ETV Bharat / entertainment

'7 ಸ್ಟಾರ್ ಸುಲ್ತಾನ' ಕುರುಬಾನಿ ಕೊಡದಿರಲು ನಿರ್ಧಾರ: ಫಲಿಸಿತು 'ಟಗರು ಪಲ್ಯ' ಚಿತ್ರತಂಡದ ಮನವಿ - tagaru palya

7 ಸ್ಟಾರ್ ಸುಲ್ತಾನ ಎಂಬ ಟಗರನ್ನು ಕುರುಬಾನಿ ಕೊಡದಿರಲು ಮಾಲೀಕ ಯುನೀಸ್ ಗಡೇದ್ ನಿರ್ಧಾರ ಮಾಡಿದ್ದಾರೆ.

7 Star Sultan tagaru
7 ಸ್ಟಾರ್ ಸುಲ್ತಾನನನ್ನು ಕುರುಬಾನಿ ಕೊಡದಿರಲು ನಿರ್ಧಾರ
author img

By

Published : Jun 27, 2023, 2:25 PM IST

Updated : Jun 27, 2023, 8:30 PM IST

7 ಸ್ಟಾರ್ ಸುಲ್ತಾನನನ್ನು ಕುರುಬಾನಿ ಕೊಡದಿರಲು ನಿರ್ಧಾರ

ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹುಟ್ಟಿಸಿರೋ ಸಿನಿಮಾ 'ಟಗರು ಪಲ್ಯ'. ಅಷ್ಟೇ ಅಲ್ಲ, ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಅಡಿ ನಿರ್ಮಿಸುತ್ತಿರುವ ಚಿತ್ರವಿದು. ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ಹಾಗೂ ಉಮೇಶ್ ಕೆ ಕೃಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ 7 ಸ್ಟಾರ್ ಸುಲ್ತಾನ ಎಂಬ ಟಗರು ಕೂಡ ಕಾಣಿಸಿಕೊಳ್ಳಲಿದೆ.

ಅನೇಕ ಟಗರು ಕಾಳಗಗಳಲ್ಲಿ ಗೆದ್ದು ಬೀಗಿರುವ 7 ಸ್ಟಾರ್ ಸುಲ್ತಾನ ಹೆಸರಿನ ಟಗರನ್ನು ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲು ಮಾಲೀಕರು ತೀರ್ಮಾನ ಮಾಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು. ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಕೂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದೆ. 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ಮಾಲೀಕರು ತೀರ್ಮಾನ ಮಾಡಿದ್ದಾರೆ.

7 Star Sultan tagaru
7 ಸ್ಟಾರ್ ಸುಲ್ತಾನನನ್ನು ಕುರುಬಾನಿ ಕೊಡದಿರಲು ನಿರ್ಧಾರ

ಟಗರು ಪಲ್ಯ ಸಿನಿಮಾದಲ್ಲಿ 7 ಸ್ಟಾರ್ ಸುಲ್ತಾನ: ಈ ಚಿತ್ರದಲ್ಲಿ ಟಗರು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ. ನಿರ್ದೇಶಕ ಉಮೇಶ್ ಕೆ ಕೃಪ ಹೇಳುವ ಹಾಗೆ, ಮೊದಲು ಈ ಚಿತ್ರದ ಶೂಟಿಂಗ್​ಗೆ ಟಗರು ಬೇಕೆಂದು ಇಡೀ ರಾಜ್ಯದಲ್ಲಿ 50ಕ್ಕೂ ಹೆಚ್ಚು ಟಗರುಗಳನ್ನು ಹುಡುಕಿದೆವು. ಆದರೆ ಕೆಲ ಟಗರುಗಳು ನೋಡ ನೋಡುತ್ತಿದ್ದಂತೆ ಗುದ್ದುತ್ತಿದ್ದವು, ಎಂಬ ಕಾರಣಕ್ಕೆ ಆ ಟಗರುಗಳನ್ನು ರಿಜೆಕ್ಟ್ ಮಾಡಲಾಯ್ತು. ಕೊನೆಗೆ ನಮಗೆ ಸಿಕ್ಕಿದ್ದೇ ಈ 7 ಸ್ಟಾರ್ ಟಗರು. ಈ ಟಗರು ನೋಡಲು ದೈತ್ಯಕಾರವಾಗಿ ಇದ್ರೂ, ಬಹಳ ಫ್ರೆಂಡ್ಲಿ ಟಗರು. ನಮ್ಮ ಶೂಟಿಂಗ್​​ನಲ್ಲಿ ಭಾಗಿಯಾಗಿದೆ. ಹೇಳಿಕೊಟ್ಟಂತೆ ನಾಗಭೂಷಣ್​​ ಹಾಗೂ ರಂಗಾಯಣ ರಘು ಅವರ ಜೊತೆ ನಟಿಸಿದೆ. ಇಂತಂಹ ಪ್ರೀತಿ ಇರುವ ಹಾಗು ಸಾಕಷ್ಟು ಬಹುಮಾನ ಗೆದ್ದಿರುವ ಈ 7 ಸ್ಟಾರ್ ಟಗರು ಈ ಬಕ್ರೀದ್ ಹಬ್ಬಕ್ಕೆ ಕುರುಬಾನಿ ಮಾಡುತ್ತಾರೆ ಅಂತಾ ತಿಳಿದ ತಕ್ಷಣ, ನಾನು ಮತ್ತು ನಮ್ಮ ನಿರ್ಮಾಪಕ ಧನಂಜಯ್ ಅವರು ಹೋಗಿ ಟಗರು ಮಾಲೀಕ ಯುನೀಸ್ ಅವರ ಮನಸ್ಸು ಬದಲಾಯಿಸಲು ಪ್ರಯತ್ನಿಸಿದೆವು. ಆ ಟಗರನ್ನು ನಾವೇ ಇಟ್ಟುಕೊಂಡು ಸಾಕುತ್ತೇವೆ. ಅದನ್ನು ನಮಗೆ ಕೊಡಿ. ಕಡಿಯೋದು ಬೇಡ ಅಂತಾ ಮನವಿ ಮಾಡಿಕೊಂಡ ಮೇಲೆ ಮಾಲೀಕರು ಮನಸ್ಸು ಬದಲಾಯಿಸಿದರು. ಈ 7 ಸ್ಟಾರ್ ಟಗರು ಇರುವರೆಗೂ ನಾನು ಸಾಕುತ್ತೇನೆ. ಇದನ್ನು ಕುರುಬಾನಿ ಮಾಡಲು ಬಿಡಲ್ಲ ಎಂಬ ದಿಟ್ಟ ನಿರ್ಧಾರ ಮಾಡಿದರು ಅಂತಾ ಟಗರು ಪಲ್ಯ ಚಿತ್ರದ ನಿರ್ದೇಶಕ ಉಮೇಶ್ ಕೆ ಕೃಪ ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡರು.

ಸಾಧಕ ಟಗರು.. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ‌ ಮಾಲೀಕ ಯುನೀಸ್ ಗಡೇದ್ ಎಂಬುವವರು ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ ಟಗರನ್ನು 1 ಲಕ್ಷ 88,500 ರೂ. ಗೆ ಖರೀದಿಸಿದ್ದರು. ಆದರೆ ಕುರುಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು, ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಇಲ್ಲಿಯವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದೆ. ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್​​ಗಳನ್ನು ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ ಎಂದು ಹೆಸರಿಟ್ಟರು. ಆದರೆ ಅಂದುಕೊಂಡಂತೆ ಈ ಬಾರಿ ಬಕ್ರೀದ್ ಹಬ್ಬಕ್ಕೆ ಈ ಟಗರನ್ನು ಕುರುಬಾನಿ ನೀಡಲು ನಿರ್ಧರಿಸಿದ್ದರು. ಸಾಧಕ ಟಗರನ್ನು ಕುರುಬಾನಿ ಕೊಡದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆ, ಚಿತ್ರತಂಡದ ಮನವಿಗೆ ಮಣಿದು 7 ಸ್ಟಾರ್ ಸುಲ್ತಾನನನ್ನು ಕುರುಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬಹುತಾರಾಗಣದ 'ಪ್ರಾಜೆಕ್ಟ್ ಕೆ': ಈ ಬಿಗ್​​ ಸ್ಟಾರ್ಸ್​ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ನಟರಾಕ್ಷಸ ಖ್ಯಾತಿಯ ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ‌ ಮೂರನೇ ಕೊಡುಗೆ ಟಗರು ಪಲ್ಯ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ ರಾವ್ ಕ್ಯಾಮರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ: ಕೆಲಸ ಕಳೆದುಕೊಂಡ ಮಹಿಳಾ ಬಸ್ ಡ್ರೈವರ್​ಗೆ ಕಾರ್​ ಗಿಫ್ಟ್​ ಕೊಟ್ಟ ನಟ ಕಮಲ್​ ಹಾಸನ್​

Last Updated : Jun 27, 2023, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.