ETV Bharat / entertainment

ಟೈಮ್ಸ್ ಸ್ಕ್ವೇರ್​ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್​ ಪ್ರದರ್ಶನ.. ಉತ್ಸಾಹ ತಡೆಯಲು ಸಾಧ್ಯವಾಗುತ್ತಿಲ್ಲವೆಂದ ದುಲ್ಕರ್​ ಸಲ್ಮಾನ್​ - ಚಿತ್ರದ ಟ್ರೇಲರ್​ನಲ್ಲಿ ನಟ ದರೋಡೆಕೋರನ ಪಾತ್ರ

ಕಿಂಗ್ ಆಫ್ ಕೋಥಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇದೆ. ಚಿತ್ರವು ಆಗಸ್ಟ್ 24 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ವಿಶ್ವದೆಲ್ಲೆಡೆ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರ್ಜರಿ ನಡೆಯುತ್ತಿದ್ದು, ಈ ಮಧ್ಯೆ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್​ನಲ್ಲಿ ಚಿತ್ರದ ಟ್ರೇಲರ್​ ಪ್ರದರ್ಶನಗೊಂಡಿತು.

DulquerSalmaan  Dulquer Salmaan King Of Kotha  King Of Kotha Becomes First Malayalam Movie  Malayalam Movie To Have Its Trailer Played  Trailer Played At Times Square  ಉತ್ಸಾಹ ತಡೆಯಲು ಸಾಧ್ಯವಾಗುತ್ತಿಲ್ಲವೆಂದ ದುಲ್ಕರ್  ಕಿಂಗ್ ಆಫ್ ಕೋಥಾ ಟ್ರೇಲರ್​ ಪ್ರದರ್ಶನ  ಟೈಮ್ಸ್ ಸ್ಕ್ವೇರ್​ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್  ಕಿಂಗ್ ಆಫ್ ಕೋಥಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ  ಆಗಸ್ಟ್ 24 ರಂದು ಚಿತ್ರಮಂದಿರಗಳಿಗೆ ತೆರೆ  ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್  ಚಿತ್ರದ ಟ್ರೇಲರ್​ನಲ್ಲಿ ನಟ ದರೋಡೆಕೋರನ ಪಾತ್ರ  ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ದುಲ್ಕರ್
ಟೈಮ್ಸ್ ಸ್ಕ್ವೇರ್​ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್​ ಪ್ರದರ್ಶನ
author img

By

Published : Aug 21, 2023, 8:44 AM IST

ನವದೆಹಲಿ: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರು ಅಭಿನಯಿಸಿರುವ 'ಕಿಂಗ್ ಆಫ್ ಕೋಥಾ' ಚಿತ್ರದ ಟ್ರೇಲರ್​ ಈಗ ನ್ಯೂಯಾರ್ಕ್​ನಲ್ಲಿ ಗಮನ ಸೆಳೆದಿದೆ. ಚಿತ್ರದ ಟ್ರೇಲರ್​ನಲ್ಲಿ ನಟ ದರೋಡೆಕೋರನ ಪಾತ್ರ ಮತ್ತು ಪ್ರಚಂಡ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರವು ಈಗ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಅನ್ನು ತಲುಪಿದೆ, ಇದು ಮಲಯಾಳಂ ಚಿತ್ರರಂಗಕ್ಕೆ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸಿದೆ.

  • " class="align-text-top noRightClick twitterSection" data="">

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ದುಲ್ಕರ್, 'ನನ್ನ ಉತ್ಸಾಹವನ್ನು ತಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ಕಿಂಗ್ ಆಫ್ ಕೋಥಾ, ಟೈಮ್ಸ್ ಸ್ಕ್ವೇರ್‌ನಲ್ಲಿ ಟ್ರೈಲರ್ ಅನ್ನು ಪ್ರದರ್ಶಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ. ನಾನು ಅನೇಕ ಬಾರಿ ಟೈಮ್ ಸ್ಕ್ವೇರ್‌ಗೆ ಹೋಗಿದ್ದೇನೆ. ಬಿಡುವಿಲ್ಲದ ಮತ್ತು ರೋಮಾಂಚಕ ಟೈಮ್ಸ್ ಸ್ಕ್ವೇರ್ಗೆ ಹಲವಾರು ಬಾರಿ ಭೇಟಿ ನೀಡಿದ ನಂತರ, ಅಲ್ಲಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಕನಸು ಕೂಡ ಇರಲಿಲ್ಲ ಎಂದು ನಟ ಹೇಳುತ್ತಾರೆ. ಇದು ಅವರಿಗೆ ವೈಯಕ್ತಿಕವಾಗಿ ದೊಡ್ಡ ಸಾಧನೆ ಮತ್ತು ಮಲಯಾಳಂ ಚಿತ್ರರಂಗಕ್ಕೆ ಅವರು ಸಲ್ಲಿಸಬಹುದಾದ ದೊಡ್ಡ ಗೌರವ ಎಂದು ಹೇಳಿದರೆ ತಪ್ಪಾಗಲಾರದು.

ದುಲ್ಕರ್​ ಸಲ್ಮಾನ್​​ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟ. 'ಕಿಂಗ್​ ಆಫ್​ ಕೋಥಾ' ನಟನ ಮುಂದಿನ ಸಿನಿಮಾ. ಬಹುನಿರೀಕ್ಷಿತ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಚಿತ್ರದ ಟ್ರೇಲರ್​​ ಅನಾವರಣಗೊಂಡು, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಬಾಲಿವುಡ್​​ ಕಿಂಗ್​ ಖಾನ್​ ಶಾರುಖ್ ಅವರು ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ 'ಕಿಂಗ್​ ಆಫ್​ ಕೋಥಾ'ದ ಅಧಿಕೃತ ಟ್ರೇಲರ್ ಅನಾವರಣಗೊಳಿಸಿದ್ದರು. ಎಸ್​​ಆರ್​ಕೆ ಜೊತೆಗೆ ಸೌತ್​ ಸಿನಿಮಾ ಇಂಡಸ್ಟ್ರಿಯ ಸೂಪರ್​ ಸ್ಟಾರ್​ಗಳಾದ ಮೋಹನ್​ಲಾಲ್​​, ಸೂರ್ಯ, ನಾಗಾರ್ಜುನ ಕೂಡ ಟ್ರೇಲರ್​ ಲಾಂಚ್​ ಮಾಡಿದರು.

ಗ್ಯಾಂಗ್​ಸ್ಟರ್ ಪಾತ್ರದಲ್ಲಿ ದುಲ್ಕರ್​ ಸಲ್ಮಾನ್: ಹೆಚ್ಚಾಗಿ ಕ್ಲಾಸಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೀತಾ ರಾಮಮ್​​ ನಟ ದುಲ್ಕರ್​ ಸಲ್ಮಾನ್ ​'ಕಿಂಗ್​ ಆಫ್​ ಕೋಥಾ' ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅಭಿಲಾಷ್ ಜೋಶಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದೇ ಆಗಸ್ಟ್ 24 ರಂದು ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರೆಡಿಯಾಗಿರುವ ಈ ಚಿತ್ರ ಓಣಂ ಸಂದರ್ಭ ತೆರೆಕಾಣಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. 'ಕಿಂಗ್​ ಆಫ್​ ಕೋಥಾ' ಪ್ರಮೋಶನ್​ ಭಾಗವಾಗಿ ಇದೀಗ ಟ್ರೇಲರ್​ ಅನಾವರಣಗೊಂಡಿದೆ. ಸ್ಟಾರ್ ನಟರು ಸಾಥ್ ನೀಡಿರುವ ಈ ಸಿನಿಮಾ ಇದೇ ಆಗಸ್ಟ್ 24 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರಮಂದಿಗಲಲ್ಲಿ ತೆರೆಕಾಣಲಿದೆ. ಸಿನಿಪ್ರಿಯರು ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಚಿತ್ರಕಥೆ ಬಗ್ಗೆ ಫ್ಯಾನ್ಸ್​ ಕುತೂಹಲ ಹೊಂದಿದ್ದಾರೆ.

ಓದಿ: ಸೋನಂ ಕಪೂರ್​ ಬಗ್ಗೆ ರಾಣಾ ದಗ್ಗುಬಾಟಿ ಕಾಮೆಂಟ್​: ನಟ ದುಲ್ಕರ್​ ಸಲ್ಮಾನ್​​​ ರಿಯಾಕ್ಷನ್​ ಹೀಗಿದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.