ETV Bharat / entertainment

ರಜನಿಕಾಂತ್​ರನ್ನು ಬಿಳಿ ಕೂದಲಿನಲ್ಲಿ ತೋರಿಸಬೇಡಿ ಎಂದಿದ್ದರಂತೆ ಫ್ಯಾನ್ಸ್! - jailer

'Jailer' director Nelson Dileep Kumar: 'ಜೈಲರ್' ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡರು.

Rajinikanth
ರಜನಿಕಾಂತ್
author img

By ETV Bharat Karnataka Team

Published : Dec 10, 2023, 10:58 AM IST

'ಜೈಲರ್'. ದಕ್ಷಿಣ ಚಿತ್ರರಂಗದ ಖ್ಯಾತಿ ಹೆಚ್ಚಿಸಿದ ಸಿನಿಮಾಗಳಲ್ಲೊಂದು. ಆಗಸ್ಟ್ 9ರಂದು ತೆರೆಕಂಡ ಈ ಸಿನಿಮಾ ಸೂಪರ್ ಹಿಟ್​ ಆಗಿದೆ. ಭಾರತೀಯ ಚಿತ್ರರಂಗದ ಖ್ಯಾತ ನಟ ರಜನಿಕಾಂತ್ ಅವರ ಅಮೋಘ ಅಭಿನಯಕ್ಕೆ ಅಪಾರ ಪ್ರಶಂಸೆಯೂ ವ್ಯಕ್ತವಾಗಿತ್ತು. ನೆಲ್ಸನ್​ ದಿಲೀಪ್​ ಕುಮಾರ್​​ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ​​ ಬಾಕ್ಸ್​​ ಆಫೀಸ್​ನಲ್ಲೂ ವಿಶೇಷವಾಗಿ ಸದ್ದಾಯಿತು.

ಉತ್ತಮ ವಿಮರ್ಶೆ, ಬಾಕ್ಸ್​ ಆಫೀಸ್ ಅಂಕಿಅಂಶಗಳ ಮೂಲಕ​​ 2023ರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಸೇರಿದೆ ಜೈಲರ್. ರಜನಿ ಅವರು ಮುತ್ತುವೆಲ್ ಪಾಂಡ್ಯನ್ ಪಾತ್ರ ನಿರ್ವಹಿಸಿದ್ದರು. ಎಂದಿನಂತೆ ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು. ಇತ್ತೀಚೆಗಷ್ಟೇ ನೆಲ್ಸನ್ ದಿಲೀಪ್ ಕುಮಾರ್ ತಮ್ಮ ಸಿನಿಮಾ ಕುರಿತ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು.

'ಜೈಲರ್' ಶೂಟಿಂಗ್ ಶುರುವಾದ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಕೂಡಾ ನನಗೆ ಮೆಸೇಜ್​​​ ಕಳುಹಿಸಿದ್ದರು. ನೀವು ರಜನಿಯೊಂದಿಗೆ ಸಿನಿಮ್ಯಾಟಿಕ್​​​ ಪ್ರಯೋಗ ಮಾಡಬಹುದು. ಆದರೆ ಅವರನ್ನು ಬಿಳಿ ಕೂದಲಿನಲ್ಲಿ ತೋರಿಸಬೇಡಿ. ಅವರು ಈವರೆಗೆ ಹೇಗೆ ಕಾಣಿಸಿಕೊಂಡಿದ್ದರೋ ಅದೇ ರೀತಿ ಈ ಚಿತ್ರದಲ್ಲೂ ತೋರಿಸಿ ಎಂಬ ಬೇಡಿಕೆಗಳನ್ನು ಇಟ್ಟಿದ್ದರು. ಆದರೆ, ರಜನಿ ಅವರನ್ನು ನೋಡಿದ ಮೇಲೆ ಇದೊಂದು ದೊಡ್ಡ ಚಾಲೆಂಜ್ ಅನ್ನಿಸಿತು. ಏಕೆಂದರೆ ಈಗಾಗಲೇ ಕಥೆ ಪೂರ್ಣಗೊಂಡಿದೆ. ಕಥೆಯ ಪ್ರಕಾರ ಅವರನ್ನು ಚಿತ್ರದಲ್ಲಿ ಹಿರಿಯರಂತೆಯೇ ತೋರಿಸಬೇಕಿತ್ತು.

ಮೊದಲು ರಜನಿಯನ್ನು ಹಾಗೆ ತೋರಿಸಲು ಕೊಂಚ ಭಯವಾಯಿತು. ಪ್ರೇಕ್ಷಕರನ್ನು ಮೆಚ್ಚಿಸಲು ನನಗೆ ಸಾಧ್ಯವೇ ಎಂಬ ಅನುಮಾನವೂ ಮೂಡಿತು. ಟೀಕೆಗಳನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂಬಂತೆ 'ಜೈಲರ್' ಚಿತ್ರೀಕರಣ ಪ್ರಾರಂಭಿಸಿದೆ. ಕೆಲವು ದಿನಗಳ ಶೂಟಿಂಗ್ ಬಳಿಕ ನನ್ನಲ್ಲಿ ಆತ್ಮವಿಶ್ವಾಸ ಮೂಡಿತು. ಸಿನಿಮಾ ಬಿಡುಗಡೆಯಾದ ನಂತರ ರಜನಿ ಅವರ ಗೆಟಪ್ ಹೇಗೆ ವರ್ಕ್ ಆಯಿತು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು ಎಂದು ನೆಲ್ಸನ್ ದಿಲೀಪ್ ಕುಮಾರ್ ನೆನಪಿಸಿಕೊಂಡರು.

ಇದನ್ನೂ ಓದಿ: ರಾಮ್​ ಚರಣ್​​ ಮುಡಿಗೇರಿದ 'ಗೋಲ್ಡನ್ ಬಾಲಿವುಡ್ ನಟ' ಪ್ರಶಸ್ತಿ

ಜೈಲರ್​ ಯಶಸ್ಸಿನ ನಂತರ ರಜನಿ ಟಿ.ಜೆ.ಜ್ಞಾನವೆಲ್ ನಿರ್ದೇಶನದ 'ತಲೈವರ್ 170' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಮುಂದುವರಿದಿದೆ. ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಕುತೂಹಲಕಾರಿ ಕಥಾಹಂದರದೊಂದಿಗೆ ಸಿನಿಮಾ ತಯಾರಾಗುತ್ತಿದೆ. ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ದುಶಾರ ವಿಜಯನ್ ಅವರಂತಹ ತಾರೆಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಚಿತ್ರದ ಭಾಗವಾಗಿದ್ದಾರೆ.

ಇದನ್ನೂ ಓದಿ: 'ಅನಿಮಲ್​' ಅಬ್ಬರ: 'ಗೀತಾಂಜಲಿ' ಪಾತ್ರ ವರ್ಣಿಸಿದ ರಶ್ಮಿಕಾ ಮಂದಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.