ETV Bharat / entertainment

ಪುನೀತ​ ಪರ್ವ: ಅಪ್ಪು ಬಗ್ಗೆ ಸೂಪರ್​ ಸ್ಟಾರ್​ಗಳ ಗುಣಗಾನ - gandhdagudi movie

ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್ ರಾಜ್‍ಕುಮಾರ್ ಬಗ್ಗೆ ಚಿತ್ರರಂಗದ ಸೂಪರ್​ ಸ್ಟಾರ್​ಗಳು ಗುಣಗಾನ ಮಾಡಿದರು.

film stars speaks about Puneeth rajkumar
ಅಪ್ಪು ಬಗ್ಗೆ ಸೂಪರ್​ ಸ್ಟಾರ್​ಗಳ ಗುಣಗಾನ
author img

By

Published : Oct 22, 2022, 12:46 PM IST

Updated : Oct 22, 2022, 1:27 PM IST

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಒಬ್ಬ ಸ್ಟಾರ್ ನಟನಾಗಿರದೇ‌ ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿದ್ದು, ಕನ್ನಡ ಸಿನಿಮಾ‌ ಇಂಡಸ್ಟ್ರಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎಂಬ ಕನಸುಗಳನ್ನು ಕಂಡಿದ್ದರು. ಅದರಲ್ಲಿ ಈ ಗಂಧದ ಗುಡಿ ಚಿತ್ರವೂ ಒಂದು. ನಿನ್ನೆ ಸಂಜೆ ಅರಮನೆ ಮೈದಾನದಲ್ಲಿ ನಡೆದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಗಣ್ಯರು ಮತ್ತು ಬಹಭಾಷಾ ಚಿತ್ರಂಗದ ತಾರೆಗಳ ಸಮಾಗಮ ಆಗಿತ್ತು. ವೇದಿಯಲ್ಲಿ ಗಣ್ಯರು ಅಪ್ಪು ಬಗ್ಗೆ ಗುಣಗಾನ ಮಾಡಿದರು.

ನಟ ಸೂರ್ಯ ಮಾತನಾಡಿ, ನನ್ನ ಆತ್ಮೀಯ ಗೆಳೆಯ ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ‌ ನಮ್ಮ ಜೊತೆ ಗಾಳಿಯಲ್ಲಿ ಇದ್ದಾರೆ‌. ಅದು ನನಗೆ ಫೀಲ್‌ ಆಗುತ್ತಿದೆ. ನಾವಿಬ್ಬರು‌ ನಮ್ಮ ತಾಯಿಂದಿರ ಹೊಟ್ಟೆಯಲ್ಲಿ ಇರಬೇಕಾದರೆ ಮೀಟ್ ಮಾಡಿದ್ವಿ. ಬಳಿಕ ಮೈಸೂರಿನ ಸುಜಾತ‌ ಹೋಟೆಲ್​ನಲ್ಲಿ ಮೀಟ್ ಮಾಡಿದ್ವಿ.‌ ಆ ಭೇಟಿ ನಂತರ ಸಾಕಷ್ಟು ಬಾರಿ ಭೇಟಿಯಾಗಿದ್ದೇವೆ.

ಅಪ್ಪು ಬಗ್ಗೆ ಸೂಪರ್​ ಸ್ಟಾರ್​ಗಳ ಗುಣಗಾನ

ಸರಳತೆ, ಗೆಳತನ ಹಾಗೂ ಸ್ಟಾರ್ ಐಕಾನ್ ಆದರೂ ಸಮಾಜಕ್ಕೆ‌ ಅವರು ಮಾಡಿರುವ‌ ಸಹಾಯಗಳನ್ನು ಮರೆಯಲು ಸಾಧ್ಯವಿಲ್ಲ. ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿದ್ದಾರೆ. ಜೀವನದಲ್ಲಿ ಹೇಗೆ ಬದುಕಬೇಕು ಅನ್ನೋದನ್ನು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರೋದು ನನಗೂ ಹೆಮ್ಮೆ ಎಂದು ಸೂರ್ಯ ತಿಳಿಸಿದರು.

ನಟ ರಮೇಶ್ ಅರವಿಂದ್​ ಮಾತನಾಡಿ, ಹುಟ್ಟಿದ ಮೇಲೆ ನಾವೆಲ್ಲ ಒಂದು ದಿನ ಹೋಗಲೇಬೇಕು. ಆದರೆ ಅಪ್ಪು ಇಲ್ಲ ಅನ್ನೋದು ನಮ್ಮ ತಲೆಗೆ ಗೊತ್ತಿದ್ದರೂ, ಮನಸ್ಸು ಅದನ್ನು ಅರಗಿಸಿಕೊಳ್ಳುತ್ತಿಲ್ಲ. ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವನ್ನು ಮರೆಯೋದು ಬಹಳ ಕಷ್ಟ. ಪುನೀತ್​ ಇಹಲೋಕ ತ್ಯಜಿಸಿ ಒಂದು ವರ್ಷ ಆದ್ರೂ ಈಗಲೂ ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಬಾರದಿತ್ತಲ್ವಾ ಅಂತಾ ಅನಿಸುತ್ತೆ. ಏಕಂದ್ರೆ ಅವರು ಅಷ್ಟೊಂದು ಖುಷಿ ಕೊಟ್ಟಿದ್ರು, ಒಳ್ಳೆ ಕೆಲಸ ಮಾಡಿದ್ರು. ಅವರು ಬಂದ್ರೆ ಚಿತ್ರರಂಗವನ್ನು ಆಳ್ತಾರೆ ಎಂದಿದ್ದೆ, ಅದರಂತೆ ಆಡಳಿತ ನಡೆಸಿ ಹೋದ್ರು ಎಂದು ಭಾವುಕರಾದರು.

ಅಪ್ಪು ಬಗ್ಗೆ ಸೂಪರ್​ ಸ್ಟಾರ್​ಗಳ ಗುಣಗಾನ

ಇದನ್ನೂ ಓದಿ: ನಾನು ಈ ಸ್ಟೇಜ್ ಮೇಲಿರೋದಕ್ಕೆ ರಾಜ್ ಕುಟುಂಬವೇ ಕಾರಣ: ಬಹುವರ್ಷದ ನಂತರ ವೇದಿಕೆ ಮೇಲೆ ರಮ್ಯಾ ಡ್ಯಾನ್ಸ್

ನಟಿ ಶೃತಿ ಮಾತನಾಡಿ, ಅವರಲ್ಲಿರುವ ವ್ಯಕ್ತಿತ್ವ ಬೇರೆ ಯಾರಲ್ಲೂ ನೋಡಲು ಸಾಧ್ಯವಿಲ್ಲ. ಪುನೀತ್​ ಅವರನ್ನು ಪ್ರತಿ ಕ್ಷಣ ಬದುಕಿರುವಂತೆ ಮಾಡಿದ್ದು ಅವರ ಅಭಿಮಾನಿಗಳು. ರಾಜ್​ಕುಮಾರ್​, ಅಪ್ಪು ಅಂಥವರೊಂದಿಗೆ ನಾವು ಇದ್ದೆವಲ್ಲ ಅದು ನಮ್ಮ ಜನ್ಮವನ್ನು ಪುನೀತರನ್ನಾಗಿಸಿದೆ.

ನಟಿ ಅನು ಪ್ರಭಾಕರ್ ಮಾತನಾಡಿ, ಅನ್ನಪೂರ್ಣ ಆಗಿ ನನಗೆ ನನ್ನ ಪೋಷಕರು ಜನ್ಮ ಕೊಟ್ಟರು. ಅನು ಪ್ರಭಾಕರ್ ಆಗಿ ಜನ್ಮ ಕೊಟ್ಟಿದ್ದು ಪಾರ್ವತಮ್ಮನವರು. ಜೀವನ ಪೂರ್ತಿ ರಾಜ್​ ಕುಟುಂಬಕ್ಕೆ ನಾನು ಚಿರರುಣಿ ಎಂದರು.

ಇದನ್ನೂ ಓದಿ: ನಾವು ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಗಂಧದಗುಡಿಯಲ್ಲಿ ತೋರಿಸಲಾಗಿದೆ: ನಟ ಸೂರ್ಯ

ಸಂಸದೆ ಸುಮಲತಾ ಮಾತನಾಡಿ, ಒಂದು ವರ್ಷ ಎಲ್ಲರೂ ಸಂಕಟ ಪಟ್ವಿ. ಆದ್ರೆ ಇಂದು ಅಪ್ಪುವನ್ನು ಸೆಲೆವ್ರೇಟ್​ ಮಾಡುತ್ತಿದ್ದೇವೆ. ಅಪ್ಪು ನನಗೆ ಬಹಳ ಸ್ಪೆಶಲ್. 5 ವರ್ಷ ಇದ್ದಾಗ ನಾನು ಅಪ್ಪುನನ್ನು ನೋಡಿದೆ. ಅವರ ಆ ನಗು, ಸರಳತೆ, ವ್ಯಕ್ತಿತ್ವ ಎಲ್ಲವೂ ಇಂದು ಅವರನ್ನು ಜೀವಂತವಾಗಿರಿಸಿದೆ ಎಂದು ತಿಳಿಸಿದರು.

Last Updated : Oct 22, 2022, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.