ETV Bharat / entertainment

ನಂದ ಕಿಶೋರ್ ​- ಮೋಹನ್​ಲಾಲ್​ 'ವೃಷಭ' ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಶನಯಾ ಕಪೂರ್ - ಬೇಧಡಕ್

ನಂದ ಕಿಶೋರ್ ನಿರ್ದೇಶನದ ಮೋಹನ್​ಲಾಲ್​ ನಟನೆಯ 'ವೃಷಭ' ಸಿನಿಮಾದಲ್ಲಿ ಶನಯಾ ಕಪೂರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Vrushabha
ವೃಷಭ
author img

By

Published : Jul 15, 2023, 4:53 PM IST

ಬಾಲಿವುಡ್​ ನಟ ಸಂಜಯ್​ ಕಪೂರ್​ ಮತ್ತು ಆಭರಣ ವಿನ್ಯಾಸಕಿ ಮಹೀಪ್​ ಕಪೂರ್​ ಅವರ ಪುತ್ರಿ ಶನಯಾ ಕಪೂರ್​ ಅವರು ಕರಣ್​ ಜೋಹರ್​ ಅವರ 'ಬೇಧಡಕ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ನಟಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೊದಲೇ ಮತ್ತೊಂದು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ಲಾಲ್​ ಅವರ ಮುಂಬರುವ 'ವೃಷಭ' ಚಿತ್ರದಲ್ಲಿ ಶನಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಲ್ಮಾ ಅಘಾ ಅವರ ಪುತ್ರಿ ಜಹ್ರಾ ಎಸ್ ಖಾನ್ ಕೂಡ ಈ ಸಿನಿಮಾದ ಭಾಗವಾಗಲಿದ್ದಾರೆ. 'ವೃಷಭ' 2024ರ ಬಹುದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ. ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರ ಸೆಟ್ಟೇರಲಿದೆ.

ಬಾಲಿವುಡ್​ ಸ್ಟಾರ್ ನಿರ್ಮಾಪಕಿ ಏಕ್ತಾ ಕಪೂರ್​ ಅವರು ಬಾಲಾಜಿ ಟೆಲಿಫಿಲ್ಮ್ಸ್​ ಮೂಲಕ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾನ್​ ಇಂಡಿಯಾ ಸಿನಿಮಾಗೆ ದುಡ್ಡು ಹಾಕಲಿದ್ದಾರೆ. ಕನ್ನಡದಲ್ಲಿ ಅಧ್ಯಕ್ಷ, ರನ್ನ, ಪೊಗರುನಂತಹ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿರುವ ನಂದ ಕಿಶೋರ್​ 'ವೃಷಭ'ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ಬೇರೆ ಭಾಷೆಯಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ ಜೂ. ಎನ್​​ಟಿಆರ್​ - ಮಹೇಶ್​ ಬಾಬು ಮಕ್ಕಳು

ಏಕ್ತಾ ಕಪೂರ್ ಪೋಸ್ಟ್​: ಕೆಲವು ದಿನಗಳ ಹಿಂದೆ ಏಕ್ತಾ ಕಪೂರ್​ ಅವರು ವೃಷಭ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿ ಸೋಷಿಯಲ್​ ಮೀಡಿಯಾದ ಮೂಲಕ ಘೋಷಿಸಿದ್ದರು. "ದಿಗ್ಗಜ ನಟ ಮೋಹನ್​ಲಾಲ್​ ಅವರೊಂದಿಗೆ ಕೆಲಸ ಮಾಡಲು ತುಂಬಾ ಉತ್ಸುಕಳಾಗಿದ್ದೇನೆ. ಬಾಲಾಜಿ ಟೆಲಿಫಿಲ್ಮ್ಸ್​ ಕನೆಕ್ಟ್​ ಮೀಡಿಯಾ ಮತ್ತು ಎವಿಎಸ್​ ಸ್ಟುಡಿಯೋಸ್​ 'ವೃಷಭ'ಕ್ಕಾಗಿ ಜೊತೆಯಾಗಲಿದೆ. ಹೆಚ್ಚಿನ ಎಮೋಷನ್ಸ್​ ಮತ್ತು ವಿಎಫ್​ಎಕ್ಸ್​ಗಳೊಂದಿಗೆ ಸಿನಿಮಾ ಆಕ್ಷನ್​ ಎಂಟರ್​ಟೈನರ್​ ಆಗಿರಲಿದೆ. 'ವೃಷಭ' 2024ರ ಅತಿದೊಡ್ಡ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು ನಂದ ಕಿಶೋರ್​ ನಿರ್ದೇಶನ ಮಾಡಲಿದ್ದಾರೆ. ಮಲಯಾಳಂ, ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಏಕಕಕಾಲಕ್ಕೆ ಬಿಡುಗಡೆಯಾಗಲಿದೆ" ಎಂದು ತಿಳಿಸಿದ್ದರು.

ನಂದ ಕಿಶೋರ್ ಅವರು ಈ ಹಿಂದೆ ಎಂಟು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಲ್ಲವೂ ಸೂಪರ್​ ಹಿಟ್​ ಆಗಿವೆ. 'ವೃಷಭ' ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದು, ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ವೃಷಭ' ಕಥೆಯು ಆ್ಯಕ್ಷನ್ ಮತ್ತು ಭಾವನೆಗಳಿಂದ ತುಂಬಿದ ತಂದೆ ಮತ್ತು ಮಗನ ಮೇಲೆ ಕೇಂದ್ರೀಕೃತವಾಗಿದೆ ಎಂದು ವರದಿಯಾಗಿದೆ. ಮಾಲಿವುಡ್​ ದಿಗ್ಗಜ ಮೋಹನ್​ ಲಾಲ್​ ಅವರು, 'ಲೂಸಿಫರ್​ 2' ಮತ್ತು 'ಮಲೈಕೊಟ್ಟೈ ವಾಲಿಬನ್​' ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ಪ್ರತಿಭಟನೆಗೆ ಪ್ರಿಯಾಂಕಾ ಸಾಥ್ - ವಿದೇಶದಲ್ಲಿ ರಾಜಕೀಯ ನಿಲುವು ನಟರ ಮೇಲೆ ಪರಿಣಾಮ ಬೀರಲ್ಲ ಎಂದ ಭಾರತೀಯ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.