ETV Bharat / entertainment

ಬಿಡುಗಡೆಗೂ ಮುಂಚೆ ಸಖತ್ ಸೌಂಡ್ ಮಾಡುತ್ತಿದ್ದಾರೆ ಗಾಳಿಪಟ 2 ಪಂಟರ್ಸ್ - ಬಿಡುಗಡೆಗೂ ಮುಂಚೆ ಸಖತ್ ಸೌಂಡ್ ಮಾಡುತ್ತಿದ್ದಾರೆ ಗಾಳಿಪಟ 2 ಪಂಟರ್ಸ್

ಗಾಳಿ ಪಟ 2 ಸಿನಿಮಾದ ನಾಯಕರುಗಳಾದ ಗಣೇಶ್​, ದಿಗಂತ್​ ಮತ್ತು ಪವನ್​ ಅವರ ಪಾತ್ರ ಪರಿಚಯಿಸುವ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆಯುತ್ತಿದೆ.

gaalipata-2
ಗಾಳಿಪಟ 2
author img

By

Published : Jul 29, 2022, 10:54 PM IST

ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಚಿತ್ರ ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್‌ ಕಾಂಬಿನೇಶನ್‌ನಲ್ಲಿ ಬರ್ತೀರೋ ಬಹು ನಿರೀಕ್ಷಿತ ಚಿತ್ರ. ಈ ಹಿಂದೆ ಬಿಡುಗಡೆಯಾಗಿದ್ದ ಗಾಳಿಪಟ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಇದೇ ಜೋಡಿ ಮತ್ತೊಮ್ಮೆ ಜೊತೆಯಾಗಿ ಗಾಳಿಪಟ 2 ಪ್ರೇಕ್ಷಕರನ್ನ ನಕ್ಕು ನಲಿಸಲು ಸಜ್ಜಾಗಿದ್ದಾರೆ.

ಸದ್ಯಕ್ಕೆ ಗಾಳಿಪಟ 2 ಚಿತ್ರತಂಡ, ತಮ್ಮ ಸಿನಿಮಾದ ಪ್ರಚಾರದ ವೈಖರಿಯನ್ನು ಬಹಳ ಡಿಫ್ರೆಂಟ್ ಆಗಿ ಮಾಡುತ್ತಿದೆ. ಈಗಾಗ್ಲೇ ಎಕ್ಸಾಂ ಹಾಗೂ ದೆವ್ಲೇ ದೆವ್ಲೇ ಹಾಡುಗಳು ಸೂಪರ್ ಹಿಟ್ ಆಗಿದೆ. ಇದರ ಬೆನ್ನಲ್ಲೇ ಈ ಚಿತ್ರದಲ್ಲಿ ಬರುವ ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಪಾತ್ರಗಳ ಪರಿಚಯಕ್ಕಾಗಿ ಚಿತ್ರತಂಡ ಬಹಳ ವಿನೂತನವಾಗಿ ಟೀಸರ್ ಕಟ್ ಮಾಡಿ ಗಮನ ಸೆಳೆಯಿತ್ತಿದೆ.

ಗಾಳಿಪಟ 2 ಚಿತ್ರದಲ್ಲಿ ಗಣೇಶ್, ತಮ್ಮ ನಿಜವಾದ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಪಾತ್ರದ ಕ್ಯಾರೆಕ್ಟರ್ ಟೀಸರ್​ನ್ನ ರಿಯಲ್ ಸ್ಟಾರ್ ಉಪೇಂದ್ರ, ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಗಣೇಶ್ ಈ ಚಿತ್ರದಲ್ಲಿ ಕನ್ನಡ ಓದುವುದಕ್ಕೆ ಬಾರದೇ ಇರುವ ಹುಡುಗನ ಪಾತ್ರ ಇದಾಗಿದೆ. ಇದರಲ್ಲಿ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಡ್ರಾಮ ನೋಡುಗರಲ್ಲಿ ಕುತೂಹಲ ಹುಟ್ಟಿಸಿದೆ. ಗಣೇಶ್ ಜೋಡಿಯಾಗಿ ವೈಭವಿ ಶಾಂಡಿಲ್ಯ ರೊಮ್ಯಾನ್ಸ್ ಮಾಡಿದ್ದಾರೆ.

ಗಣೇಶ್​ ಪಾತ್ರ ಪರಿಚಯಿಸುವ ಟೀಸರ್​

ಗಣಿ ಬಳಿಕ ದೂದ್ ಪೇಡಾ ದಿಗಂತ್ ಪಾತ್ರ ಕೂಡ ವಿಭಿನ್ನವಾಗಿದೆ. ತಲೆ ಬುಡದಲ್ಲಿ ಉದ್ದವಾದ ಸಿಕ್ಕ ಜಡೆ ಬಿಟ್ಟುಕೊಂಡು. ಲವ್ ಸ್ಟೋರಿ ಫೇಲರ್ ಆಗಿರುವ ಸನ್ಯಾಸಿಯಾಗಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಹಾಕಿರುವ ಕಾಸ್ಟೂಮ್​​ನಿಂದ ಹಿಡಿದು, ಡೈಲಾಗ್​ವರೆಗೂ ಸಖತ್ ಇಂಪ್ರೇಸ್ ಆಗಿ ಕಾಣುತ್ತೆ. ದಿಗಂತ್ ಜೋಡಿಯಾಗಿ ಸಂಯುಕ್ತಾ ಮೆನನ್ ನಟಿಸಿದ್ದಾರೆ.

ದೂದ್​ ಪೇಡ ದಿಗಂತ್​ ಪಾತ್ರ ಪರಿಚಯಿಸುವ ಟೀಸರ್

ಇವರಿಬ್ಬರ ಬಳಿಕ ಪವನ್ ಕುಮಾರ್ ಅಖಂಡ ಬ್ರಹ್ಮಚಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬ್ರಹ್ಮಚಾರಿಯ ಜೋಡಿಯಾಗಿ ಶರ್ಮಿಳಾ ಮಾಂಡ್ರೆ ಸ್ವಲ್ಪ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಗಣಿ, ದಿಗ್ಗಿ ಹಾಗೂ ಪವನ್ ಕುಮಾರ್ ಕಾಣಿಸಿಕೊಂಡಿರುವ ಕ್ಯಾರೆಕ್ಟರ್ ಟೀಸರ್​ಗಳು ನೋಡುಗರನ್ನ ಬೋಲ್ಡ್ ಮಾಡುವುದರ ಜೊತೆಗೆ. ಗಾಳಿಪಟ 2 ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಯನ್ನ ಹೆಚ್ಚು ಮಾಡಿದೆ.

ಪವನ್​ ಪಾತ್ರ ಪರಿಚಯಿಸುವ ಟೀಸರ್

ಈ ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ಅಲ್ಲದೇ ರಂಗಾಯಣ ರಘು, ಅನಂತ್‌ ನಾಗ್‌, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್ ಹೀಗೆ ದೊಡ್ಡ ತಾರಗಣವಿದೆ. ಗಾಳಿಪಟ 2 ಚಿತ್ರದ ಟ್ರೈಲರ್ ಇದೇ 31ಕ್ಕೆ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ, ಅರ್ಜುನ್ ಜನ್ಯ ಸಂಗೀತ ಇದೆ. ರಮೇಶ್ ರೆಡ್ಡಿ ಅವರ ಸೂರಜ್ ಪ್ರೊಡಕ್ಷನ್ಸ್ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 12ಕ್ಕೆ ಗಾಳಿಪಟ 2ಸಿನಿಮಾ ಬಿಳ್ಳಿ ಪರದೆಯಲ್ಲಿ ಹಾರಾಟ ಮಾಡಲಿದೆ.

ಇದನ್ನೂ ಓದಿ : ಮದುವೆಯಾದ ಬಳಿಕ ನಾಗ ಚೈತನ್ಯ ಜೊತೆ ಇದ್ದ ಮನೆಯನ್ನೇ ಖರೀದಿಸಿದ ಸಮಂತಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.