ETV Bharat / entertainment

'ಫೈಟರ್‌' ಇಟಲಿ ಶೂಟಿಂಗ್​ ಶೆಡ್ಯೂಲ್​​ ಕಂಪ್ಲೀಟ್​: ಹೃತಿಕ್​, ದೀಪಿಕಾ ಸಿನಿಮಾ ಸೆಟ್​ನ ಫೋಟೋ ವೈರಲ್​ - ಫೈಟರ್‌ ಅಪ್​ಡೇಟ್ಸ್

Fighter Italy schedule wrap: ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಫೈಟರ್‌' ಇಟಲಿ ಶೂಟಿಂಗ್​ ಶೆಡ್ಯೂಲ್ ಪೂರ್ಣಗೊಂಡಿದೆ.

Fighter Movie
ಫೈಟರ್‌ ಸಿನಿಮಾ
author img

By ETV Bharat Karnataka Team

Published : Oct 5, 2023, 1:55 PM IST

ಬಾಲಿವುಡ್​ನ ಪ್ರತಿಭಾನ್ವಿತ ಕಲಾವಿದರಾದ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್‌'. ಸ್ಟಾರ್​​ ನಟ ನಟಿ ತಮ್ಮ ಮುಂಬರುವ ಚಿತ್ರದ ಇಟಲಿ ಶೂಟಿಂಗ್​ ಶೆಡ್ಯೂಲ್​​ ಪೂರ್ಣಗೊಳಿಸಿದ್ದಾರೆ.

ಇಟಲಿ ಶೂಟಿಂಗ್​ ಶೆಡ್ಯೂಲ್​​ ಕಂಪ್ಲೀಟ್​: ನಿರ್ದೇಶಕ ಸಿದ್ಧಾರ್ಥ್ ಆನಂದ್ ಬುಧವಾರ ರಾತ್ರಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇಟಲಿಯ ಶೂಟಿಂಗ್​ ಪೂರ್ಣಗೊಂಡಿರುವುದಾಗಿ ಚಿತ್ರದ ಅಪ್​ಡೇಟ್ಸ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಇಟಲಿಯಿಂದ ಫೈಟರ್ ಸೆಟ್‌ನ ಕೆಲ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್​ ಪೇಜ್​ ಒಂದು ಫೈಟರ್​ ಸಿನಿಮಾ ಸಾಂಗ್​ ಶೂಟಿಂಗ್​​ನ ಕ್ಷಣವನ್ನು ಪೋಸ್ಟ್ ಮಾಡಿದೆ.

ಫೈಟರ್​ ಸೆಟ್​ನ ಫೋಟೋ ವೈರಲ್​: ವೈರಲ್ ಆಗುತ್ತಿರುವ ಫೋಟೋ, ವಿಡಿಯೋಗಳನ್ನು ಡ್ಯಾನ್ಸಿಂಗ್​​ ಸ್ಟಾರ್​​ ಹೃತಿಕ್ ರೋಷನ್ ಅವರ ಫ್ಯಾನ್ಸ್​ ಫೇಜ್​ಗಳು ಶೇರ್ ಮಾಡುತ್ತಿವೆ. ಇದರಲ್ಲಿ ಸಿನಿಮಾದ ಸಾಂಗ್ ಶೂಟ್‌ನ ಫೋಟೋ ಕೂಡ ಇದೆ. ಫೋಟೋ ಅಸ್ಪಷ್ಟವಾಗಿದ್ದರೂ, ಇದು ಕಡಲತೀರದಲ್ಲಿ ಹಾಡಿನ ಚಿತ್ರೀಕರಣ ನಡೆದ ಕ್ಷಣ ಎಂಬುದು ಮಾತ್ರ ಸ್ಪಷ್ಟ. ಫೈಟರ್​ ತಂಡ ಕಡಲ ತೀರದಲ್ಲಿ ಕಾಣಿಸಿಕೊಂಡಿದೆ. ಅಪಾರ ಸಂಖ್ಯೆಯ ನೃತ್ಯಗಾರರು ಜೊತೆಗಿದ್ದಾರೆ. ಫೋಟೋದಲ್ಲಿ ರೆಡ್​​ ಶರ್ಟ್‌ನಲ್ಲಿರುವ ವ್ಯಕ್ತಿ ಬಹುಶಃ ಹೃತಿಕ್ ರೋಷನ್ ಇರಬಹುದೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಂದಾಜಿಸುತ್ತಿದ್ದಾರೆ.

ಫೈಟರ್‌ ಚಿತ್ರದ ಇಟಲಿ ಶೂಟಿಂಗ್​ ಶೆಡ್ಯೂಲ್​​, ಹೃತಿಕ್​ ಮತ್ತು ದೀಪಿಕಾ ಅವರ ಸಾಂಗ್​ ಶೂಟಿಂಗ್​​ನಿಂದ ಪ್ರಾರಂಭವಾಗಿತ್ತೆಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಇದು ವಾರ್‌ ಚಿತ್ರದ ಘುಂಗ್ರೂ ಹಾಡಿನಂತೆಯೇ ಇರಲಿದೆ ಎಂದು ಕೂಡ ತಿಳಿಸಿದ್ದಾರೆ. ಪ್ರಮುಖ ತಾರಾಗಣ ಈ ಹಾಡಿನಲ್ಲಿ ಅತ್ಯುತ್ತಮವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ. ಬಾಸ್ಕೊ ಮತ್ತು ಸೀಸರ್ ನೃತ್ಯ ಸಂಯೋಜನೆ ಮಾಡಿದ್ದು, ಹಲವು ಹುಕ್ ಸ್ಟೆಪ್​ಗಳಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಅಮೀರ್ ಖಾನ್​​.. ನೆಟ್ಟಿಗರ ಮನಗೆದ್ದ ಸೂಪರ್​ ಸ್ಟಾರ್​ ವಿಡಿಯೋ ನೋಡಿ

ಮುಂದಿನ ಜನವರಿಗೆ ಸಿನಿಮಾ ಬಿಡುಗಡೆ: ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಚಿತ್ರದಲ್ಲಿ ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಮೂವಿ ಮುಂದಿನ ವರ್ಷ ಅಂದರೆ 2024ರ ಜನವರಿ 2ರಂದು ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ಪೈಪೋಟಿ​​: ಚಂದ್ರುಮುಖಿ 2, ವ್ಯಾಕ್ಸಿನ್​ ವಾರ್, ಫುಕ್ರೆ 3 ಕಲೆಕ್ಷನ್​ ಡೀಟೆಲ್ಸ್ ಇಲ್ಲಿದೆ

ಇನ್ನೂ ನಟಿ ದೀಪಿಕಾ ಪಡುಕೋಣೆ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಕಲ್ಕಿ 2898 ಎಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್​ ಬಿ ಅಮಿತಾಭ್​ ಬಚ್ಚನ್​​, ಸೌತ್​ ಸೂಪರ್ ಸ್ಟಾರ್ ಕಮಲ್​ ಹಾಸನ್​, ದಿಶಾ ಪಟಾನಿ ಅವರಂತಹ ಸ್ಟಾರ್ ನಟರು ಈ ಚಿತ್ರದಲ್ಲಿದ್ದಾರೆ. ಮತ್ತೊಂದೆಡೆ ನಟ ಹೃತಿಕ್ ರೋಷನ್​​ ಆ್ಯಕ್ಷನ್​​ ಥ್ರಿಲ್ಲರ್ ಸಿನಿಮಾ ವಾರ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನಿಯರ್ ಎನ್‌ಟಿಆರ್ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದಾರೆ ಹೃತಿಕ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.