ವಿಶ್ವವಿಖ್ಯಾತ ಇಬ್ಬರು ಸುಂದರಿಯರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2020ರ ಮಿಸ್ ಅರ್ಜೆಂಟೀನಾ ಆದ ಮರಿಯಾನಾ ವರೆಲಾ (Mariana Varela) ಮತ್ತು ಮಿಸ್ ಪೋರ್ಟೊ ರಿಕೊವನ್ನು ಗೆದ್ದ ಫ್ಯಾಬಿಯೊಲಾ ವ್ಯಾಲೆಂಟಿನ್ (Fabiola Valentin) ಅವರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ, ನಂತರ ತಾವು ಮದುವೆಯಾಗಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ.
![Fabiola Valentin Mariana Varela same sex marriage](https://etvbharatimages.akamaized.net/etvbharat/prod-images/16822211_newsssss.jpg)
ಈ ಇಬ್ಬರೂ 2020ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ (MGI) ನಲ್ಲಿ ಭೇಟಿಯಾಗಿದ್ದರು. ಆ ಸ್ಪರ್ಧೆ ಕೊನೆಗೊಂಡ ನಂತರ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಈ ಸ್ನೇಹ ಪರಸ್ಪರ ಪ್ರೀತಿಗೆ ತಿರುಗಿದ್ದು, ಕಳೆದ ಎರಡು ವರ್ಷಗಳಿಂದ ರಹಸ್ಯ ಡೇಟಿಂಗ್ನಲ್ಲಿದ್ದರು. ಅಕ್ಟೋಬರ್ 30ರಂದು ಅವರು ತಮ್ಮ ಮದುವೆ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದು, ಇಬ್ಬರ ಅಭಿಮಾನಿಗಳು ಶಾಕ್ ಆಗಿದ್ದಾರೆ. ವರೆಲಾ ಮತ್ತು ವ್ಯಾಲೆಂಟಿನ್ ಅಕ್ಟೋಬರ್ 28 ರಂದು ಮದುವೆ ಆಗಿದ್ದಾರೆ.
![Fabiola Valentin Mariana Varela same sex marriage](https://etvbharatimages.akamaized.net/etvbharat/prod-images/16822211_dxnvfhrzds.jpg)
ನಮ್ಮ ಈ ಸಂಬಂಧವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಿರ್ಧರಿಸಿದ್ದೆವು. ಇದೀಗ ವೈವಾಹಿಕ ಬಂಧನಕ್ಕೆ ಒಳಗಾಗಿದ್ದು, ಅ.28 ಅನ್ನು ನಮ್ಮ ವಿಶೇಷ ದಿನವಾಗಿ ಘೋಷಿಸಲು ಬಯಸುತ್ತೇವೆ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: 'ನಟ ಜ್ಯೂ.ಎನ್‌ಟಿಆರ್ ಒಬ್ಬ ಲೆಜೆಂಡ್...': ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಗುಣಗಾನ