ETV Bharat / entertainment

'ಸಲಾರ್'​ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ: ಗರಿಗೆದರಿದ ಉತ್ಸಾಹ - ಇದು 'Salaar Trailer Day' - ವಿಜಯ್ ಕಿರಗಂದೂರು

Salaar Trailer: ಬಹುನಿರೀಕ್ಷಿತ 'ಸಲಾರ್'​ ಟ್ರೇಲರ್​ ಇಂದು ಸಂಜೆ 7:19 ಕ್ಕೆ ಅನಾವರಣಗೊಳ್ಳಲಿದೆ.

Fans waiting for Salaar Trailer
'ಸಲಾರ್'​ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ
author img

By ETV Bharat Karnataka Team

Published : Dec 1, 2023, 2:31 PM IST

Updated : Dec 1, 2023, 3:34 PM IST

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ 'ಸಲಾರ್' ಸಿನಿಮಾದ ಟ್ರೇಲರ್ ಇಂದು ಸಂಜೆ ಅನಾವರಣಗೊಳ್ಳಲಿದೆ. ಚಿತ್ರ ತಯಾರಕರು ಈ ಪ್ರಾಜೆಕ್ಟ್​​ ಸುತ್ತಲಿನ ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿದ್ದಾರೆ. ಈ ಬಗ್ಗೆ ಕೆಜಿಎಫ್​, ಕಾಂತಾರ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಲು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಸಲಾರ್ ಟ್ರೇಲರ್‌ ವೀಕ್ಷಣೆ' ಚಿತ್ರಿಸುವಂತಹ ಸ್ಟಿಲ್ ಇಮೇಜ್​ ಅನ್ನು ಅವರು ಹಂಚಿಕೊಂಡಿದ್ದಾರೆ.

ಸಲಾರ್ ಟ್ರೇಲರ್​ಗೂ ಮುನ್ನ ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆಯೋದನ್ನು ಮುಂದುವರಿಸಿದೆ. "ಇದು ಸಲಾರ್ ಟ್ರೇಲರ್ ಡೇ" ಎಂಬ ಶೀರ್ಷಿಕೆಯ ಎಕ್ಸ್ ಪೋಸ್ಟ್‌ನಲ್ಲಿ, 'ಸಲಾರ್​ ಟ್ರೇಲರ್​ ವೀಕ್ಷಣೆ' ಚಿತ್ರಿಸುವಂತಹ ಸ್ಟಿಲ್ ಇಮೇಜ್ ಇದೆ. ಈ ಪೋಸ್ಟ್ ಶೇರ್ ಆಗುತ್ತಿದ್ದಂತೆ ಅಭಿಮಾನಿಗಳು ಮೈಕ್ರೋ ಬ್ಲಾಗಿಂಗ್ ಸೈಟ್​ನಲ್ಲಿ ತಮ್ಮ ಉತ್ಸಾಹ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ''SALAAR TRAILER" ಎಂಬ ಹ್ಯಾಶ್‌ಟ್ಯಾಗ್ ಸೋಷಿಯಲ್​ ಮೀಡಿಯಾಗಳಲ್ಲಿ ಟ್ರೆಂಡಿಂಗ್​ನಲ್ಲಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಪೋಸ್ಟ್​, ಪ್ರತಿಕ್ರಿಯೆಗಳು ಸದ್ದು ಮಾಡುತ್ತಿದೆ. ಈ ಮೊದಲೇ ತಿಳಿಸಿದಂತೆ ಇಂದು ಸಂಜೆ ಸಲಾರ್ ಟ್ರೇಲರ್ ಅನಾವರಣಗೊಳ್ಳಲಿದೆ.

ಸಲಾರ್ ಸಿನಿಮಾ ಭಾರತೀಯ ಚಿತ್ರರಂಗದ ಖ್ಯಾತನಾಮರಿಂದ ನಿರ್ಮಾಣಗೊಂಡಿರುವ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್‌ಗೆ ಹೆಸರುವಾಸಿಯಾಗಿದ್ದಾರೆ. ಪ್ರಭಾಸ್ ಬಾಹುಬಲಿ ಸೇರಿದಂತೆ ಬ್ಲಾಕ್​​​ಬಸ್ಟರ್ ಸಿನಿಮಾಗಳ ನಾಯಕ. ಅಲ್ಲದೇ ಈ ಬಿಗ್​ ಪ್ರಾಜೆಕ್ಟ್​​ ಕೆಜಿಎಫ್​​, ಕಾಂತಾರ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್​​​​ನಿಂದ ನಿರ್ಮಾಣಗೊಂಡಿದೆ. ಆ್ಯಕ್ಷನ್​ ಪ್ಯಾಕ್ಡ್​​ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಅವರಂತಹ ಸ್ಟಾರ್​ ನಟರು ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಗಾಗಿ ಸಿನಿಮಾ ಸುತ್ತಲಿನ ಉತ್ಸಾಹ ಗರಿಗೆದರಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: 100 ಕೋಟಿಯತ್ತ ರಶ್ಮಿಕಾ ಸಿನಿಮಾ: ರಣ್​​ಬೀರ್​​ ವೃತ್ತಿಜೀವನದಲ್ಲಿ ಹೊಸ ದಾಖಲೆ ಸೃಷ್ಟಿಗೆ 'ಅನಿಮಲ್'​ ಸಜ್ಜು!

ಸಲಾರ್ ಸಿನಿಮಾ ಪಂಚಭಾಷೆಗಳಲ್ಲಿ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಪ್ರೇಕ್ಷಕರು ಸಿನಿಮಾಗಾಗಿ ಕಾತರರಾಗಿದ್ದಾರೆ. ಪ್ರಭಾಸ್‌ ಅವರ ಕೊನೆಯ ಚಿತ್ರ ಆದಿಪುರುಷ್ ಹಿನ್ನೆಡೆ ಕಂಡಿದ್ದು, ಸೂಪರ್ ಸ್ಟಾರ್​ಗೆ ದೊಡ್ಡ ಗೆಲುವಿನ ಅಗತ್ಯವಿದೆ. ಆದರೆ ಡಿ. 22 ರಂದೇ ಶಾರುಖ್​ ಖಾನ್​ ಮುಖ್ಯಭೂಮಿಕೆಯ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಮತ್ತು ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಮುಖಾಮುಖಿಯಾಗಲಿದೆ. 2018 ರಲ್ಲಿಯೂ ಹೊಂಬಾಳೆ ಫಿಲ್ಮ್ಸ್‌ನ ಕೆಜಿಎಫ್ 1 ಮತ್ತು ಎಸ್‌ಆರ್‌ಕೆ ಅಭಿನಯದ ಝೀರೋ ಪೈಪೋಟಿ ನಡೆಸಿತ್ತು. ಇದು ಎರಡನೇ ಫೈಟ್.

ಇದನ್ನೂ ಓದಿ: 'ಸ್ಯಾಮ್​​ ಬಹದ್ದೂರ್': ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದ ದೇಶದ ಮೊದಲ ಫೀಲ್ಡ್‌ ಮಾರ್ಷಲ್ ಕಹಾನಿ

Last Updated : Dec 1, 2023, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.