ETV Bharat / entertainment

ಅಪ್ಪು ಹುಟ್ಟುಹಬ್ಬ: ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಂದ ನೆಚ್ಚಿನ ನಟನ ಸ್ಮರಣೆ - ಧೀರೇನ್‌ ರಾಮ್ ಕುಮಾರ್

ದಿವಂಗತ ಪುನೀತ್ ರಾಜ್‍ಕುಮಾರ್ ಅವರ 49ನೇ ಹುಟ್ಟುಹಬ್ಬದ ಅಂಗವಾಗಿ ಕಂಠೀರವ ಸ್ಟುಡಿಯೋದತ್ತ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

puneeth birthday
ಅಪ್ಪು ಹುಟ್ಟುಹಬ್ಬ
author img

By

Published : Mar 17, 2023, 10:44 AM IST

Updated : Mar 17, 2023, 12:09 PM IST

ಅಪ್ಪು ಹುಟ್ಟುಹಬ್ಬ

ಬೆಂಗಳೂರು: ಪುನೀತ್ ರಾಜ್‍ಕುಮಾರ್ ನಿಧನರಾಗಿ‌ ಒಂದೂವರೆ ವರ್ಷ ಕಳೆಯುತ್ತಾ ಬರ್ತಿದೆ. ಅಭಿಮಾನಿಗಳು ನೆಚ್ಚಿನ ನಟನ 49ನೇ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ. ಕಳೆದ ರಾತ್ರಿಯಿಂದಲೇ ಪುನೀತ್ ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಜಮಾಯಿಸುತ್ತಿರುವ ಸಾವಿರಾರು ಜನರು ಕೇಕ್‌ ಕಟ್ ಮಾಡುವ ಮೂಲಕ ಅಗಲಿದ ನಟನನ್ನು ಸ್ಮರಿಸುತ್ತಿದ್ದಾರೆ.

ಸಹೋದರರಾದ ಶಿವರಾಜ್ ಕುಮಾರ್ ಹಾಗು ರಾಘವೇಂದ್ರ ರಾಜ್‌ಕುಮಾರ್ ಕುಟುಂಬಸ್ಥರು ಪುನೀತ್ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಲಿದ್ದಾರೆ. ಆದರೆ, ಅಶ್ವಿನಿ ಪುನೀತ್ ರಾಜ್‍ಕುಮಾರ್ ದೊಡ್ಡ‌‌ ಮಗಳನ್ನು ನೋಡುವ ಸಲುವಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳ ಜೊತೆ ರಾಜ್‌ ಕುಟುಂಬ ಅಪ್ಪು ಹುಟ್ಟುಹಬ್ಬ ಆಚರಣೆ ಮಾಡಲಿದೆ.

ಇದನ್ನೂ ಓದಿ : ತಂದೆಯಂತೆ ಸಾಮಾಜಿಕ ಕಳಕಳಿಯ ಸಿನಿಮಾ: ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಮರ

ಅಪ್ಪು ಉತ್ಸವ ಮಾಡುವುದಕ್ಕೆ ಅಭಿಮಾನಿಗಳು ರೆಡಿಯಾಗಿದ್ದಾರೆ. ಸಮಾಧಿ ಬಳಿ ರಸಮಂಜರಿ, ಒಂದು ಲಕ್ಷ ಜನರಿಗೆ ಅನ್ನದಾನ ಹಾಗೂ ಅಪ್ಪು ನೆನಪಲ್ಲಿ 3,000 ಹೊಂಗೆ ಸಸಿಗಳನ್ನು ರಾಘವೇಂದ್ರ ರಾಜ್‌ ಕುಮಾರ್ ಉಡುಗೊರೆಯಾಗಿ ನೀಡಲಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಹತ್ತಿರ ಆಗಮಿಸಿದ್ದಾರೆ. ಈ ದಿನ ಪೂರ್ತಿ ಬರುವ ಅಭಿಮಾನಿಗಳಿಗೆ ಅಭಿಮಾನಿ ಸಂಘದವರು ಅನ್ನದಾನ ಮಾಡುವ‌ ಮೂಲಕ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

ಇದನ್ನೂ ಓದಿ : ಸ್ಫೂರ್ತಿಯ ಸೆಲೆಯಾಗಿದ್ದ 'ಅಪ್ಪು' ಬದುಕಿನ ಚಿತ್ರಣ: Photos

ಇದರ ಜೊತೆಗೆ ಅಪ್ಪುವಿಗೆ ಧೀರೇನ್‌ ರಾಮ್ ಕುಮಾರ್ ವಿಶೇಷ ಹಾಡೊಂದನ್ನು ಹಾಡುವ ಮೂಲಕ ಶುಭಾಶಯ ಹೇಳಿದ್ದಾರೆ. ಧೀರೇನ್ ಹಾಡಿರುವ ಈ ಹಾಡು ಭಾವನಾತ್ಮಕವಾಗಿ ಮೂಡಿ ಬಂದಿದೆ.

ಇದನ್ನೂ ಓದಿ : ಪುನೀತ್‌ ಬರ್ತ್‌ಡೇ ದಿನವೇ 'ಕಬ್ಜ' ರಿಲೀಸ್‌; ಅಭಿಮಾನಿಗಳ ಸಂಭ್ರಮ- ವಿಡಿಯೋ

ಪುನೀತ್​ ರಾಜ್​ಕುಮಾರ್​ ಬಗ್ಗೆ..: ಪುನೀತ್ ರಾಜ್‌ಕುಮಾರ್ 1975ರ ಮಾರ್ಚ್​ 17 ರಂದು ಜನಿಸಿದರು. ಇವರು ಡಾ.ರಾಜ್​​ಕುಮಾರ್ ಮತ್ತು ಪಾರ್ವತಮ್ಮ ರಾಜ್​​ಕುಮಾರ್ ಅವರ ಕಿರಿಯ ಪುತ್ರ. ಚಿಕ್ಕ ವಯಸ್ಸಿನಲ್ಲೇ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. 2021 ರ ಅಕ್ಟೋಬರ್​ 29 ರಂದು ಪುನೀತ್​ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿತ್ತು. ತಕ್ಷಣವೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಅವರು​ ಮೃತಪಟ್ಟಿದ್ದರು. ನೆಚ್ಚಿನ ನಟನ ಸಾವಿನ ಸುದ್ದಿ ಲಕ್ಷಾಂತರ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದೆರಗಿತ್ತು. ಕೆಲವು ಅಭಿಮಾನಿಗಳು ನೆಚ್ಚಿನ ನಟನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅನೇಕ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್ ಹೆಸರಿನಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ 'ಪರಮಾತ್ಮ'ನ ಜನ್ಮದಿನ: ಪುಣ್ಯ ಕಾರ್ಯಗಳಿಂದ ಅಪ್ಪು ಹುಟ್ಟುಹಬ್ಬ ಆಚರಣೆ

Last Updated : Mar 17, 2023, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.