ETV Bharat / entertainment

'ಭೀಮ' ಹೆಸರಲ್ಲೇ ಇದೆ ಪವರ್‌.. ದುನಿಯಾ ವಿಜಿ ಚಿತ್ರದ ಮೇಕಿಂಗ್‌ ಮೂಲಕ ಹಲ್‌ಚಲ್! - ಬೆಂಗಳೂರಿನಲ್ಲಿ ಭೀಮ ಸಿನಿಮಾ ಶೂಟಿಂಗ್ ಪ್ರಾರಂಭ

ಭೀಮ ಸಿನಿಮಾ‌ ನೈಜ ಘಟನೆಯನ್ನಾಧರಿಸಿದೆ. ದುನಿಯಾ ವಿಜಯ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್​ ನಟನೆಯ 28ನೇ ಸಿನಿಮಾ ಇದಾಗಿದೆ. ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ..

ಭೀಮ
ಭೀಮ
author img

By

Published : May 27, 2022, 6:13 PM IST

ಸಲಗ ದುನಿಯಾ ವಿಜಯ್​ಗೆ ಸ್ಯಾಂಡಲ್‌ವುಡ್ ಅಲ್ಲದೇ ಪರಿಭಾಷೆಯಲ್ಲಿ ಬೇಡಿಕೆ ತಂದುಕೊಟ್ಟ ಸಿನಿಮಾ. ವಿಜಯ್ ಫಸ್ಟ್ ಟೈಮ್ ನಿರ್ದೇಶನದ ಜೊತೆಗೆ ನಟಿಸಿ ಸೈ ಎನ್ನಿಸಿಕೊಂಡ ಸಿನಿಮಾ. ಈ ಸಿನಿಮಾ ಸಕ್ಸಸ್ ಬೆನ್ನಲ್ಲೇ ದುನಿಯಾ ವಿಜಯ್ ಟಾಲಿವುಡ್​ನ ಬಾಲಯ್ಯ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿರೋದು ಗೊತ್ತಿರುವ ವಿಚಾರ.

Duniya vijay Bheema movie shooting started in Bengaluru
ಚಿತ್ರತಂಡದೊಂದಿಗೆ ನಟ ದುನಿಯಾ ವಿಜಯ್

ಈ ಚಿತ್ರದ ಬಳಿಕ ದುನಿಯಾ ವಿಜಯ್ ಭೀಮ ಸಿನಿಮಾವನ್ನ ಕೈಗೆತ್ತಿಕೊಂಡು ಸೈಲೆಂಟ್ ಆಗಿ ಚಿತ್ರೀಕರಣ ಮಾಡ್ತಿದ್ದಾರೆ‌. ಚಿತ್ರೀಕರಣಕ್ಕೂ ಮುಂಚೆ ₹1.50 ಕೋಟಿ ದಾಖಲೆಯ ಮೊತ್ತಕ್ಕೆ ಭೀಮ ಚಿತ್ರದ ಆಡಿಯೋ ಸೋಲ್ಡೌಟ್ ಆಗಿದೆ. ಆನಂದ್ ಆಡಿಯೋ ಸಂಸ್ಥೆ ಭೀಮ ಚಿತ್ರದ ಆಡಿಯೋವನ್ನ ಖರೀದಿಸಿದೆ. ಇದೀಗ ದುನಿಯಾ ವಿಜಯ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಭೀಮ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾ ಚಿತ್ರೀಕರಣದ ವೇಳೆ ಕಂಡುಬಂದ ದೃಶ್ಯ
ಸಿನಿಮಾ ಚಿತ್ರೀಕರಣದ ವೇಳೆ ಕಂಡುಬಂದ ದೃಶ್ಯ

ಸಿಲಿಕಾನ್ ಸಿಟಿಯ ಬ್ಯಾಂಕ್,‌ ಮಸೀದಿ, ಏರಿಯಾವೊಂದರಲ್ಲಿ ಫೈಟ್ ಸನ್ನಿವೇಶ, ನಿರ್ದೇಶಕ ದುನಿಯಾ ವಿಜಯ್ ಚಿತ್ರೀಕರಣ ಮಾಡಿದ್ದಾರೆ. ಈ ಚಿತ್ರದ ಕಲರ್​ಫುಲ್ ಮೇಕಿಂಗ್ ಅನ್ನು ಚಿತ್ರತಂಡ ಅನಾವರಣ ಮಾಡಲಾಗಿದೆ. ಈ ಮೇಕಿಂಗ್​ನಲ್ಲಿ ಜಯಮ್ಮನಮಗ ಸಿನಿಮಾ ಬಳಿಕ‌ ಕಲ್ಯಾಣಿ ಈ ಸಿನಿಮಾದಲ್ಲಿ ಅಭಿನಯಿಸುವ ದೃಶ್ಯ ಹಾಗೂ ಅಚ್ಯುತ್‌ಕುಮಾರ್, ಬ್ಲ್ಯಾಕ್ ಡ್ರಾಗನ್ ಮಂಜು ಸೇರಿದಂತೆ ಹಲವು ಕಲಾವಿದರು ಭೀಮ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಭೀಮ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ದುನಿಯಾ ವಿಜಯ್

ಭೀಮ ಸಿನಿಮಾ‌ ಕೂಡ ಒಂದು ನೈಜ ಘಟನೆ ಆದರಿಸಿದೆ. ದುನಿಯಾ ವಿಜಯ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್​ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಭೀಮ ಚಿತ್ರದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದಾರೆ.

ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ದುನಿಯಾ ವಿಜಯ್ ನಿರ್ದೇಶನದ ಭೀಮ ಮೇಕಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.

ಭೀಮ ಮೇಕಿಂಗ್‌ ವಿಡಿಯೋ_ https://youtu.be/BUQsiWsLzCU

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.