ETV Bharat / entertainment

'ಯುವ' ಬಿಡುಗಡೆಯಾಗಬೇಕಿದ್ದ ದಿನ 'ಸಲಾರ್​' ರಿಲೀಸ್..​. ಹೊಂಬಾಳೆ ಫಿಲ್ಮ್ಸ್ ವಿರುದ್ಧ ಬೇಸರಿಸಿಕೊಂಡರಾ ಸಿನಿಪ್ರಿಯರು?!

author img

By ETV Bharat Karnataka Team

Published : Sep 30, 2023, 4:21 PM IST

Updated : Sep 30, 2023, 5:27 PM IST

'ಯುವ' ಬಿಡುಗಡೆಯಾಗಬೇಕಿದ್ದ ದಿನ 'ಸಲಾರ್​' ರಿಲೀಸ್ ಆಗುತ್ತಿದೆ. ಹಾಗಾಗಿ ಯುವ ಸಿನಿಮಾ ರಿಲೀಸ್​ ಮುಂದೂಡಿಕೆ ಆಗಬಹುದು ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ.

Fans ask Yuva movie updates with Hombale films
ಹೊಂಬಾಳೆ ಫಿಲ್ಮ್ಸ್ ವಿರುದ್ಧ ಬೇಸರಿಸಿಕೊಂಡ್ರಾ ಸಿನಿಪ್ರಿಯರು

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರ ಹೊಮ್ಮಿರುವ ಸಂಸ್ಥೆ ಹೊಂಬಾಳೆ‌ ಫಿಲ್ಮ್. ಆದರೀಗ ಈ ಸಂಸ್ಥೆ ಬಗ್ಗೆ ಕನ್ನಡ ಪ್ರೇಕ್ಷಕರ ಜೊತೆ ದೊಡ್ಮನೆಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಡಿಸೆಂಬರ್ 22ರಂದು ಸಲಾರ್​ ರಿಲೀಸ್​: ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಮುಕ್ಯಭೂಮಿಕೆಯ ಸಲಾರ್ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲ ಟೆಕ್ನಿಕಲ್ ಸಮಸ್ಯೆಯಿಂದ ಸಲಾರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟ್ ಪೋನ್ ಮಾಡಲಾಯಿತು. ಕೊನೆಗೂ, ಶುಕ್ರವಾರದಂದು ಸಲಾರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಯಿತು. ಡಿಸೆಂಬರ್ 22ರಂದು ಸಲಾರ್ ಸಿನಿಮಾ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿರುವುದು ಖುಷಿಯ ವಿಷಯವೇ. ಆದರೆ, ಇದರಿಂದ ಡೊಡ್ಮನೆ ಕುಡಿ ಯುವ ರಾಜ್​​​ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ' ರಿಲೀಸ್​ ಡೇಟ್​ ಮುಂದಕ್ಕೆ ಹೋಗಲಿದೆಯಾ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಯುವ ಬಿಡುಗಡೆ ದಿನಾಂಕ ಮುಂದೂಡಿಕೆ? ಎಲ್ಲರಿಗೂ ಗೊತ್ತಿರುವಂತೆ ಯುವ ರಾಜ್​​ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ'ವನ್ನು ನಿರ್ಮಿಸುತ್ತಿರುವುದು ಮತ್ತು ಯುವ ರಾಜ್​​ಕುಮಾರ್​ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಇದೇ ಖ್ಯಾತ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಯುವ ಚಿತ್ರದ ಮುಹೂರ್ತದ ದಿನವೇ, ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿತ್ತು. ಡಿಸೆಂಬರ್ 22ರಂದು ಬಿಡುಗಡೆ ಮಾಡುವುದಾಗಿ ಸಂಸ್ಥೆ ತಿಳಿಸಿತ್ತು. ಇದು ದೊಡ್ಡ ಸುದ್ದಿಯಾಗಿತ್ತು. ಇದೀಗ ಹೊಂಬಾಳೆ ಸಂಸ್ಥೆಯ ಸಲಾರ್ ಸಿನಿಮಾ ಬಿಡುಗಡೆಯನ್ನು ಅದೇ ದಿನದಂದು ನಿಗದಿಪಡಿಸಲಾಗಿದೆ. ಹಾಗಾಗಿ, ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿದೆಯೇ? ಅಥವಾ ಯುವ ಬಿಡುಗಡೆ ದಿನಾಂಕ ಮುಂದೋಗಲಿದೆಯೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಯುವ ಸಿನಿಮಾ ಶೂಟಿಂಗ್ ವಿಳಂಬ?! ಹೊಂಬಾಳೆ ಫಿಲ್ಮ್ಸ್​​ನ ಆಪ್ತರು ಹೇಳುವ ಪ್ರಕಾರ, ಯುವ ಸಿನಿಮಾದ ಶೂಟಿಂಗ್ ಡಿಸೆಂಬರ್ ಹೊತ್ತಿಗೆ ಮುಗಿಯೋದು ಕಷ್ಟ. ಹೀಗಾಗಿ, ಯುವ ಚಿತ್ರ ಬಿಡುಗಡೆ ಆಗಬೇಕಿದ್ದ ದಿನಾಂಕಕ್ಕೆ ಸಲಾರ್ ಸಿನಿಮಾವನ್ನು ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ಮಾಲೀಕ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಪ್ಪೆರಾಗ ಸಾಕ್ಷ್ಯಚಿತ್ರಕ್ಕೆ ಗ್ರೀನ್​ ಆಸ್ಕರ್​ ಪ್ರಶಸ್ತಿ: ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ

ಈ ಹಿಂದೆ ಸಲಾರ್ ಚಿತ್ರದ ಬಿಡುಗಡೆ ದಿನಾಂಕವನ್ನು ಕಳೆದ ವರ್ಷ ಏಪ್ರಿಲ್‍ 14ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಅದೇ ದಿನ ಹೊಂಬಾಳೆ ಫಿಲ್ಮ್ಸ್​ನ ಕೆಜಿಎಫ್‍ 2 ಬಿಡುಗಡೆಯಾದ ಕಾರಣ, ಕ್ಲಾಶ್‍ ತಪ್ಪಿಸಲು ಸಲಾರ್ ಬಿಡುಗಡೆ ಮುಂದೂಡಲಾಯಿತು. ಅದಕ್ಕೆ ಸರಿಯಾಗಿ ಸಲಾರ್ ಚಿತ್ರೀಕರಣವೂ ಮುಗಿದಿರಲಿಲ್ಲ. ಇದೀಗ ಯುವ ಚಿತ್ರದ ಚಿತ್ರೀಕರಣ ಮುಗಿಯದ ಕಾರಣ, ಆ ಚಿತ್ರವನ್ನು ಮುಂದಿನ ವರ್ಷಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿ, ಡಿಸೆಂಬರ್ 22ಕ್ಕೆ ಸಲಾರ್ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಕನ್ನಡದ ಕೀರ್ತಿ 'ಕಾಂತಾರ'ಕ್ಕೆ ಒಂದು ವರ್ಷ: ಬರಲಿದೆ ವರಾಹ ರೂಪಂ ವಿಡಿಯೋ ಸಾಂಗ್

ಕೆಜಿಎಫ್ 2 ಸಿನಿಮಾ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಸಖತ್​ ಸದ್ದು ಮಾಡುತ್ತಿದೆ. ಟೀಸರ್​‌ನಿಂದಲೇ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿದೆ. ಸೋಲಿನ ರುಚಿ ಕಂಡಿರುವ ಪ್ರಭಾಸ್​ಗೆ ಈ ಸಿನಿಮಾ ಗೆಲ್ಲೋದು ಬಹಳಾನೇ ಮುಖ್ಯವಾಗಿದೆ. ಡಿಸೆಂಬರ್ 22ಕ್ಕೆ ಸಲಾರ್ ಸಿನಿಮಾ ಬಿಡುಗಡೆ ಪಕ್ಕಾ ಆಗಿದೆ. ಇನ್ನೂ‌ ಯುವ ಚಿತ್ರದಲ್ಲಿ ಯುವ ರಾಜ್​​ಕುಮಾರ್ ಜೊತೆ ಸಪ್ತಮಿ ಗೌಡ ನಟಿಸುತ್ತಿದ್ದು, ಸಂತೋಷ್‍ ಆನಂದ್​ ರಾಮ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Last Updated : Sep 30, 2023, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.