ETV Bharat / entertainment

ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಆರೋಪ: ಪೊಲೀಸರೆದುರು ಹೇಳಿಕೆ ದಾಖಲಿಸಿದ ಎಲ್ವಿಶ್​ ಯಾದವ್ - ಎಲ್ವಿಶ್​ ಯಾದವ್ ವಿಚಾರಣೆ

ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ವಿಶ್​ ಯಾದವ್ ಪೊಲೀಸರೆದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

elvish yadav
ಎಲ್ವಿಶ್​ ಯಾದವ್
author img

By ETV Bharat Karnataka Team

Published : Nov 8, 2023, 7:33 PM IST

Updated : Nov 8, 2023, 7:46 PM IST

ನೋಯ್ಡಾ (ನವದೆಹಲಿ): ಜನಪ್ರಿಯ ಯೂಟ್ಯೂಬರ್​, ಹಿಂದಿ ಬಿಗ್​ ಬಾಸ್​ ಒಟಿಟಿ 2ರ ವಿಜೇತ ಎಲ್ವಿಶ್​ ಯಾದವ್​​ ಕಾನೂನು ಹೋರಾಟ ಮುಂದುವರಿಸಿದ್ದಾರೆ. ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದು, ನಿನ್ನೆ ರಾತ್ರಿ ಪೊಲೀಸ್​ ಠಾಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಯ್ಡಾ ಪೊಲೀಸರು ಎಲ್ವಿಶ್​ ಯಾದವ್​ ಅವರಿಗೆ ಇತ್ತೀಚೆಗಷ್ಟೇ ನೋಟಿಸ್​ ಕಳುಹಿಸಿದ್ದರು.

ಎಲ್ವಿಶ್ ಯಾದವ್ ಅವರು ನೋಯ್ಡಾ ಪೊಲೀಸ್​ ಠಾಣೆ ಸೆಕ್ಟರ್ 20ಕ್ಕೆ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ನೋಯ್ಡಾ ಪೊಲೀಸರು ಎಲ್ವಿಶ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ಪೊಲೀಸರು ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಾದ ನಂತರ ಎಲ್ವಿಶ್‌ ಅವರಿಗೆ ಹೋಗಲು ಅನುಮತಿ ನೀಡಲಾಯಿತು. ಮತ್ತೆ ವಿಚಾರಣೆ ನಡೆಸಲಾಗುವುದೆಂದು ಕೂಡ ಸೂಚಿಸಿದರು.

ಯಾವ್ಯಾವ ಸ್ಥಳಗಳಲ್ಲಿ ಪಾರ್ಟಿಗಳು ನಡೆಯುತ್ತಿದ್ದವು ಎಂಬ ಪ್ರಶ್ನೆ ಸೇರಿದಂತೆ ಸುಮಾರು 15 ರಿಂದ 20 ಪ್ರಶ್ನೆಗಳನ್ನು ಎಲ್ವಿಶ್ ಯಾದವ್‌ ಅವರಲ್ಲಿ ಕೇಳಲಾಯಿತು. ಹಾವಿನ ವಿಷ ಬಳಕೆ ಮತ್ತು ಹಾವುಗಳ ಪ್ರದರ್ಶನದ ಬಗ್ಗೆಯೂ ಕೇಳಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಎಲ್ವಿಶ್ ಯಾದವ್ ಅವರು ಬಹಳ ಭಯಭೀತರಾಗಿ ಕಾಣಿಸಿಕೊಂಡಿದ್ದು, ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರಂತೆ.

ಎಲ್ವಿಶ್ ಯಾದವ್ ಮಂಗಳವಾರ ತಡರಾತ್ರಿ ತಮ್ಮ ವಕೀಲರೊಂದಿಗೆ ಬಂದಿದ್ದರು ಎಂದು ನೋಯ್ಡಾ ಡಿಸಿಪಿ ಹರೀಶ್ ಚಂದರ್ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಸಲಾಗಿದ್ದು, ಮೂಲ ಮಾಹಿತಿ ಪಡೆಯಲಾಗಿದೆ. ವಿಚಾರಣೆ ಅಥವಾ ಹೇಳಿಕೆ ದಾಖಲಿಸಲು ಮತ್ತೊಮ್ಮೆ ಅವರನ್ನು ಕರೆಸುವ ಸಾಧ್ಯತೆಗಳಿವೆ. ಪ್ರಕರಣಕ್ಕೆ ಸಂಬಂಧಪಟ್ಟ ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್​ ದೇವರಕೊಂಡ ಪ್ರತಿಕ್ರಿಯೆ

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಹಾವಾಡಿಗರ (ಐವರು) ವಿಚಾರಣೆಯೂ ನಡೆದಿದೆ. ಪೊಲೀಸ್​ ದಾಳಿ ಸಂದರ್ಭ ಸಿಕ್ಕ ಆ ಹಾವಾಡಿಗರ 9 ಹಾವುಗಳನ್ನು ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಹಾವುಗಳು ವಿಷಕಾರಿಯಲ್ಲ ಎಂಬುದು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ 9 ಹಾವುಗಳು ಎಲ್ವಿಶ್ ಯಾದವ್ ಪ್ರಕರಣದ ಪ್ರಮುಖ ಸಾಕ್ಷ್ಯಗಳು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ನ್ಯಾಯಾಲಯದ ಆದೇಶದ ಮೇರೆಗೆ ಎಲ್ಲಾ ಹಾವುಗಳನ್ನು ನೈಸರ್ಗಿಕವಾಗಿ ಸುರಕ್ಷಿತವಾಗಿರುವ ಪ್ರದೇಶಕ್ಕೆ ಬಿಡಲಾಗಿದೆ.

ಇದನ್ನೂ ಓದಿ: ಮೊಣಕಾಲು ಶಸ್ತ್ರಚಿಕಿತ್ಸೆ: ಇಟಲಿಯಿಂದ ಹೈದರಾಬಾದ್​ಗೆ ಮರಳಿದ ಸಲಾರ್ ನಟ ಪ್ರಭಾಸ್

Last Updated : Nov 8, 2023, 7:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.