ETV Bharat / entertainment

ಬೆಂಗಳೂರಿನಲ್ಲಿ ನಾಳೆ ಪ್ರದರ್ಶನಗೊಳ್ಳಲಿದೆ ಸಾಕ್ಷ್ಯಚಿತ್ರ 'ಪ್ರಾಜೆಕ್ಟ್ ಟೈಗರ್' - Project Tiger Documentary

ಸಾಕ್ಷ್ಯಚಿತ್ರ 'ಪ್ರಾಜೆಕ್ಟ್ ಟೈಗರ್' ನಾಳೆ ಬೆಂಗಳೂರಿನ ಜಯಮಹಲ್ ಅರಮನೆಯಲ್ಲಿ ಪ್ರದರ್ಶನಗೊಳ್ಳಲಿದೆ. ಚೊಚ್ಚಲ ಪ್ರದರ್ಶನಕ್ಕೆ ಸಾಕ್ಷ್ಯಚಿತ್ರ ತಂಡ ಸಜ್ಜಾಗಿದೆ.

Project Tiger Documentary
ಪ್ರಾಜೆಕ್ಟ್ ಟೈಗರ್ ಸಾಕ್ಷ್ಯಚಿತ್ರ
author img

By PTI

Published : Nov 3, 2023, 5:51 PM IST

ಬೆಂಗಳೂರು: ವನ್ಯಜೀವಿ ಚಿತ್ರ ನಿರ್ದೇಶಕರಾದ ಕಲ್ಯಾಣ್ ವರ್ಮಾ ಮತ್ತು ರೋಹಿತ್ ವರ್ಮಾ ಅವರ ''ಭಾರತದ ಹುಲಿಗಳ ಸಂರಕ್ಷಣೆ ಮೇಲಿನ ಕಥೆ'' ನಾಳೆ ಚೊಚ್ಚಲ ಪ್ರದರ್ಶನಗೊಳ್ಳಲಿದೆ. 90 ನಿಮಿಷಗಳ ಈ ಕಿರು ಚಿತ್ರ ಭಾರತದ ಹುಲಿ ಸಂರಕ್ಷಣೆ ವಿಷಯದ ಮೇಲೆ ಕೇಂದ್ರೀಕೃತವಾಗಿದೆ.

'ಪ್ರಾಜೆಕ್ಟ್​ ಟೈಗರ್​​'ನ ಸುವರ್ಣ ವಹೋತ್ಸವದ ಗುರುತಾಗಿ ರಚಿಸಲಾದ ಕಲ್ಯಾಣ್ ವರ್ಮಾ ಮತ್ತು ರೋಹಿತ್ ವರ್ಮಾ ಅವರ ಡಾಕ್ಯುಮೆಂಟರಿ 'ಪ್ರಾಜೆಕ್ಟ್ ಟೈಗರ್', ನವೆಂಬರ್ 4 ರಂದು ಅಂದರೆ ನಾಳೆ ಬೆಂಗಳೂರಿನಲ್ಲಿ ಜಯಮಹಲ್ ಅರಮನೆಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

''ಹುಲಿಗಳ ಇತಿಹಾಸ ತಿಳಿಯುವುದು, ಸಂರಕ್ಷಣಾ ಪ್ರಯತ್ನಗಳನ್ನು ಮತ್ತು ಅದರ ಯಶಸ್ಸನ್ನು ವೀಕ್ಷಿಸಲು ಅವಕಾಶ ನೀಡುವುದು ಈ ಚಿತ್ರದ ಹಿಂದಿರುವ ಪ್ರಮುಖ ಕಲ್ಪನೆ ಎಂದು ರೋಹಿತ್ ವರ್ಮಾ'' ತಿಳಿಸಿದ್ದಾರೆ.

"ತುಂಬಾ ಹಿಂದೆ, ನಿಖರವಾಗಿ ಹೇಳಬೇಕೆಂದರೆ 1970ರಲ್ಲಿ ಭಾರತಕ್ಕೆ ಬಂದು ಹುಲಿಯನ್ನು ಹೊಡೆದು ಅವನ್ನು ತೆಗೆದುಕೊಂಡು ಹೋಗುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿತ್ತು. ಅದನ್ನು ನಿವೀಗ ಊಹಿಸಲೂ ಸಾಧ್ಯವಿಲ್ಲ. ನಾವು ಎಷ್ಟು ದೂರ ಬಂದಿದ್ದೇವೆಂದರೆ, ಸದ್ಯ ಸಂಪೂರ್ಣ ಸಂರಕ್ಷಣೆಗೆ ಮಹತ್ವ ಕೊಡಲಾಗುತ್ತಿದೆ ಎಂದು" ಕಲ್ಯಾಣ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: Salaar vs Dunki: ಟೀಸರ್ ವೀಕ್ಷಣೆಯಲ್ಲಿ 'ಸಲಾರ್​​' ಮೇಲುಗೈ ಬೆಂಗಳೂರಿನ ಜಯಮಹಲ್ ಅರಮನೆಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

2005ರಲ್ಲಿ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಮತ್ತು 2006ರಲ್ಲಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ಅಳಿವಿನಂಚಿನಲ್ಲಿದೆ ಎಂಬ ಸರ್ವೆ ವರದಿ ಬಂದಾಗ ಹುಲಿಗಳ ಸಂರಕ್ಷಣೆಯಲ್ಲಿ ಒಂದು ಮಹತ್ವದ ತಿರುವು ಸಿಕ್ಕಿತು ಎಂದು ಫಿಲ್ಮ್​​​ಮೇಕರ್ಸ್​ ತಿಳಿಸಿದ್ದಾರೆ. ಆ ಸಂದರ್ಭ 1,411 ಹುಲಿಗಳು ಇರುವುದಾಗಿ ಸರ್ವೆ ವರದಿಯಲ್ಲಿ ಬಹಿರಂಗಗೊಂಡಿತ್ತು. ಆದರೆ ಈಗ ಅವುಗಳ ಸಂಖ್ಯೆ 3167ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: ಟೈಗರ್​ ಈಸ್​​ ಬ್ಯಾಕ್​: ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ ಸಲ್ಲು ಕ್ಯಾಟ್​ ಸಿನಿಮಾದ ಹೊಸ ವಿಡಿಯೋ

"ಇದು ಜನರ ಮೇಲೆ ಪರಿಣಾಮ ಬೀರಿತು. ಸಾರ್ವಜನಿಕ ಅಭಿಪ್ರಾಯ ಮತ್ತು ಭಾವನೆಗಳು ಬದಲಾಯಿತು. ಈ ಕಾರಣದಿಂದಾಗಿ, ಸರ್ಕಾರವು ನಿಜವಾಗಿಯೂ ಅಂದು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಅಗತ್ಯ ಮೂಲಸೌಕರ್ಯವನ್ನು ತಲುಪಿಸಬೇಕಾಯಿತು'' ಎಂದು ತಿಳಿಸಿದ್ದಾರೆ. ಹೀಗೆ ಹುಲಿ ಸಂರಕ್ಷಣೆ ಮೇಲೆ ನಿರ್ಮಾಣಗೊಂಡಿರುವ 'ಪ್ರಾಜೆಕ್ಟ್ ಟೈಗರ್' ಸಾಕ್ಷ್ಯಚಿತ್ರ ನಾಳೆ ಪ್ರದರ್ಶನಗೊಳ್ಳಲಿದೆ.

"ನಾವು ಇತರ ದೇಶಗಳಿಗಿಂತ ವನ್ಯಜೀವಿಗಳನ್ನು ನೋಡುವ ರೀತಿ ವಿಭಿನ್ನವಾಗಿದೆ. ಒಮ್ಮೆ ನೀವು ಹುಲಿಯನ್ನು ಉಳಿಸಿ, ಜಿಂಕೆಗಳನ್ನು ಉಳಿಸಿ, ನೀವು ಹಂದಿಯನ್ನು ಉಳಿಸಿ, ನೀವು ಮರಗಳನ್ನು ಉಳಿಸಿ. ನೀವು ಇಡೀ ಪರಿಸರ ವ್ಯವಸ್ಥೆಯನ್ನು ಉಳಿಸುತ್ತೀರಿ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ" ಎಂದು ರೋಹಿತ್ ಹೇಳುತ್ತಾರೆ.

ಉದಾಹರಣೆಗೆ, ಭಾರತದಲ್ಲಿ ಬಹುಮಟ್ಟಿಗೆ ಎಲ್ಲ ದೊಡ್ಡ ನದಿಗಳು ಯಾವುದಾದರೂ ಅರಣ್ಯವೊಂದರಿಂದಲೇ ಹುಟ್ಟಿಕೊಂಡಿವೆ. ಈಗ ಇಂತಹ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ಕಾರಣದಿಂದಾಗಿ ಸುಮಾರು 75,000 ಚದರ ಕಿಲೋಮೀಟರ್​ ಅರಣ್ಯವನ್ನು ಶಾಶ್ವತವಾಗಿ ಮೀಸಲಿಡಲಾಗಿದೆ. ಈ ಅರಣ್ಯವನ್ನು ಯಾರೂ ಎಂದಿಗೂ ಮುಟ್ಟಲು ಅಥವಾ ಅಲ್ಲಿ ಮರಗಳನ್ನು ಕಡಿಯದಂತೆ ಕ್ರಮ ಕೈಗೊಳ್ಳಲಾಗಿದೆ. ಇದು ಭಾರತ ಹೊಂದಿರುವ ದೊಡ್ಡ ರಕ್ಷಣೆಯಾಗಿದೆ ಎಂದು ಕಲ್ಯಾಣ್ ಹೇಳಿದರು.

ಈ ಸಾಕ್ಷ್ಯ ಚಿತ್ರವು ಪ್ರಾಜೆಕ್ಟ್ ಟೈಗರ್‌ನ ಒಳನೋಟವನ್ನು ಜನರಿಗೆ ತಿಳಿಸಲಿದೆ. ಹುಲಿಗಳು ಸಂಖ್ಯೆ ಹೆಚ್ಚಾದಾಗ ಅವುಗಳು ಆಹಾರಕ್ಕಾಗಿ ಕೆಲವೊಮ್ಮೆ ಹಳ್ಳಿಗಳು ಮತ್ತು ಪಟ್ಟಣಗಳ ಅಂಚಿಗೆ ಬರುವಂತೆ ಮಾಡುತ್ತದೆ. ಆಗ ಉಂಟಾಗುವ ಮಾನವ - ಒನ್ಯ ಪ್ರಾಣಿಗಳ ಸಂಘರ್ಷ ಹಾಗೂ ಅದಕ್ಕೆ ಪರಿಹಾರ ನೀಡುವ ಕೆಲಸವನ್ನು ಇದರಲ್ಲಿ ಮಾಡಲಾಗಿದೆ ಎಂದು ಕಲ್ಯಾಣ್ ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.