ಟಿಗೆ, ಆ ಪುಸ್ತಕ, ಗಾಳಿಯಲ್ಲಿ ತೇಲುವ ನೀರಿನ ಕೊಳವೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಇದನ್ನೂ ಓದಿ: ಬನಾರಸ್ ಸಿನಿಮಾದ ಹಾಡಿನ ಗುಂಗಲ್ಲಿ ಜಮೀರ್​ ಪುತ್ರ ಝೈದ್ ಖಾನ್

Last Updated : Jun 30, 2022, 2:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.