ETV Bharat / entertainment

ಫ್ಯಾನ್ಸ್​ ಕೇಳಿದ ಸಮಸ್ಯೆಗಳ ಪ್ರಶ್ನೆಗೆ ನಟಿ ಸಮಂತಾ ಕೊಟ್ಟ ಉತ್ತರವೇನು? - ಈಟಿವಿ ಭಾರತ ಕನ್ನಡ

ನಟಿ ಸಮಂತಾ ಅಭಿಮಾನಿಗಳೊಂದಿಗೆ ಟ್ವಿಟರ್​ನಲ್ಲಿ ನಡೆಸಿದ ಸಂವಾದದಲ್ಲಿ ಅವರೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Samantha
ನಟಿ ಸಮಂತಾ
author img

By

Published : Apr 10, 2023, 1:58 PM IST

ದಕ್ಷಿಣ ಚಿತ್ರರಂಗದ ಟಾಪ್​ ನಟಿ ಸಮಂತಾ ರುತ್​ ಪ್ರಭು ತಮ್ಮ ಮುಂಬರುವ 'ಶಾಕುಂತಲಂ' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಮೋಶನ್​ ನಡುವೆಯೂ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡುತ್ತ ಸದ್ಯ ಸಖತ್​ ಸುದ್ದಿಯಲ್ಲಿದ್ದಾರೆ. ಇದೀಗ ಅವರು ತಮ್ಮ ಜೀವನದಲ್ಲಾಗುತ್ತಿರುವ ಅನೇಕ ಸಮಸ್ಯೆಗಳನ್ನು ಎದುರಿಸಿ ಹೇಗೆ ಮುಂದುವರೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳೊಂದಿಗೆ ಟ್ವಿಟರ್​ನಲ್ಲಿ ನಡೆಸಿದ ಸಂವಾದದಲ್ಲಿ ಅವರೆಲ್ಲಾ ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿದ್ದಾರೆ.

"ನೀವು ಎಲ್ಲಿಂದ ಇಷ್ಟೊಂದು ಶಕ್ತಿ ಪಡೆಯುತ್ತೀರಿ? ನಿಮ್ಮ ಜೀವನದಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ನಡೆದರೂ ನೀವು ಹೇಗೆ ಬಲವಾಗಿ ಮುಂದುವರೆಯುತ್ತೀರಿ?" ಎಂಬ ನೆಟ್ಟಿಗರೊಬ್ಬರ ಪ್ರಶ್ನೆಗೆ, "ಏಕೆಂದರೆ ನನ್ನ ಕಥೆ ಹೀಗೆ ಕೊನೆಗೊಳ್ಳುವುದಿಲ್ಲ. ನಾನು ಮುಂದುವರೆಯಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ. ಮತ್ತೊಬ್ಬರು, "ನಿಮ್ಮ ಪ್ರಕಾರ ಆತ್ಮ ಗೌರವ ಮತ್ತು ಸ್ವಯಂ ಪ್ರೀತಿ ಎಂದರೇನು?" ಎಂದು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ, "ಬೇರೆಯವರನ್ನು ನೋಡಿ ನೀವು ನಿಮ್ಮನ್ನು ಕಂಡುಕೊಳ್ಳಬೇಡಿ. ನೀವು ನಿಮ್ಮ ಜೊತೆಯೇ ಖುಷಿಯಾಗಿರಿ" ಎಂದು ಉತ್ತರಿಸಿದ್ದಾರೆ.

ನಂತರ ಅಭಿಮಾನಿಯೊಬ್ಬರು, "ನಿಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸಂಭವಿಸುವ ಗೆಲುವು ಮತ್ತು ಸೋಲನ್ನು ನೀವು ಹೇಗೆ ಸ್ವೀಕರಿಸುತ್ತೀರಿ? ಈ ಎರಡು ವಿಷಯಗಳನ್ನು ಮನಸ್ಸಿನಿಂದ ಮತ್ತು ಬುದ್ಧಿಯಿಂದ ಹೇಗೆ ನಿಯಂತ್ರಿಸುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು, "ನನ್ನ ಪ್ರಕಾರ ಯಶಸ್ಸಿಗಿಂತ ಸೋಲುಗಳೇ ನಿಮಗೆ ದೊಡ್ಡ ಪಾಠವನ್ನು ಕಲಿಸುತ್ತದೆ. ವೈಫಲ್ಯಗಳು ಯಾವಾಗಲೂ ನಿಮ್ಮನ್ನು ಉತ್ತಮವಾಗಿ ಬದಲಾಯಿಸುತ್ತದೆ" ಎಂದು ಹೇಳಿದ್ದಾರೆ.

ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.. ನಾಗ ಚೈತನ್ಯ ಜೊತೆಗಿನ ಸಂಬಂಧ ವಿಫಲವಾಗಿರುವ ಬಗ್ಗೆ ಸಮಂತಾ ಇತ್ತೀಚೆಗೆ ಮಾತನಾಡಿದ್ದಾರೆ. ಪ್ರೀತಿ, ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಶೇ. 100 ರಷ್ಟು ತನ್ನ ಕರ್ತವ್ಯ ನಿಭಾಯಿಸಿದೆ. ದುರಾದೃಷ್ಟವಶಾತ್ ಅದು ಕೆಲಸ ಮಾಡಲಿಲ್ಲ. ಈ ಹಿನ್ನೆಲೆ, ತಾನಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ನಟಿ ಹೇಳಿದ್ದಾರೆ. ಮತ್ತೊಂದೆಡೆ, ನಟ, ವಿಚ್ಛೇದಿತ ಪತಿ ನಾಗ ಚೈತನ್ಯ ಮೇಲ್ನೋಟಕ್ಕೆ ಜೀವನದಲ್ಲಿ ಮುಂದುವರೆದಿದ್ದಾರೆ. ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.

ಇದನ್ನೂ ಓದಿ: ಮಹೇಶ್​ ಬಾಬು ಕಿಲ್ಲಿಂಗ್​ ಲುಕ್​ಗೆ ಹೆಂಡತಿ ನಮ್ರತಾ ಕಮೆಂಟ್​; 'ಟಾಲಿವುಡ್​ನ ಗ್ರೀಕ್​ ದೇವತೆ' ಎಂದ ಅಭಿಮಾನಿ

ನಟ ದೇವ್ ಮೋಹನ್​ ಜೊತೆ ನಟಿ ಸಮಂತಾ ರುತ್ ಪ್ರಭು ಸ್ಕ್ರೀನ್​ ಶೇರ್ ಮಾಡಿರುವ ಈ ಶಾಕುಂತಲಂ ಚಿತ್ರ ಇದೇ ಏಪ್ರಿಲ್​ 14 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಹುನಿರೀಕ್ಷಿತ ಚಿತ್ರ ತೆಲುಗು, ಕನ್ನಡ, ತಮಿಳು, ಮಲಯಾಳಂ, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ. ಈ ಹಿನ್ನೆಲೆ ನಟಿ ಬ್ಯಾಕ್​ ಟು ಬ್ಯಾಕ್​ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಬಗೆ ಬಗೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರಚಾರದ ವೇಳೆ ವೈಯಕ್ತಿಕ ಜೀವನದ ಕೆಲ ವಿಷಯಗಳು ಕೂಡಾ ಹೊರಬರುತ್ತಿದೆ.

ಇದನ್ನೂ ಓದಿ: 'ವೇದ್' ಸಕ್ಸಸ್‌: ರಿತೇಶ್ ದೇಶ್​​ಮುಖ್​-ಜೆನಿಲಿಯಾಗೆ ಕಿಚ್ಚ ಸುದೀಪ್ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.