ETV Bharat / entertainment

ಸ್ಯಾಂಡಲ್​ವುಡ್​ನಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಿವು.. - ಸಿರಿ ಲಂಬೋದರ ವಿವಾಹ

ಲವ್​ ಮಾಕ್​ಟೈಲ್​ ಜೋಡಿಯ ಅಭಿನಯದ ‘ಲವ್​ ಬರ್ಡ್ಸ್’, ವಿಭಿನ್ನ ಕಥಾಹಂದರ ಹೊಂದಿರುವ ‘ಖೆಯೊಸ್’, ಗ್ರಾಮೀಣ ಹಿನ್ನೆಲೆ ಹೊಂದಿರುವ ‘ದೊಡ್ಡ ಹಟ್ಟಿ ರಂಗೇಗೌಡ’, ಹೊಸಬರ ‘ಸಕೂಚಿ’ ಮತ್ತು ‘ಸಿರಿ ಲಂಬೋದರ ವಿವಾಹ’ ಸಿನಿಮಾಗಳು ಈ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ.

films-releasing-this-week-in-sandalwood
ಸ್ಯಾಂಡಲ್​ವುಡ್​ನಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಿವು
author img

By

Published : Feb 16, 2023, 9:47 PM IST

ಶುಕ್ರವಾರ ಬಂತಂದ್ರೆ ಗಾಂಧಿನಗರದಲ್ಲಿ ಹಬ್ಬದ ಸಂಭ್ರಮ ಕಳೆ ಕಟ್ಟುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಭ್ರಮ ಹಾಗು ಅಭಿಮಾನಿಗಳ ಜೋಶ್​ ಕಡಿಮೆ ಆಗುತ್ತಿದೆ ಅನಿಸುತ್ತಿದೆ. ಯಾಕೆಂದರೆ ಶುಕ್ರವಾರ ದಿನದಂದು ಒಂದರಿಂದ ಮೂರು ಚಿತ್ರಗಳು ಬಿಡುಗಡೆ ಆಗುತ್ತಿದ್ದವು. ಆದರೆ ಈಗ 8 ರಿಂದ 10 ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿ ಎರಡು ದಿನಕ್ಕೆ ಚಿತ್ರಮಂದಿರಗಳಿಂದ ಎತ್ತಗಂಡಿ ಆಗುತ್ತಿವೆ. ಈ ವಾರ ಕೂಡ ಸ್ಟಾರ್ ನಟರ ಜೊತೆಗೆ ಹೊಸ ಚಿತ್ರಗಳು ಸೇರಿ 5 ಸಿನಿಮಾಗಳು ತೆರೆಗೆ ಬರುತ್ತಿವೆ.

ಡಾರ್ಲಿಂಗ್ ಕೃಷ್ಣ ಹಾಗು ಮಿಲನಾ ನಾಗರಾಜ್ ಅಭಿನಯದ ಲವ್ ಬರ್ಡ್ಸ್, ಶಶಿಕುಮಾರ್ ಮಗ ಅಕ್ಷಿತ್ ಶಶಿಕುಮಾರ್ ನಟಿಸಿರುವ ಖೆಯೊಸ್, ಕಿರುತೆರೆಯಲ್ಲಿ ಮಿಂಚಿರುವ ತ್ರಿವಿಕ್ರಮ ಅಭಿನಯದ ಸಕೂಚಿ, ಕಿರುತೆರೆ ನಟ ಸೌರಭ್​ ಕುಲಕರ್ಣಿ ನಿರ್ದೇಶನದ ಸಿರಿ ಲಂಬೋದರ ವಿವಾಹ ಹಾಗೂ ದೊಡ್ಡಹಟ್ಟಿ ಬೋರೇಗೌಡ ಎಂಬ ಐದು ಸಿನಿಮಾಗಳು ನಾಳೆ ಅದೃಷ್ಟ ಪರೀಕ್ಷೆಗಿಳಿಯಲಿವೆ.

ಈ ಐದು ಸಿನಿಮಾಗಳಲ್ಲಿ ಸ್ಟಾರ್ ಜೋಡಿ ಸಿನಿಮಾ ಅಂದ್ರೆ ‘ಲವ್ ಬರ್ಡ್ಸ್’. ಲವ್ ಮಾಕ್​ಟೈಲ್ ಜೋಡಿ ಎಂದೇ ಕರೆಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಹಾಗು ಮಿಲನ ನಾಗರಾಜ್ ಒಟ್ಟಿಗೆ ತೆರೆ ಹಂಚಿಕೊಂಡಿರುವ ರೊಮ್ಯಾಂಟಿಕ್ ಚಿತ್ರವಿದು. ರೋಮಿಯೋ ಸಿನಿಮಾ ಖ್ಯಾತಿಯ ಪಿ.ಸಿ.ಶೇಖರ್ ನಿರ್ದೇಶನ ಮಾಡಿರೋ ಈ ಚಿತ್ರ ಗಾಂಧಿನಗರದಲ್ಲಿ ಒಂದು ಮಟ್ಟಿಗೆ ಸದ್ದು ಮಾಡಿದೆ.

ಕೌಟುಂಬಿಕ ಕಥೆ ಆಧರಿಸಿರುವ ‘ಲವ್​ ಬರ್ಡ್ಸ್’ ಸಿನಿಮಾವನ್ನು ನಿರ್ಮಾಪಕ ಕಡ್ಡಿಪುಡಿ ಚಂದ್ರು ಕಥೆ ಮೆಚ್ಚಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರನಾಡು, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್, ವೀಣಾ ಸುಂದರ್ ಮುಂತಾದವರು ಅಭಿನಯಿಸಿದ್ದಾರೆ. ಲವ್ ಮಾಕ್​ಟೈಲ್ ಬಳಿಕ ಕೃಷ್ಣ, ಮಿಲನಾ ನಾಗರಾಜ್ ಜೋಡಿಗೆ ಪ್ರೇಕ್ಷಕರು ಎಷ್ಟು ಫಿದಾ ಆಗ್ತಾರೆ ನೋಡಬೇಕು.

ಈ ಚಿತ್ರದ ನಂತರ ಲೈಟ್ ಆಗಿ ಸೌಂಡ್ ಮಾಡುತ್ತಿರುವ ಚಿತ್ರ ‘ಖೆಯೊಸ್’. ಅಕ್ಷಿತ್ ಶಶಿಕುಮಾರ್, ಅದಿತಿ ಪ್ರಭುದೇವ ಅಭಿನಯಿಸಿರುವ ಚಿತ್ರ, ಟ್ರೇಲರ್ನಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ವಿಶೇಷವೆಂದರೆ ಸುಪ್ರೀಂ ಹೀರೋ ಶಶಿಕುಮಾರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ, ಮನಸ್ಥಿತಿಯ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಖೆಯೊಸ್’ ಚಿತ್ರ ಕೂಡ ನಾಳೆ ಬಿಡುಗಡೆಯಾಗುತ್ತಿದೆ. ಮೂಲತಃ ವೈದ್ಯರಾಗಿರುವ ಡಾ.ಜಿ.ವಿ.ಪ್ರಸಾದ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‌ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ ಹೊಂದಿದೆ. ಅಕ್ಷಿತ್ ಶಶಿಕುಮಾರ್ ಹಾಗೂ ಅದಿತಿ ಪ್ರಭುದೇವ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಾ.ಪ.ಪಾಂಡು ಧಾರಾವಾಹಿಯಲ್ಲಿ ಪ್ರಖ್ಯಾತಿ ಹೊಂದಿರುವ ಸೌರಭ್​ ಕುಲಕರ್ಣಿ ‘ಸಿರಿ ಲಂಬೋದರ ವಿವಾಹ’ ಎಂಬ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಅಂಜನ್​ ಭಾರದ್ವಾಜ್​, ರಾಜೇಶ್​ ನಟರಂಗ, ಶಿವು ಮುಂತಾದವರು ನಟಿಸಿದ್ದಾರೆ. ವೆಡ್ಡಿಂಗ್​ ಪ್ಲಾನರ್​ಗಳಾಗಿರುವ ನಾಯಕ-ನಾಯಕಿ ಸಿರಿ ಮತ್ತು ಲಂಬೋದರರ ಮದುವೆ ಮಾಡಿಸುವುದಕ್ಕೆ ಮುಂದಾಗುತ್ತಾರೆ. ಈ ಜರ್ನಿಯಲ್ಲಿ ನಡೆಯುವ ಒಂದಿಷ್ಟು ರೋಚಕ, ಹಾಸ್ಯಮಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಹೈಲೈಟ್​.

ಈ ಮಧ್ಯೆ ಕಿರುತೆರೆಯ ನಟ ತ್ರಿವಿಕ್ರಮ ಕೂಡ ‘ಸಕೂಚಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ. ತ್ರಿವಿಕ್ರಮಗೆ ಜೋಡಿಯಾಗಿ, ಡಯಾನ ನಟಿಸಿದ್ದಾರೆ. ಸದ್ಯ ಟೀಸರ್‌ನಿಂದಲೇ ಗಾಂಧಿನಗರದಲ್ಲಿ ಗಮನ ಸೆಳೆದಿರೋ ‘ಸಕೂಚಿ’ ಕೂಡ ನಾಳೆ ಬಿಡುಗಡೆ ಆಗುತ್ತಿದೆ. ಸಕೂಚಿಗೆ ಸಾವಿನ ಸೂಚಿ ಎಂಬ ಅಡಿಬರಹ ಇರುವ ಈ ಚಿತ್ರ, ಮನುಷ್ಯನ ಮೇಲೆ ನಡೆಯುವ ಪ್ರಯೋಗದ ಕಥೆ. ಹಾರರ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ನಿಂದ ಕೂಡಿರುವ ಚಿತ್ರ. ಅಶೋಕ್.ಎಸ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಟ್ರೇಲರ್‌ನಿಂದಲೇ ಕುತೂಹಲ ಹುಟ್ಟಿಸಿರೋ ‘ದೊಡ್ಡ ಹಟ್ಟಿ ಬೋರೇಗೌಡ’ ಕೂಡ ನಾಳೆ ರಿಲೀಸ್ ಆಗುತ್ತಿದೆ. ತರ್ಲೆವಿಲೇಜ್, ಪರಸಂಗ ಚಿತ್ರಗಳಂತಹ ಗ್ರಾಮೀಣ ಹಿನ್ನೆಲೆಯ ಸಿನಿಮಾಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ನೈಜತೆಯ ಒಂದು ಸದಭಿರುಚಿ ಈ ಚಿತ್ರವಾಗಿದೆ. ಪ್ರಧಾನ ಕಲಾವಿದನಾಗಿ ಬೀರಿ ಹುಂಡಿ ಕೆ.ಶಿವಣ್ಣ ಸೇರಿದಂತೆ ಚಿತ್ರತಂಡದ ಕಲಾರತಿ, ಮಹಾದೇವ, ಗೀತಾ, ಲಾವಣ್ಯ, ನಾರಾಯಣಗೌಡ, ಕಾತ್ಯಾಯಿನಿ, ಮಹೇಶ್, ಗಿರೀಶ್,ಯೋಗೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ನನಗಾಗಿ ಪದ್ಮ ಪ್ರಶಸ್ತಿ ಕೊಡಿಸುವ ಅಭಿಯಾನ ಆರಂಭಿಸಬೇಡಿ': ನಟ ಅನಂತ್​ ನಾಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.