ETV Bharat / entertainment

ಶಾರುಖ್ ಖಾನ್ ಕೈ ಹಿಡಿದೆಳೆದ ಅಭಿಮಾನಿ.. ತಂದೆಯ ನೆರವಿಗೆ ಬಂದ ಆರ್ಯನ್: ವಿಡಿಯೋ ವೈರಲ್ - ಶಾರುಖ್ ಖಾನ್ ಕೈ ಹಿಡಿದೆಳೆದ ಅಭಿಮಾನಿ

ಏರ್‌ಪೋರ್ಟ್‌ನಲ್ಲಿ ಅಭಿಮಾನಿಯೊಬ್ಬ ಬಲವಂತವಾಗಿ ಶಾರುಖ್ ಖಾನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಅವರ ಹಿರಿಯ ಮಗ ಆರ್ಯನ್ ಅಪ್ಪನ ನೆರವಿಗೆ ನಿಂತಿದ್ದಾರೆ.

shah rukh khan fan misbehaves
ಶಾರುಖ್ ಕೈ ಹಿಡಿದೆಳೆದ ಅಭಿಮಾನಿ..ತಂದೆಯ ನೆರವಿಗೆ ಬಂದ ಆರ್ಯನ್
author img

By

Published : Aug 9, 2022, 10:32 AM IST

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ತಮ್ಮ ಪುತ್ರರಾದ ಆರ್ಯನ್ ಖಾನ್, ಅಬ್ರಾಹಂ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಅಭಿಮಾನಿಯೊಬ್ಬ ಶಾರುಖ್ ಕೈಹಿಡಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇತ್ತೀಚೆಗೆ ಈ ಘಟನೆ ನಡೆದಿದ್ದು, ಶಾರುಖ್ ಪುತ್ರರ ಜೊತೆ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಕೂಡ ಇದ್ದರು. ಈ ವೇಳೆ, ಏಕಾಏಕಿ ಬಂದ ಈ ಅಭಿಮಾನಿ ಅನುಚಿತ ವರ್ತನೆ ತೋರಿ ಕೈ ಹಿಡಿದು ಶಾರುಖ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದ.

ಶಾರುಖ್ ಕೈ ಹಿಡಿದೆಳೆದ ಅಭಿಮಾನಿ..ತಂದೆಯ ನೆರವಿಗೆ ಬಂದ ಆರ್ಯನ್

ಇದರಿಂದ ಒಂದು ಕ್ಷಣ ಅವಾಕ್ಕಾದ ಶಾರುಖ್ ಹೆಜ್ಜೆ ಹಿಂದಿಟ್ಟಿದ್ದಾರೆ. ಇದನ್ನು ಗಮನಿಸಿದ ಪುತ್ರ ಆರ್ಯನ್ ತಕ್ಷಣ ಅಪ್ಪನ ಪಕ್ಕ ಬಂದು ನಿಂತಿದ್ದಾರೆ. ಜೊತೆಗೆ ಸೆಕ್ಯೂರಿಟಿಯವರು ಸಹ ಸುತ್ತುವರೆದಿದ್ದಾರೆ. ಫೋಟೋಗಾಗಿ ಪಾಪರಾಜಿಗಳು ಕೂಗುತ್ತಿದ್ದರೂ ಶಾರುಖ್ ಖಾನ್ ಮತ್ತು ಅವರ ಪುತ್ರರು ಇದನ್ನು ಲೆಕ್ಕಿಸದೇ ಎರಡು ಕಾರುಗಳಲ್ಲಿ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕೆರೆಬಿಯನ್​ ಲೀಗ್​ ಮಹಿಳಾ ಟೀಂ ಖರೀದಿಸಿದ ಶಾರುಖ್​ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.