ETV Bharat / entertainment

ಏನಿದು 'ಸಲಾರ್​', 'ಡಂಕಿ'? ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಸಿನಿಮಾಗಳ ಟೈಟಲ್​ನ ಅರ್ಥ ಗೊತ್ತೇ? - ಈಟಿವಿ ಭಾರತ ಕನ್ನಡ

ಕ್ರಿಸ್​ಮಸ್​ ಉಡುಗೊರೆಯಾಗಿ ತೆರೆ ಕಂಡ 'ಡಂಕಿ' ಮತ್ತು 'ಸಲಾರ್​' ಸಿನಿಮಾದ ಟೈಟಲ್​ನ ಅರ್ಥವೇನು ತಿಳಿಯಲು ಮುಂದೆ ಓದಿ.

Dunki and salaar title meaning
ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ 'ಡಂಕಿ' ಮತ್ತು 'ಸಲಾರ್​' ಟೈಟಲ್​ನ ಅರ್ಥವೇನು?
author img

By ETV Bharat Karnataka Team

Published : Dec 22, 2023, 5:08 PM IST

ಬಾಲಿವುಡ್​ ನಟ ಶಾರುಖ್​ ಖಾನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಡಂಕಿ' ಸಿನಿಮಾ ಡಿಸೆಂಬರ್​ 21ರಂದು ತೆರೆ ಕಂಡಿದೆ. ಪಾಸಿಟಿವ್​ ಟಾಕ್​ ಪಡೆದಿರುವ ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಆದರೆ ಟೈಟಲ್​ ಘೋಷಣೆಯಾದಾಗಿನಿಂದ ಹೆಸರು ತುಂಬಾ ಹೊಸದು ಎಂದು ನೆಟ್ಟಿಗರು, ಅಭಿಮಾನಿಗಳು ಇದರ ಅರ್ಥ ಹುಡುಕುತ್ತಿದ್ದಾರೆ. ಇತ್ತೀಚೆಗೆ ಶಾರುಖ್​ ಖಾನ್​ ಸಂದರ್ಶನವೊಂದರಲ್ಲಿ 'ಡಂಕಿ' ಪದದ ಮೂಲ ಅರ್ಥವನ್ನು ಬಹಿರಂಗಪಡಿಸಿದ್ದರು.

"ಡಂಕಿ ಎಂದರೆ ಅಕ್ರಮ ಪ್ರಯಾಣ ಎಂದರ್ಥ. ದೇಶದ ಗಡಿಯನ್ನು ಅಕ್ರಮವಾಗಿ ಪ್ರಯಾಣಿಸುವುದಕ್ಕೆ ಡಂಕಿ ಪ್ರಯಾಣ ಎಂದು ಕರೆಯಲಾಗುತ್ತದೆ. ಪಂಜಾಬಿ ಗಾದೆಯಿಂದ ಈ ಹೆಸರು ಬಂದಿದೆ. ಹಾಗಾಗಿ ನಮ್ಮ ಸಿನಿಮಾ ಕೂಡ ಹೆಸರಿಗೆ ತಕ್ಕಂತೆ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಸಿನಿಮಾ ಕಥೆಗೆ ಡಂಕಿ ಹೆಸರು ಸೂಕ್ತವಾಗಿರುವುದರಿಂದ ಅದೇ ಹೆಸರನ್ನು ಇಟ್ಟಿದ್ದೇವೆ" ಎಂದು ಅವರು​ ವಿವರಿಸಿದರು.

ಪ್ರಭಾಸ್​ ಅಭಿಮಾನಿಗಳು 'ಸಲಾರ್​' ಪದದ ಅರ್ಥಕ್ಕಾಗಿಯೂ ನೆಟ್ಟಿಗರು ಹುಡುಕಾಡುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್​ ಈ ಪದದ ಅರ್ಥವನ್ನು ಬಹಿರಂಗಪಡಿಸಿದರು. 'ಸಲಾರ್​' ಎಂಬುದು ಉರ್ದು ಪದವಾಗಿದ್ದು, ಸಮರ್ಥ ನಾಯಕ, ರಾಜನ ಬಲಗೈ ಮತ್ತು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಎಂಬರ್ಥ ನೀಡುತ್ತದೆ. ಇದನ್ನು ಕೇಳಿದ ಅಭಿಮಾನಿಗಳು ಈ ಪಾತ್ರಕ್ಕೆ ಪ್ರಭಾಸ್​ ಪರ್ಫೆಕ್ಟ್​ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಲಾರ್​ vs ಡಂಕಿ: 'ಡಂಕಿ' ನಿನ್ನೆ ತೆರೆ ಕಂಡರೆ, 'ಸಲಾರ್'​ ಇಂದು ಬಿಡುಗಡೆಯಾಗಿದೆ. 'ಡಂಕಿ' ಗುರುವಾರ ಎಲ್ಲಾ ಭಾಷೆಗಳಲ್ಲಿ 30 ಕೋಟಿ ರೂ. ಸಂಗ್ರಹಿಸಿದೆ. ಕಾಮಿಡಿ ಡ್ರಾಮಾ ಚಲನಚಿತ್ರವು ಒಟ್ಟಾರೆ 25.71% ಆಕ್ಯುಪೆನ್ಸಿಯನ್ನು ಹೊಂದಿದೆ. ಮತ್ತೊಂದೆಡೆ 'ಸಲಾರ್​' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದೇ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ನಿರೀಕ್ಷೆಯಿದೆ. 'ಸಲಾರ್​' ಫೀವರ್​ 'ಡಂಕಿ' ಕಲೆಕ್ಷನ್​ಗೆ ಅಡ್ಡಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಎರಡೂ ಮಾಸ್ ಚಿತ್ರಗಳು ಇಂದಿನಿಂದ ಬಾಕ್ಸ್ ಆಫೀಸ್ ಘರ್ಷಣೆಯನ್ನು ಎದುರಿಸಲಿವೆ.

ಡಂಕಿ ಚಿತ್ರತಂಡ: ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಜೋಡಿಯ ಈ ಚಿತ್ರವು ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿಂದ ಡಂಕಿ ಸಿನಿಮಾ ನಿರ್ಮಾಣಗೊಂಡಿದೆ.​ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಅವರಂತಹ ಸ್ಟಾರ್ ನಟರೂ ಕೂಡ ಇದ್ದಾರೆ.

ಸಲಾರ್​ ರೂವಾರಿಗಳು: ಕೆಜಿಎಫ್​, ಕಾಂತಾರ ಮುಂತಾದ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ 'ಸಲಾರ್​' ಸಿನಿಮಾ ನಿರ್ಮಿಸಿದೆ. ಪ್ರಶಾಂತ್​ ನೀಲ್​ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಜೊತೆಗೆ ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​, ಮೀನಾಕ್ಷಿ ಚೌಧರಿ, ಈಶ್ವರಿ ರಾವ್​, ಶರಣ್​ ಶಕ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕೆಜಿಎಫ್​' ಚಿತ್ರತಂಡವೇ ಈ ಸಿನಿಮಾಗೂ ಕೆಲಸ ಮಾಡಿದೆ.

ಇದನ್ನೂ ಓದಿ: ಬಾಕ್ಸ್​​ ಆಫೀಸ್​​ ಕೊಳ್ಳೆ ಹೊಡೆಯುವುದೇ 'ಸಲಾರ್'? ಮೊದಲ ದಿನ ₹100 ಕೋಟಿ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.