ETV Bharat / entertainment

ಇಡಿ ಎದುರು ಹಾಜರಾದ ಪುರಿ ಜಗನ್ನಾಥ್​, ಚಾರ್ಮಿ ಕೌರ್..'ಲೈಗರ್'ಗೆ​ ಬಂಡವಾಳ ಎಲ್ಲಿಂದ ಬಂತು ಪ್ರಶ್ನೆ?​ - ಲೈಗರ್ ಸಿನಿಮಾಗೆ ಬಂಡವಾಳ

ಲೈಗರ್​ ಸಿನಿಮಾಗೆ ಬಂಡವಾಳ ಹೇಗೆ ಬಂತು ಎನ್ನುವುದರ ಕುರಿತು ಇಡಿ ಅಧಿಕಾರಿಗಳು ನಿರ್ಮಾಪಕ ಪುರಿ ಜಗನ್ನಾಥ್​ ಮತ್ತು ಚಾರ್ಮಿ ಕೌರ್ ಅವರನ್ನು ವಿಚಾರಣೆ ನಡೆಸಿದ್ದಾರೆ.

liger team grilled by ED
ಲೈಗರ್ ತಂಡಕ್ಕೆ ಇಡಿ ಬಿಸಿ
author img

By

Published : Nov 18, 2022, 1:14 PM IST

Updated : Nov 18, 2022, 1:27 PM IST

ಗುರುವಾರ ಚಲನಚಿತ್ರ ನಿರ್ಮಾಪಕ ಪುರಿ ಜಗನ್ನಾಥ್​ ಮತ್ತು ಚಾರ್ಮಿ ಕೌರ್​ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಹಲವು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಜಯ್​ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ ಲೈಗರ್​ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿತ್ತು. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ಯಾನ್​ ಇಂಡಿಯಾ ಸಿನಿಮಾ ನಿರ್ಮಾಣಗೊಂಡು ಪ್ರೇಕ್ಷಕರ ಮುಂದೆ ಬಂತು. ನಿರ್ಮಾಪಕ ಪುರಿ ಜಗನ್ನಾಥ್​, ನಟಿ-ನಿರ್ಮಾಪಕಿ ಚಾರ್ಮಿ ಕೌರ್​, ಕರಣ್​ ಜೋಹರ್​, ಅಪೂರ್ವ ಮೆಹ್ತಾ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು.

ಇದೀಗ ಈ ಸಿನಿಮಾಗೆ ಇಷ್ಟೊಂದು ಹಣ ಹೂಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಅನುಮಾನ ಮೂಡಿದ್ದು, ಬಂಡವಾಳ ಮೂಲದ ಕುರಿತು ತನಿಖೆ ನಡೆಯುತ್ತಿದೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಆಗಿರುವ ಸಾಧ್ಯತೆ ಇರುವುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಸ್ಟಾರ್​ ಕಲಾವಿದರಾದ ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆ ಅಲ್ಲದೇ ಅಮೆರಿಕದ ಬಾಕ್ಸರ್ ಮೈಕ್ ಟೈಸನ್ ಕೂಡ 125 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಲಾಸ್ ವೆಗಾಸ್‌ನಲ್ಲಿ ಸಹ ಮೆಗಾ ಶೂಟ್‌ಗಳನ್ನು ಹೊಂದಿತ್ತು. ಆದಾಗ್ಯೂ, ಇದು ಬಾಕ್ಸ್ ಆಫೀಸ್‌ನಲ್ಲಿ ಹಿನ್ನೆಡೆ ಕಂಡಿತು.

ಸಂಶಯಾಸ್ಪದ ಮಾರ್ಗಗಳ ಮೂಲಕ ಚಲನಚಿತ್ರಕ್ಕೆ ಹೂಡಿಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ದೂರು ದಾಖಲಿಸಿದ ನಂತರ ಇಡಿ ತನಿಖೆಯನ್ನು ಕೈಗೆತ್ತಿಕೊಂಡಿತು. ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಗುರುವಾರ 12 ಗಂಟೆಗಳಿಗೂ ಹೆಚ್ಚು ಕಾಲ ಇಡಿ ಕಚೇರಿಯಲ್ಲಿದ್ದರು. 15 ದಿನಗಳ ಹಿಂದೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ: 50 ದಿನಗಳನ್ನು ಪೂರೈಸಿದ ಕಾಂತಾರ.. ಯಶಸ್ಸಿನ ಮಾರ್ಗದಲ್ಲಿ ಹೊಂಬಾಳೆ ಫಿಲಂಸ್

ಸಿನಿಮಾಗೆ ರಾಜಕಾರಣಿಗಳೂ ಹಣ ಹೂಡಿದ್ದಾರೆ ಎಂದು ಬಕ್ಕ ಜಡ್ಸನ್ ದೂರಿದ್ದರು. ಹೂಡಿಕೆದಾರರು ತಮ್ಮ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸುವ ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ನಿಯಮ ಉಲ್ಲಂಘಿಸಿ ವಿದೇಶದಿಂದ ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಇಡಿ ಅಧಿಕಾರಿಗಳು ನಿರ್ಮಾಪಕರನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ಹಲವಾರು ಕಂಪನಿಗಳು ಚಲನಚಿತ್ರ ನಿರ್ಮಾಪಕರ ಖಾತೆಗಳಿಗೆ ಹಣವನ್ನು ವರ್ಗಾಯಿಸಿವೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಮೈಕ್ ಟೈಸನ್ ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ವಿದೇಶಿ ನಟರಿಗೆ ಹಣವನ್ನು ರವಾನೆ ಮಾಡಿದವರ ವಿವರಗಳನ್ನು ಮತ್ತು ಪಾವತಿಗಳನ್ನು ಹೇಗೆ ಮಾಡಲಾಗಿದೆ ಎಂಬುದನ್ನು ಒದಗಿಸುವಂತೆ ನಿರ್ಮಾಪಕರಲ್ಲಿ ಕೇಳಲಾಗಿದೆ.

ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಇಡಿ ಮುಂದೆ ಹಾಜರಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ, ಸೆಲೆಬ್ರಿಟಿಗಳ ಹೆಸರು ಕೇಳಿ ಬಂದಿದ್ದ ಮಾದಕವಸ್ತು ಪ್ರಕರಣದಲ್ಲಿ ಹಣದ ಆರೋಪದ ಬಗ್ಗೆ ಸಂಸ್ಥೆಯು ಚಿತ್ರರಂಗದ ವ್ಯಕ್ತಿಗಳೊಂದಿಗೆ ಈ ಇಬ್ಬರನ್ನೂ ಪ್ರಶ್ನಿಸಿತ್ತು. 2017ರಲ್ಲಿ ಡ್ರಗ್ಸ್​​ ಪ್ರಕರಣ ದಾಖಲಾದ ನಂತರ ರಾಜ್ಯ ಮಾದಕ ವಸ್ತು ನಿಷೇಧ ನಿಷೇಧ ಮತ್ತು ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡವು ಅವರನ್ನು ಗ್ರಿಲ್ ಮಾಡಿತ್ತು.

Last Updated : Nov 18, 2022, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.