ETV Bharat / entertainment

'ಡ್ರೀಮ್​ ಗರ್ಲ್​ 2'ಗೆ ಅದ್ಭುತ ರೆಸ್ಪಾನ್ಸ್​: ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ? - ಈಟಿವಿ ಭಾರತ ಕನ್ನಡ

Dream Girl 2 box office collection: 'ಡ್ರೀಮ್​ ಗರ್ಲ್​ 2' ಮೊದಲ ದಿನ 10.69 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ.

Dream Girl 2 box office collection day 1
ಡ್ರೀಮ್​ ಗರ್ಲ್
author img

By ETV Bharat Karnataka Team

Published : Aug 26, 2023, 5:20 PM IST

2023ರ ಬಹುನಿರೀಕ್ಷಿತ ಚಿತ್ರ 'ಡ್ರೀಮ್​ ಗರ್ಲ್​ 2' ನಿನ್ನೆಯಷ್ಟೇ ತೆರೆ ಕಂಡಿದೆ. ಮೊದಲ ದಿನವೇ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಚಿತ್ರದ ಆರಂಭ ಉತ್ತಮ ಕಲೆಕ್ಷನ್​ನೊಂದಿಗೆ ಶುರುವಾಗಿದೆ. ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಮತ್ತು ಬ್ಯೂಟಿ ಅನನ್ಯಾ ಪಾಂಡೆ ನಟನೆಗೆ ಸಿನಿ ಪ್ರೇಮಿಗಳು ತಲೆದೂಗಿದ್ದಾರೆ. ಇದು ಬ್ಲಾಕ್​ಬಸ್ಟರ್​ 'ಡ್ರೀಮ್​ ಗರ್ಲ್'​ನ ಮುಂದುವರೆದ ಭಾಗವಾಗಿದೆ. ಈ ಸಿನಿಮಾವನ್ನು ರಾಜ್​ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಏಕ್ತಾ ಕಪೂರ್ ನಿರ್ಮಿಸಿದ್ದಾರೆ.

'ಡ್ರೀಮ್​ ಗರ್ಲ್' ಚಿತ್ರ 2019 ರಲ್ಲಿ ತೆರೆಕಂಡು ಸಿಕ್ಕಾಪಟ್ಟೆ ಯಶಸ್ಸು ಕಂಡಿತ್ತು. ಥಿಯೇಟರ್​ನಲ್ಲಿ ಧೂಳೆಬ್ಬಿಸಿತ್ತು. ಆಯುಷ್ಮಾನ್​ ಖುರಾನಾ ಪಾತ್ರವಂತೂ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿತ್ತು. ಪೂಜಾ ಪಾತ್ರದಲ್ಲೂ ನೋಡುಗರನ್ನು ಬಹುವಾಗಿ ಆಕರ್ಷಿಸಿದ್ದರು. ಹೀಗಾಗಿ 'ಡ್ರೀಮ್​ ಗರ್ಲ್​ 2' ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಮುಂದುವರೆದ ಭಾಗ ಯಾವ ರೀತಿ ಇರಬಹುದೆಂಬ ಕುತೂಹಲ ಜನರಲ್ಲಿತ್ತು. ಕೊನೆಗೂ ಚಿತ್ರ ನಿನ್ನೆ ತೆರೆ ಕಂಡಿದ್ದು, ಮೊದಲ ದಿನವೇ ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 10.69 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ.

  • " class="align-text-top noRightClick twitterSection" data="">

ಆಯುಷ್ಮಾನ್​ ಖುರಾನಾ​ ಅವರ ಈವರೆಗಿನ ಅತಿ ದೊಡ್ಡ ಓಪನರ್​ ಪಡೆದುಕೊಂಡ ಮೊದಲ ಚಿತ್ರ ಇದಾಗಿದೆ. "ಡ್ರೀಮ್​ ಗರ್ಲ್​ 2ನಿಂದ ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ಓಪನಿಂಗ್​ ಅನ್ನು ಪಡೆದುಕೊಂಡಿದ್ದೇನೆ. ಇದು ನನಗೆ ಬಹಳಷ್ಟು ಪ್ರೀತಿ ಮತ್ತು ಖುಷಿಯನ್ನು ನೀಡಿದೆ. ಡ್ರೀಮ್​ ಗರ್ಲ್​ 2 ಬಾಕ್ಸ್​ ಆಫೀಸ್​ನಲ್ಲಿ ಪಡೆದುಕೊಂಡ ಪ್ರಾರಂಭದ ಬಗ್ಗೆ ನನಗೆ ತುಂಬಾ ಸಂತೋಷ ಇದೆ" ಎಂದು ನಟ ಆಯುಷ್ಮಾನ್​ ಖುರಾನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ - ಶಬಾನಾ ಅಜ್ಮಿಯಂತೆ ಕಿಸ್ಸಿಂಗ್​ ಸೀನ್​ ಮಾಡಲು ರೆಡಿಯೆಂದ ಹೇಮಾ ಮಾಲಿನಿ

"ಜೊತೆಗೆ, ಜನರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಹಾಗೂ ಅವರಿಗೆ ಉತ್ತಮ ಸಮಯವನ್ನು ಅನುಭವಿಸುವಂತೆ ಮಾಡುವಲ್ಲಿ 'ಡ್ರೀಮ್​ ಗರ್ಲ್​ 2' ಯಶಸ್ವಿಯಾಗಿದೆ. ಈ ಚಿತ್ರವು ಹೆಚ್ಚು ಮನರಂಜನೆಯನ್ನು ನೀಡುತ್ತದೆ. ಪ್ರೇಕ್ಷಕರು ಹೃದಯದಿಂದ ನಗುತ್ತಿದ್ದಾರೆ. ಇದನ್ನು ಕಂಡು ನಮಗೆ ನಿಜಕ್ಕೂ ಖುಷಿಯಾಗಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ ಅನ್ನುವುದು ಖುಷಿಯ ವಿಚಾರ" ಎಂದಿದ್ದಾರೆ.

ಸಿನಿಮಾ ಮೇಲೆ ಪ್ರೇಕ್ಷಕರು ಇಟ್ಟಿದ್ದ ನಿರೀಕ್ಷೆ ಮತ್ತು ಭರವಸೆಯನ್ನು 'ಡ್ರೀಮ್​ ಗರ್ಲ್​ 2' ಚಿತ್ರತಂಡ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದೇಶದಾದ್ಯಂತ ಸಿನಿಮಾ ನೋಡಲು ಜನರು ಥಿಯೇಟರ್​ನಲ್ಲಿ ಮುಗಿಬಿದ್ದಿದ್ದಾರೆ. ಮೊದಲ ಶೋ ವೀಕ್ಷಿಸಿದ ಪ್ರೇಕ್ಷಕರು ಅತ್ಯಂತ ಉತ್ಸಾಹದಿಂದ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ತಮ್ಮ ಅನಿಸಿಕೆ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ಎಕ್ಸ್​​ (ಹಿಂದಿನ ಟ್ವಿಟರ್​) ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಚಿತ್ರತಂಡ ಹೀಗಿದೆ..: ಚಿತ್ರದಲ್ಲಿ ಆಯುಷ್ಮಾನ್ ಖುರಾನ್​, ಅನನ್ಯಾ ಪಾಂಡೆ ಜೊತೆಗೆ ಪರೇಶ್ ರಾವಲ್, ರಾಜ್ಪಾಲ್ ಯಾದವ್, ಅಸ್ರಾನಿ, ವಿಜಯ್ ರಾಜ್, ಅನ್ನು ಕಪೂರ್, ಸೀಮಾ ಪಹ್ವಾ, ಮನೋಜ್ ಜೋಶಿ, ಅಭಿಷೇಕ್ ಬ್ಯಾನರ್ಜಿ ಮತ್ತು ಮಂಜೋತ್ ಸಿಂಗ್ ಮುಂತಾದವರು ನಟಿಸಿದ್ದಾರೆ. ಏಕ್ತಾ ಆರ್ ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: Thalaivar 170: ಜೈಲರ್​ ಸಕ್ಸಸ್​ ಸೆಲೆಬ್ರೇಶನ್ - ರಜನಿಕಾಂತ್​ ಮುಂದಿನ ಸಿನಿಮಾ ಶೂಟಿಂಗ್​​ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.