ETV Bharat / entertainment

ದುನಿಯಾ ವಿಜಯ್ ಅಭಿಮಾನಿಗಳೇ ರೆಡಿಯಾಗಿ - 'ಭೀಮ'ನ ದರ್ಶನಕ್ಕೆ‌ ಮುಹೂರ್ತ ಫಿಕ್ಸ್ - Bheema 2023

Bheema: ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭೀಮ ಚಿತ್ರತಂಡ ಬ್ಯುಸಿಯಾಗಿದೆ.

duniya vijay Bheema release date
ಭೀಮ ಬಿಡುಗಡೆ ದಿನಾಂಕ
author img

By

Published : Aug 16, 2023, 1:07 PM IST

ದುನಿಯಾ ವಿಜಯ್​ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ವಿಭಿನ್ನ ಪಾತ್ರ, ಉತ್ತಮ ನಟನೆ, ವಿಶಿಷ್ಠ ಮ್ಯಾನರಿಸಂ ಮೂಲಕ ತಮ್ಮದೇ ಆದ ವಿಭಿನ್ನ ಸ್ಟಾರ್​ ಡಮ್​ ಹೊಂದಿದ್ದಾರೆ. ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ವಿಜಿ ಬಹುಭಾಷಾ ನಟ ಕೂಡ ಹೌದು. ದೊಡ್ಡ ಅಭಿಮಾನಿ ಬಳಗ ಹೊಂದಿರುವ ತಾರೆಯ ಮುಂದಿನ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

duniya vijay Bheema release date
ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭೀಮ ಚಿತ್ರತಂಡ

ಅಭಿನಯದ ಜೊತೆಗೆ ನಿರ್ದೇಶನ.... ಮಾಸ್ ಟೈಟಲ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ಭೀಮ'. ಇದು ದುನಿಯಾ ವಿಜಯ್​​ ಅವರ ಮುಂದಿನ ಚಿತ್ರ. ಸಲಗ ಚಿತ್ರದ ಸಕ್ಸಸ್ ಬಳಿಕ ವಿಜಯ್ ಅಭಿನಯದ ಜೊತೆಗೆ ನಿರ್ದೇಶನ ಮಾಡುತ್ತಿರೋ ಸಿನಿಮಾವಿದು.

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ: ಭೀಮ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸಿನಿಮಾದಲ್ಲಿರುವ ಕಲಾವಿದರ ಇಂಟ್ರೂಡಕ್ಷನ್​​​ ಫೋಸ್ಟರ್ ಜೊತೆಗೆ ಹಾಡುಗಳ ರೆಕಾರ್ಡಿಂಗ್​​ನಿಂದ ಸೌಂಡ್ ಮಾಡುತ್ತಿರುವ ಭೀಮ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಹುನಿರೀಕ್ಷಿತ ಭೀಮ ಸಿನಿಮಾ ಎಂದು ತೆರೆಕಾಣಲಿದೆ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

duniya vijay Bheema release date
'ಭೀಮ'ನ ದರ್ಶನಕ್ಕೆ‌ ಮುಹೂರ್ತ ಫಿಕ್ಸ್

ದೀಪಾವಳಿ ಸಂದರ್ಭ ಸಿನಿಮಾ‌ ರಿಲೀಸ್?! ದುನಿಯಾ ವಿಜಯ್ ನಿರ್ದೇಶಿಸಿ, ಬಣ್ಣ ಹಚ್ಚಿರೋ ಭೀಮ ಸಿನಿಮಾ ಕೆಲಸಗಳು‌ ಕೊನೆಯ ಹಂತ ತಲುಪಿದೆ. ಚಿತ್ರತಂಡ ಸಿನಿಮಾ ರಿಲೀಸ್​ಗೆ ಸಿದ್ಧತೆ ನಡೆಸುತ್ತಿದೆ. ಭೀಮ ನೈಜ ಘಟನೆ ಆಧಾರಿತ ಕಥೆಯಾಗಿದ್ದು, ಮಾಸ್ ಎಂಟರ್​ಟೈನ್ಮೆಂಟ್​ ಸಿನಿಮಾ. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ, ಎಡಿಟಿಂಗ್ ರೂಮ್​ನಲ್ಲಿ ನಟ ಹಾಗೂ ನಿರ್ದೇಶಕ ವಿಜಯ್ ಬ್ಯುಸಿಯಾಗಿದ್ದಾರೆ‌. ತಮ್ಮ ಈ ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ನವೆಂಬರ್ ತಿಂಗಳ ದೀಪಾವಳಿ ಸಂದರ್ಭ ಸಿನಿಮಾ‌ ರಿಲೀಸ್ ಮಾಡಬೇಕು ಅನ್ನೋ ನಿರ್ಧಾರಕ್ಕೆ ಚಿತ್ರ ತಂಡದವರು ಬಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ನಿಮಗೆ ಕೊಡಲಿದೆ.

ಇದನ್ನೂ ಓದಿ: ಗದರ್ 2 ಅಬ್ಬರ: ಹುಬ್ಬೇರಿಸುವಂತಿದೆ ಗದರ್​ 2 ಕಲೆಕ್ಷನ್ -​ ಸೂಪರ್​ಹಿಟ್​ ಸಿನಿಮಾ ವೀಕ್ಷಿಸಿದ ಕಾರ್ತಿಕ್​ ಆರ್ಯನ್​

ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ. ಈ ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಮಾಸ್ತಿ ಡೈಲಾಗ್ಸ್ ಇದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ 'ಭೀಮ'ನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರೋ ಭೀಮ ಎಲ್ಲ ಆ್ಯಂಗಲ್​ನಿಂದಲೂ‌ ಚಿತ್ರರಂಗದಲ್ಲಿ ದೊಡ್ಡ ನಿರಿಕ್ಷೆ ಹುಟ್ಟಿಸಿದೆ. ಅಲ್ಲದೇ ಇದೇ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಚಿತ್ರ ಆಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಳಗೊಂಡಿದೆ.

ಇದನ್ನೂ ಓದಿ: ಆ.18ಕ್ಕೆ ಬಿಡುಗಡೆಯಾಗುವ 'ಬ್ಯಾಂಗ್' ಚಿತ್ರ ನೋಡುವಂತೆ ಶಾನ್ವಿ ಶ್ರೀವಾಸ್ತವ್ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.