ಮುಂಬೈ (ಮಹಾರಾಷ್ಟ್ರ): ಫವಾದ್ ಖಾನ್ ಮತ್ತು ಮಹಿರಾ ಖಾನ್ ನಟನೆಯ ಬಹುನಿರೀಕ್ಷಿತ 'ದಿ ಲೆಜೆಂಡ್ ಆಫ್ ಮೌಲಾ ಜಟ್' ಚಿತ್ರವು ಇದೇ ಅಕ್ಟೋಬರ್ 13 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪಂಜಾಬಿ ಭಾಷೆಯ ಪಾಕಿಸ್ತಾನಿ ಚಿತ್ರ ಇದಾಗಿದ್ದು ಪಾಕ್ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಬಂಡವಾಳ ಹೂಡಲಾಗದೆಯಂತೆ.
ಹಾಗಾಗಿ ಚಿತ್ರದ ಬಗ್ಗೆ ಫವಾದ್ ಖಾನ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ಥಳೀಯ ನಾಯಕ ಮೌಲಾ ಜಟ್ಟ್ ಮತ್ತು ಕ್ರೂರ ಗ್ಯಾಂಗ್ ಲೀಡರ್ ನೂರಿ ನಟ್ ನಡುವಿನ ಹೋರಾಟವನ್ನು ಹೇಳುವ ಪೌರಾಣಿಕ ಕಥೆಯಾಗಿದೆ. ಬಿಲಾಲ್ ಲಶಾರಿ ನಿರ್ದೇಶನ ಹೇಳಿದ್ದು, ಪೋಸ್ಟರ್ನಿಂದ ಪ್ರಪಂಚದಾದ್ಯಂತ ಹೆಚ್ಚು ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಚಿತ್ರದ ಬಗ್ಗೆ ಫವಾದ್ ಖಾನ್ ಅವರ ಸಂದರ್ಶನ ನಡೆಸಲಾಯಿತು. ಈ ವೇಳೆ ಅವರನ್ನು ಭಾರತಕ್ಕೆ ಹಿಂತಿರುಗುವ ಮತ್ತು ಬಾಲಿವುಡ್‌ನಲ್ಲಿ ಕೆಲಸ ಮಾಡುವ ಬಗ್ಗೆ ಕೆಲವು ಪ್ರಶ್ನೆಗಳನ್ನು ಪ್ರಶ್ನೆಗಳನ್ನು ಕೇಳಲಾಯಿತು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಫವಾದ್, ನಡೆಯುತ್ತಿರುವ ವಿದ್ಯಮಾನ ಸ್ಥಿರಗೊಳ್ಳುವವರೆಗೂ ನಿರ್ಣಾಯಕ ಉತ್ತರವನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತೀಯ ಸಿನಿಮಾದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ. ಅಲ್ಲದೇ ಅಲ್ಲಿಯ ಹಲವು ನಟರಿಂದ ಮತ್ತು ನನಗೆ ಗೊತ್ತಿರುವವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನನಗೆ ಅವರ ಒಡನಾಟ ಖುಷಿ ನೀಡಿದೆ. ಪಾಕ್ ಮತ್ತು ಭಾರತದ ನಡುವೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಂದ ನಮ್ಮ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
ಆದರೆ, ಈ ವಿಷಯಗಳು ನಮ್ಮಗಳ ನಡುವೆ ತಂದಿಟ್ಟುದ್ದು ತಳ್ಳಿಹಾಕುವಂತಿಲ್ಲ. ನಮ್ಮನ್ನು ಬಹಳ ಎಚ್ಚರಿಕೆ ಇರುವಂತೆ ಮಾಡಿವೆ. ಈ ತರಹದ ಪ್ರಶ್ನೆಗಳಿಗೆ ನಾವು ಬಹಲ ಎಚ್ಚರಿಕೆಯ ಉತ್ತರ ಕೊಡುವ ಕಾಲ ಬಂದಿದೆ. ವಿವಾದ ಸೇರಿದಂತೆ ನಾನು ಅಂತಹ ಸನ್ನಿವೇಶಗಳನ್ನು ಇಷ್ಟಪಡುವುದಿಲ್ಲ. ಇದು ಒಳ್ಳೆಯ ಪ್ರಶ್ನೆ. ಆದರೆ, ವಿಷಯಗಳು ಸ್ಥಿರಗೊಳ್ಳುವವರೆಗೆ ಮತ್ತು ಸಮಸ್ಯೆಗಳು ಸರಿ ಆಗುವವರೆಗೆ ನಾನು ಯಾವುದೇ ನಿರ್ಣಾಯಕ ಉತ್ತರವನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಅಲ್ಲದೇ ನಾನು ಇತರರೊಂದಿಗೆ ಕೆಲಸ ಮಾಡುವ ಬದಲು ಬೇರೆಯವರು ನನ್ನೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತಾರೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಏಕೆಂದರೆ ಒಂದು ಬೆರಳು ಇನ್ನೊಬ್ಬರನ್ನು ಪ್ರಶ್ನೆ ಮಾಡಿದರೆ ಉಳಿದ ಬೆರಳುಗಳು ನಮ್ಮನ್ನು ಪ್ರಶ್ನೆ ಮಾಡಿರುತ್ತವೆ. ನಟಿಸುವುದು ನನ್ನ ಕೆಲಸ. ಹಾಗಂತ ಎಲ್ಲವನ್ನು ಬದಿಗಿಟ್ಟು ಅದನ್ನು ನಾನು ಮಾಡುತ್ತಾ ಹೋದರೆ ಮುಂದೊಂದು ದಿನ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಇದರಿಂದ ಎಲ್ಲರಿಗೂ ಸಮಸ್ಯೆ. ಅದು ಹಾಗಾಗಬಾರದು ಎಂದು ಖಾನ್ ನಯವಾಗಿಯೇ ಉತ್ತರ ನೀಡಿದರು.
ಎಲ್ಲವೂ ಮರೆಯಾಗಿ ಮುಂದೊಂದು ದಿನ ಅವರೊಂದಿಗೆ ನಟಿರುವ ಕಾಲ ಬರುತ್ತದೆ ಎಂಬ ಆಸೆ ಇಟ್ಟುಕೊಂಡಿದ್ದೇನೆ. ಆ ದಿನಗಳನ್ನು ನಾನು ಸೇರಿದಂತೆ ಹಲವು ಎದುರು ನೋಡುತ್ತಿದ್ದಾರೆ. ಬಹುಶಃ ಶೀಘ್ರದಲ್ಲೇ ಅವರೊಂದಿಗೆ ಮತ್ತೆ ಕೆಲಸ ಮಾಡಬಹುದು. ಅದು ಅಂತಾರಾಷ್ಟ್ರೀಯ ವೇದಿಕೆಯಾಗಿರಲಿ, ಪಾಕಿಸ್ತಾನಿ ವೇದಿಕೆಯಾಗಿರಲಿ ಅಥವಾ ಭಾರತೀಯ ಪ್ಲಾಟ್‌ಫಾರ್ಮ್ ಆಗಲಿ. ಯಾವುದಾದರೂ ಸರಿ. ನಟಿಸುವೆ ಎಂದರು.
ಖೂಬ್ಸೂರತ್, ಕಪೂರ್ ಆ್ಯಂಡ್ ಸನ್ಸ್ ಮತ್ತು ಏ ದಿಲ್ ಹೈ ಮುಷ್ಕಿಲ್‌ನಂತಹ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಫವಾದ್ ಖಾನ್, ಜುಟ್ ಮತ್ತು ಬಾಂಡ್ (2001) ಸರಣಿಯೊಂದಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಖುದಾ ಕೇ ಲಿಯೆ (2007) ಚಲನಚಿತ್ರದೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದರು. ಬಳಿಕ ಅವರ ನಟನೆಯನ್ನು ಗುರುತಿಸಿ ಬಾಲಿವುಡ್ನಿಂದ ಕರೆ ಬಂದಿತು.
ಏ ದಿಲ್ ಹೈ ಮುಷ್ಕಿಲ್ (2016) ಅವರ ಕೊನೆಯ ಬಾಲಿವುಡ್ ಚಿತ್ರವಾಗಿದೆ. ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಫವಾದ್, ಉರಿ ದಾಳಿಯ ನಂತರ (2016 ರಲ್ಲಿ) ಇವರನ್ನು ಸೇರಿದಂತೆ ಪಾಕಿಸ್ತಾನದ ನಟರು ಮತ್ತು ಕಲಾವಿದರನ್ನು ನಿಷೇಧಿಸಲಾಯಿತು.
ಇದನ್ನೂ ಓದಿ: ವರ್ಡ್ ಆಫ್ ಮೌಥ್ನಲ್ಲಿ ಪ್ರಚಾರಕ್ಕೆ ಮುಂದಾದ ಶುಭಮಂಗಳ ಚಿತ್ರ: ಸಿನಿರಸಿಕರಿಗೆ ಹುಬ್ಬಳ್ಳಿಯಲ್ಲಿ ಪ್ರೀಮಿಯರ್ ಶೋ