ETV Bharat / entertainment

ದುಲ್ಕರ್​ ಸಲ್ಮಾನ್​ ಹುಟ್ಟುಹಬ್ಬ: 'ಗನ್ಸ್ ಅಂಡ್​​ ಗುಲಾಬ್ಸ್‌' ಟ್ರೇಲರ್​ ಡೇಟ್​ ಅನೌನ್ಸ್ - ಈಟಿವಿ ಭಾರತ ಕನ್ನಡ

ಮಾಲಿವುಡ್​ ಸ್ಟಾರ್​ ದುಲ್ಕರ್​ ಸಲ್ಮಾನ್​ ಜನ್ಮದಿನ ಹಿನ್ನೆಲೆಯಲ್ಲಿ 'ಗನ್ಸ್ ಅಂಡ್​​ ಗುಲಾಬ್ಸ್‌' ವೆಬ್​ಸಿರೀಸ್​ನ ಟ್ರೇಲರ್​ ದಿನಾಂಕ ಘೋಷಣೆಯಾಗಿದೆ.

Guns and Gulaabs
'ಗನ್ಸ್ ಆಂಡ್​ ಗುಲಾಬ್ಸ್‌'
author img

By

Published : Jul 28, 2023, 5:37 PM IST

ಬಹುಭಾಷೆಗಳಲ್ಲಿ ಛಾಪು ಮೂಡಿಸಿರುವ ಮಲಯಾಳಂ ಸ್ಟಾರ್ ದುಲ್ಕರ್​ ಸಲ್ಮಾನ್​ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ನಟನ ಮುಂಬರುವ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಜೊತೆಗೆ ನಟ ಹಿಂದಿ ವೆಬ್​ಸರಣಿಯಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಚಲನಚಿತ್ರ ನಿರ್ಮಾಪಕ ಜೋಡಿ ರಾಜ್ ಮತ್ತು ಡಿಕೆ ಅವರ 'ಗನ್ಸ್ ಆಂಡ್​ ಗುಲಾಬ್ಸ್‌' ಸಿರೀಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷಿತ ಸರಣಿಯ ಪ್ರೋಮೋ ವಿಡಿಯೋವನ್ನು ತಯಾರಕರು ಹಂಚಿಕೊಂಡಿದ್ದಾರೆ. ಜೊತೆಗೆ ಟ್ರೇಲರ್​ ದಿನಾಂಕವನ್ನು ಕೂಡ ಬಹಿರಂಗಪಡಿಸಿದ್ದಾರೆ.

1970ರ ದಶಕದ ಹಾಡುಗಳು, ರೊಮ್ಯಾಂಟಿಕ್​, ಹುಚ್ಚು ಪ್ರೀತಿ, ಭಯಾನಕ ಹೀಗೆ ಕೆಲವು ಘಟನೆಗಳನ್ನು ಡಿಫರೆಂಟ್​ ಆಗಿ ಪ್ರೋಮೋದಲ್ಲಿ ತೋರಿಸಲಾಗಿದೆ. 'ಗನ್ಸ್ ಅಂಡ್​​​ ಗುಲಾಬ್ಸ್‌' ಅಂದರೆ ಗನ್​ ಮತ್ತು ಗುಲಾಬಿ. ಇವರೆಡನ್ನೂ ಜೊತೆಯಾಗಿ ತೋರಿಸಿದ್ದು, ಪ್ರೀತಿ ಮತ್ತು ದ್ವೇಷದಂತಿದೆ. ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್, ದುಲ್ಕರ್ ಸಲ್ಮಾನ್, ಆದರ್ಶ್ ಗೌರವ್, ಟಿಜೆ ಭಾನು ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ದುಲ್ಕರ್​ ಸಲ್ಮಾನ್​ ಪ್ರೋಮೋ ವಿಡಿಯೋ ಹಂಚಿಕೊಳ್ಳಲು ಇನ್​ಸ್ಟಾ ವೇದಿಕೆ ಬಳಸಿಕೊಂಡರು. "ರಾಜ್​ ಮತ್ತು ಡಿಕೆ ರಚಿಸಿದ ಈ ನಂಬಲಾಗದ ಜಗತ್ತನ್ನು ವರ್ಣಿಸಲು ಒಂದು ಪದವಿದ್ದರೆ ಅದು ಮನರಂಜನೆ. 'ಗನ್ಸ್ ಅಂಡ್​​ ಗುಲಾಬ್ಸ್‌' ಟ್ರೇಲರ್​ ಆಗಸ್ಟ್​ 2 ರಂದು. ನೆಟ್​ಫ್ಲಿಕ್ಸ್​ನಲ್ಲಿ ಮಾತ್ರ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಡಿಕ್ಯೂ ತಮ್ಮ ಹುಟ್ಟುಹಬ್ಬದಂದೇ ಸಿಹಿ ಸುದ್ದಿಯನ್ನು ಹಂಚುವ ಮೂಲಕ ಅಭಿಮಾನಿಗಳಿಗೆ ಟ್ರೀಟ್​ ನೀಡಿದ್ದಾರೆ. ಆಗಸ್ಟ್​ 2 ರಂದು 'ಗನ್ಸ್ ಆಂಡ್​ ಗುಲಾಬ್ಸ್‌' ಟ್ರೇಲರ್ ಬಿಡುಗಡೆಯಾಗಲಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರ ಗೆದ್ದ 'ಬ್ರೋ': ಪವನ್​ ಕಲ್ಯಾಣ್ - ಸಾಯಿ ತೇಜ್​ ಕಾಂಬೋಗೆ ಉತ್ತಮ ರೆಸ್ಪಾನ್ಸ್​

ಪ್ರೋಮೋ ವಿಡಿಯೋದಲ್ಲೇನಿದೆ?: 'ಗನ್ಸ್ ಅಂಡ್​​ ಗುಲಾಬ್ಸ್‌' ಪ್ರೋಮೋ ರೆಟ್ರೋ ಸಂಗೀತದೊಂದಿಗೆ ಪ್ರಾರಂಭವಾಗುತ್ತದೆ. ಗುಲಾಬಿಗಳ ಜೊತೆಗೆ ಒಡೆದ ಕೋಲ್ಡ್​ ಡ್ರಿಂಕ್ಸ್​ ಬಾಟಲಿಗಳನ್ನು ತೋರಿಸುತ್ತದೆ. ರಾಜ್​ಕುಮಾರ್​ ಅವರ ಒಂದು ನೋಟವು ಹೊಸ ಅವಾತರದಲ್ಲಿ ಕಂಡಿದೆ. ಡಿಫರೆಂಟ್​ ಕೇಶ ವಿನ್ಯಾಸ ಮತ್ತು ಕೈಯಲ್ಲಿ ಬಂದೂಕು ಹಿಡಿದು ನಿಂತಿದ್ದಾರೆ. ‘ಗುಲಾಬ್‌ಗುಂಜ್ 6 ಕಿಮೀ’ ಎಂಬ ಮೈಲಿಗಲ್ಲು ಫಲಕವನ್ನು ಅಲ್ಲಿ ತೋರಿಸಲಾಗಿದೆ. ಮೋಷನ್​ ಪೋಸ್ಟರ್​ನಂತೆ ವಿಡಿಯೋವನ್ನು ಡಿಸೈನ್​ ಮಾಡಲಾಗಿದೆ.

ಲೋಹದ ಉಪಕರಣಗಳು, ಗಾಜಿನ ವಸ್ತುಗಳು, ಸುಗಂಧ ದ್ರವ್ಯಗಳು, ಕಾರ್ಡ್‌ಗಳ ಪ್ಯಾಕ್, ಹಳೆಯ ಕ್ಯಾಸೆಟ್, ಪ್ರೇಮ ಪತ್ರ, ಚಾಕು, ಬೋರ್ಡ್ ಹೀಗೆ ಕೆಲವೊಂದು ವಸ್ತುಗಳನ್ನು ಹಾರುವಂತೆ ತೋರಿಸಲಾಗಿದೆ. 'ವಾಯು ಆಟೋ ವರ್ಕ್ಸ್' ಎಂದು ಬರೆದಿರುವ ಸೈನ್​ ಬೋರ್ಡ್​ ಕೂಡ ಇದೆ. ಗುಲ್ಶನ್​ ಅವರನ್ನು 1970ರ ಕೇಶವಿನ್ಯಾಸ ಮತ್ತು ಆಗಿನ ಉಡುಪಿನೊಂದಿಗೆ ತೋರಿಸಲಾಗಿದೆ. ದುಲ್ಕರ್​ ಸಲ್ಮಾನ್​ ವಿಲನ್​ ರೀತಿಯಲ್ಲಿ ಕಾಣಿಸಿದ್ದಾರೆ. ಈ ವೆಬ್​ಸಿರೀಸ್​ನಲ್ಲಿ ಶ್ರೇಯಾ ಧನ್ವಂತರಿ ಮತ್ತು ಪೂಜಾ ಎ ಗೋರ್ ಕೂಡ ನಟಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಇದನ್ನೂ ಓದಿ: 'ಬಾಲಿ'ಯಲ್ಲಿ ಸಮಂತಾ ಜಾಲಿ: ಸ್ನೇಹಿತೆ ಜೊತೆಗಿನ ವಿಡಿಯೋ ಹಂಚಿಕೊಂಡ ಸೌತ್​ ತಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.