ETV Bharat / entertainment

ದೇಶದಲ್ಲಿ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳು!

author img

By

Published : Sep 10, 2022, 7:14 PM IST

ಫಾನ್ಸ್​ ಫಾಲೋವಿಂಗ್​ ಹೆಚ್ಚಾದಂತೆ ಕೆಲವು ಸೆಲೆಬ್ರಿಟಿಗಳ ಜೀವನ ಶೈಲಿಯೂ ಬದಲಾಗುತ್ತದೆ. ಇದು ಕೆಲವರ ಕಥೆಯಾದರೆ ಇನ್ನು ಕೆಲವು ತಾರೆಯರು ತಮ್ಮ ಇಷ್ಟದಂತೆ ಬದುಕುವವರು ಇದ್ದಾರೆ. ಐಷಾರಾಮಿಗೆ ಹೆಸರುವಾಸಿಯಾಗಿರುವ ಸೆಲೆಬ್ರಿಟಿಗಳು ಹೆಚ್ಚಾಗಿ ಯಾವ ಕಾರುಗಳನ್ನು ಬಳಸುತ್ತಾರೆ ಗೊತ್ತಾ?

Expensive cars owned by Bollywood celebrities
ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಇತ್ತೀಚೆಗೆ 3.73 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್​ ಹುಟ್ಟಿಹಾಕಿದರು. ಈ ಕಾರನ್ನು ಹೊಂದಿದ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆ ಕೂಡ ಕಾರ್ತಿಕ್ ಗಳಿಸಿಕೊಂಡರು. ಇವರಲ್ಲದೇ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಹತ್ತು ಹಲವು ಐಷಾರಾಮಿ ಕಾರುಗಳನ್ನು ಹೊಂದಿದವರಿದ್ದಾರೆ. ಪ್ರಮುಖವಾಗಿ ಯಾವ ನಟ ಯಾವ ಕಾರನ್ನು ಹೊಂದಿದ್ದಾರೆ? ಮತ್ತು ಆ ಕಾರಿನ ಬೆಲೆ ಎಷ್ಟು ಅನ್ನೋದನ್ನು ಇಲ್ಲಿ ಫೋಟೋ ಸಹಿತ ನೋಡಬಹುದು.

ಕಾರ್ತಿಕ್ ಆರ್ಯನ್

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​ ಐಷಾರಾಮಿ ಕಾರುಗಳ ದೊಡ್ಡ ಅಭಿಮಾನಿ. ಹತ್ತಾರು ರಾಯಲ್​ ಕಾರುಗಳನ್ನು ಹೊಂದಿರುವ ಅವರು ಜಾಲಿ ರೈಡರ್ ಕೂಡ ಹೌದು. ಇನ್ನು ಅವರು ಓಡಿಸುವ ಕಾರುಗಳ ಬೆಲೆ ಕೇಳಿದರೆ ಕೆಲವರಿಗೆ ತಲೆ ಸುತ್ತು ಬರಬಹುದು. ಸದ್ಯ ಅವರ ಬಳಿ ಇರುವ ಅತ್ಯಂತ ದುಬಾರಿ ಕಾರು ಎಂದರೆ ಅದು 12 ಕೋಟಿ ರೂಪಾಯಿ ಮೌಲ್ಯದ ಬುಗಾಟಿ ವೆಯ್ರಾನ್! ಇದು ರಸ್ತೆಯಲ್ಲಿ ಮೃಗದಂತೆ ಓಡಿಸುವ ಸೂಪರ್ ಕಾರ್ ಆಗಿದೆ. ಬುಗಾಟಿಯ ಹೊರತಾಗಿ ಅವರ ಬಳಿ ರೋಲ್ಸ್ ರಾಯ್ಸ್, ಮರ್ಸಿಡಿಸ್, BMW ಮತ್ತು Audi ನಂತಹ ಇತರ ಹಲವು ಐಷಾರಾಮಿ ಕಾರುಗಳು ಇವೆ.

ಮತ್ತೋರ್ವ ನಟ ಅಜಯ್ ದೇವಗನ್ ಕೂಡ ಕಾರು ಪ್ರಿಯರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಅವರು ಸದ್ಯ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಲಿನನ್ ಓಡಿಸುತ್ತಾರೆ. ಇದರ ಬೆಲೆ ಸರಿಸುಮಾರು 6.95 ಕೋಟಿ ರೂ. ಆಗಿದೆ. ಅದ್ಧೂರಿ ಒಳಾಂಗಣ ಈ ಕಾರಿನ ಶ್ರೀಮಂತಿಕೆ. ಹಾಗಾಗಿ ಈ ಕಾರನ್ನು 'ಆರ್ಕಿಟೆಕ್ಚರ್ ಆಫ್ ಐಷಾರಾಮಿ' ಎಂದು ಹೇಳಲಾಗುತ್ತದೆ. ಈ ಕಾರು ಹೊರತುಪಡಿಸಿ ಅವರು ಇತರ ಭವ್ಯವಾದ ವಾಹನಗಳ ಸಮೂಹವನ್ನು ಹೊಂದಿದ್ದಾರೆ. ಅವರು ಮಾಸೆರೋಟಿ, ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಮತ್ತು ರೇಂಜ್ ರೋವರ್ ಕಾರುಗಳ ಮಾಲೀಕರು ಹೌದು.

ಅಮೀರ್ ಖಾನ್

ಬಾಲಿವುಡ್​​ನ ಮತ್ತೋರ್ವ ಅಮೀರ್ ಖಾನ್ ಸದ್ಯ Mercedes-Benz Maybach S600 ಅನ್ನು ಹೊಂದಿದ್ದಾರೆ. ಅದರ ಬೆಲೆ ಸುಮಾರು 2.5 ಕೋಟಿ ರೂ. ಆಗಿದೆ. ಈ ಕಾರಿನ ಬೆಲೆ ಇಷ್ಟಾದರೆ ಅಮೀರ್ ಖಾನ್ ತಮಗೆ ಸರಿಹೊಂದುವಂತೆ ಇದೇ ಕಾರನ್ನು ಮಾರ್ಪಾಡು ಮಾಡಿಸಲು ಮತ್ತಷ್ಟು ಮೊತ್ತ ಭರಿಸಿದ್ದು ವಿಶೇಷವಂತೆ. ವಿವಿಐಪಿಗಳಿಗೆ ಮಾತ್ರ ಲಭ್ಯವಿರುವಂತೆ ಈ ಕಾರನ್ನು ಮಾರ್ಪಾಡು ಮಾಡಿಸಿದ್ದಾರಂತೆ. ಅಲ್ಲದೇ ಶಸ್ತ್ರಸಜ್ಜಿತದೊಂದಿಗೆ ಅಗ್ನಿಶಾಮಕ ಮತ್ತು ಭದ್ರತಾ ಎಚ್ಚರಿಕೆಯ ವ್ಯವಸ್ಥೆಯನ್ನು ಹೊಂದಿದೆ. ಹಾಗಾಗಿ ವಾಹನದ ಬೆಲೆ ಸುಮಾರು 10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪತಿಯೊಂದಿಗೆ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ನಾಯಿಗಾಗಿಯೇ 36 ಲಕ್ಷದ ಜಾಕೆಟ್‌ ಖರೀದಿಸಿದ ನಟಿ! ಇನ್ನು ಕಾರುಗಳೆಂದರೆ ಊಹಿಸಬೇಕಿಲ್ಲ. ದುಬಾರಿ ಮೌಲ್ಯದ ವಸ್ತುಗಳ ಖರೀದಿಗೆ ಮುಂದಿರುವ ನಟಿಗೆ ಇದೀಗ ಮತ್ತೊಂದು ದುಬಾರಿ ಉಡುಗೊರೆ ಸೇರಿದೆ. ಪತ್ನಿಯ ಅಭಿರುಚಿಗೆ ತಕ್ಕಂತೆ ಮಾಡಿಫಿಕೇಶನ್ ಮಾಡಿಸಿರುವ ಮರ್ಸಿಡಿಸ್ ಮೇಬ್ಯಾಕ್ S650 ಅನ್ನು ಪತಿ ನಿಕ್ ಜೋನಾಸ್ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ ಅಂದಾಜು 2.73 ಕೋಟಿ ರೂ! ಅಷ್ಟೇ ಅಲ್ಲ, ಮುಂಬೈನ ತನ್ನ ಗ್ಯಾರೇಜ್‌ನಲ್ಲಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಅನ್ನು ಇತ್ತೀಚೆಗೆ ಮಾರಾಟ ಮಾಡಿದ್ದು ಆ ಕಾರಿನ ಮೌಲ್ಯ ಸುಮಾರು 2.5 ಕೋಟಿ ರೂ. ಅಂತೆ.

ಹೃತಿಕ್ ರೋಷನ್

ಗ್ಯಾಜೆಟ್‌ಗಳು ಮತ್ತು ವಾಹನಗಳನ್ನು ಸಂಗ್ರಹಿಸುವ ಹವ್ಯಾಸಿ ಎಂದು ಹೆಸರುವಾಸಿಯಾಗಿರುವ ಹೃತಿಕ್ ರೋಷನ್ ರೋಲ್ಸ್ ರಾಯ್ಸ್ ಘೋಸ್ಟ್ ಸರಣಿ II ಅನ್ನು ಹೊಂದಿದ್ದಾರೆ. ಇದರ ಮೂಲ ಬೆಲೆ ಸರಿದುಮಾರು 5 ಕೋಟಿ ರೂ! ಆ ಕಾರನ್ನು ಮಾಡಿಫಿಕೇಶನ್ ಮಾಡಲೆಂದೇ ಅವರು ಎರಡು ಕೋಟಿ ರೂಪಾಯಿ ಭರಿಸಿದ್ದಾರಂತೆ. ಕಾರಿನ ಬೆಲೆಯೇ ದುಬಾರಿ ಅಂತ ಅಂದುಕೊಳ್ಳುವ ಹಲವರು ಅದರ ಮಾಡಿಫಿಕೇಶನ್​ಗೆ ಅಚ್ಚರಿ ವ್ಯಕ್ತಪಡಿಸಿದ್ದುಂಟು. ಸ್ಟೈಲಿಶ್ ವಾಹನಗಳನ್ನು ಇಷ್ಟಪಡುವ ಅವರು ಇದಲ್ಲದೇ ಫೆರಾರಿ 360 ಮೊಡೆನಾ ಮತ್ತು ಆಸ್ಟನ್ ಮಾರ್ಟಿನ್ ರಾಪಿಡ್ ಎಸ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ.

ಇದನ್ನೂ ಓದಿ: ಭಾರತದ ಕೊಹಿನೂರ್​ ಸೇರಿ ಬ್ರಿಟನ್​ ದೋಚಿದ ಅಮೂಲ್ಯ ವಸ್ತುಗಳ್ಯಾವುವು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.