ETV Bharat / entertainment

ಪ್ರೇಕ್ಷಕರಿಗೆ ಮನೋರಂಜನೆಯ 'ಫುಲ್ ಮೀಲ್ಸ್' ನೀಡಲು ಬರುತ್ತಿದ್ದಾರೆ ಲಿಖಿತ್ ಶೆಟ್ಟಿ

ನಟ ಲಿಖಿತ್ ಶೆಟ್ಟಿ ಅಭಿನಯದ ಫುಲ್ ಮೀಲ್ಸ್ ಸಿನಿಮಾ ಶೂಟಿಂಗ್​ ಬೆಂಗಳೂರಿನಲ್ಲಿ ನಡೆಯುತ್ತಿದೆ.

Full Meals movie Shooting
ಫುಲ್ ಮೀಲ್ಸ್ ಶೂಟಿಂಗ್
author img

By

Published : Feb 7, 2023, 7:57 PM IST

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ವಿಭಿನ್ನ ಕಥೆಗಳಿಗೆ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಉತ್ತಮ ಕಥಾಹಂದರದ ಜೊತೆಗೆ ಮೇಕಿಂಗ್​ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. 2022ರಲ್ಲಿ ಸ್ಯಾಂಡಲ್​ವುಡ್​ ಅದ್ಭುತ ಯಶಸ್ಸು ಸಾಧಿಸಿದ್ದು, ಅದೇ ಹಾದಿಯಲ್ಲಿ ಸಾಗಲು ಪ್ರತೀ ಚಿತ್ರತಂಡಗಳು ಪೂರ್ಣ ಪ್ರಮಾಣದಲ್ಲಿ ಶ್ರಮ ಹಾಕುತ್ತಿದೆ. ಇದೀಗ ಫುಲ್ ಮೀಲ್ಸ್ ಟೈಟಲ್​ನ ಚಿತ್ರವೊಂದರ ಶೂಟಿಂಗ್​ ಭರದಿಂದ ಸಾಗಿದೆ.

Full Meals movie Shooting
ಫುಲ್ ಮೀಲ್ಸ್ ಚಿತ್ರತಂಡ

ಫುಲ್ ಮೀಲ್ಸ್ ಸಿನಿಮಾ: ಸಂಕಷ್ಟಕರ ಗಣಪತಿ ಹಾಗೂ ಫ್ಯಾಮಿಲಿ ಪ್ಯಾಕ್ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಲಿಖಿತ್ ಶೆಟ್ಟಿ. ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರದ ಬಳಿಕ ಲಿಖಿತ್ ಶೆಟ್ಟಿ ನಾಯಕರಾಗಿ ಅಭಿನಯಿಸುತ್ತಿರುವ ಚಿತ್ರ ಫುಲ್ ಮೀಲ್ಸ್.

ಫುಲ್ ಮೀಲ್ಸ್ ಶೂಟಿಂಗ್: ಬೆಂಗಳೂರಿನಲ್ಲಿ ಸೈಲೆಂಟ್ ಆಗಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ನಟ ಲಿಖಿತ್ ಶೆಟ್ಟಿ, ನಾಯಕಿ ಖುಷಿ ರವಿ, ರಂಗಾಯಣ ರಘು, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ಗಣೇಶ್ ರಾವ್, ವಿಜಯ್ ಚೆಂಡೂರ್ ಈ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ಎನ್ ವಿನಾಯಕ ಈ ಫುಲ್ ಮೀಲ್ಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಮನೋರಂಜನೆಯ "ಫುಲ್ ಮೀಲ್ಸ್": ಫುಲ್ ಮೀಲ್ಸ್ ಚಿತ್ರದ ಬಗ್ಗೆ ಮಾತನಾಡಿದ ನಟ ಲಿಖಿತ್ ಶೆಟ್ಟಿ, ನಾನು ಈ ಚಿತ್ರದಲ್ಲಿ ಫೋಟೋಗ್ರಾಫರ್ ಪಾತ್ರ ವಹಿಸಿದ್ದೇನೆ. ಮದುವೆ ಮನೆಗೆ ಫೋಟೋ ತೆಗೆಯಲು ಹೋದಾಗ ಮದುಮಗಳ ಮೇಲೆ ಪ್ರೀತಿ ಆಗುತ್ತದೆ. ಆನಂತರ ಏನಾಗುತ್ತದೆ? ಎಂಬುದನ್ನು ಚಿತ್ತದಲ್ಲೇ ನೋಡಬೇಕು. ಒಟ್ಟಿನಲ್ಲಿ ನಾವು ಇಡೀ ತಂಡ ಸೇರಿ ಪ್ರೇಕ್ಷಕರಿಗೆ ಮನೋರಂಜನೆಯ "ಫುಲ್ ಮೀಲ್ಸ್" ನೀಡಲಿದ್ದೇವೆ ಎಂದರು.

ಇನ್ನೂ ನಟ ಲಿಖಿತ್ ಶೆಟ್ಟಿ ಅವರಿಗೆ ಖುಷಿ ರವಿ ಹಾಗೂ ತೇಜಸ್ವಿನಿ ಶರ್ಮ ಜೋಡಿ ಆಗಿದ್ದಾರೆ. ಇವರ ಜೊತೆಗೆ ಹಿರಿಯ ನಟ ರಂಗಾಯಣ ರಘು, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ಗಣೇಶ್ ರಾವ್, ವಿಜಯ್ ಚೆಂಡೂರ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಆರ್​ ಚಂದ್ರು ನಿರ್ದೇಶಕನಾಗಲಿಲ್ಲ ಅಂದಿದ್ರೆ ಏನಾಗುತ್ತಿದ್ದರು?.. ಅವರೇ ಹೇಳಿಕೊಂಡಿದ್ದು ಹೀಗೆ!

ನಿರ್ದೇಶಕ ಎನ್ ವಿನಾಯಕ ಮಾತನಾಡಿ ಇದೊಂದು ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ನನ್ನ ಮೊದಲ ನಿರ್ದೇಶನದ ಚಿತ್ರ ಕೂಡ ಹೌದು. ಲಿಖಿತ್ ಶೆಟ್ಟಿ ನಾಯಕರಾಗಿ, ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಅನೇಕ ಅನುಭವಿ ಕಲಾವಿದರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ ಎಂದು ತಿಳಿಸಿದರು.

ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಗುರುಕಿರಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಹರೀಶ್ ರಾಜಣ್ಣ ಫುಲ್ ಮೀಲ್ಸ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯ ಬೆಂಗಳೂರಿನ ಅರಮನೆಯಲ್ಲಿ ಚಿತ್ರೀಕರಣ ಮಾಡುತ್ತಿರುವ ಫುಲ್ ಮೀಲ್ಸ್ ಚಿತ್ರತಂಡ ರಾಮನಗರ ಹಾಗೂ ಮಂಗಳೂರಿನಲ್ಲಿ ಮುಂದಿನ ಚಿತ್ರೀಕರಣ ಮಾಡಲು ನಿರ್ದೇಶಕ ಎನ್ ವಿನಾಯಕ ಪ್ಲಾನ್ ಮಾಡಿದ್ದಾರೆ. ಈ ಫುಲ್ ಮೀಲ್ಸ್ ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಸಿನಿಮಾ ಅನ್ನೋದು ಚಿತ್ರತಂಡದ ಮಾತು.

ಇದನ್ನೂ ಓದಿ: ಫ್ರಾನ್ಸ್‌ ವೈದ್ಯನೊಂದಿಗೆ ಫೋಟೋ ಹಂಚಿಕೊಂಡ ಊರ್ವಶಿ ರೌಟೇಲಾ: ರಿಷಭ್​​ ಪಂತ್​ ಉತ್ತಮ ಎಂದ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.