ETV Bharat / entertainment

ರಾಜಮೌಳಿ ಸ್ಟೈಲಿಶ್​ ಲುಕ್: ಜಕ್ಕಣ್ಣ ಇಲ್ಲದ ಜಾಗವಿಲ್ಲ, ಜಾಹೀರಾತೊಂದರಲ್ಲಿ ಆರ್​ಆರ್​ಆರ್​ ಡೈರೆಕ್ಟರ್​ ಮಿಂಚು!​​ - Rajamouli photo

ನಿರ್ದೇಶಕ ರಾಜಮೌಳಿ ಖಾಸಗಿ ಮೊಬೈಲ್​​ ತಯಾರಿಕಾ ಕಂಪನಿ ಜಾಹೀರಾತಿನಲ್ಲಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ.

Rajamouli Oppo Advertisement
ರಾಜಮೌಳಿ ಒಪ್ಪೋ ಜಾಹೀರಾತು
author img

By

Published : Jun 29, 2023, 11:08 AM IST

ನಿರ್ದೇಶಕ ರಾಜಮೌಳಿ ಆವರು ತಮ್ಮ ಅಮೋಘ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿ ಇಡೀ ಚಿತ್ರರಂಗದಲ್ಲಿ ಭದ್ರ ಸ್ಥಾನ ಪಡೆದುಕೊಂಡಿದ್ದಾರೆ. ಬಾಹುಬಲಿ ಮತ್ತು ಆರ್‌ಆರ್‌ಆರ್‌ ನಂತಹ ಸಿನಿಮಾಗಳ ಮೂಲಕ ಇಡೀ ಜಗತ್ತೇ ತೆಲುಗು ಇಂಡಸ್ಟ್ರಿಯತ್ತ ನೋಡುವಂತೆ ಮಾಡಿದ್ದಾರೆ ಜಕಣ್ಣ. ಆರ್​ಆರ್​ಆರ್​, ನಾಟು ನಾಟು ಮೂಲಕ ತೆಲುಗು ಸಿನಿಮಾ ಖ್ಯಾತಿಯನ್ನು ಆಸ್ಕರ್‌ಗೆ ಕೊಂಡೊಯ್ದ ಈ ಸ್ಟಾರ್ ಡೈರೆಕ್ಟರ್ ಇದೀಗ ಮತ್ತೊಂದು ಮಾಸ್ಟರ್ ಪೀಸ್ ಮಾಡಲು ಸಿದ್ಧರಾಗಿದ್ದಾರೆ. ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಾಹಸ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ವೇಳೆ ಜಕಣ್ಣನಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

  • " class="align-text-top noRightClick twitterSection" data="">

Rajamouli in Ad : ತೆರೆಮರೆಯಲ್ಲಿ ನಿರ್ದೇಶಕರು ಕಥೆಯನ್ನು ನಿರ್ದೇಶಿಸುವುದನ್ನು ನಾವು ನೋಡುತ್ತೇವೆ. ಆಗಾಗ್ಗೆ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡು ಮಿಂಚುತ್ತಾರೆ. ಆದರೆ ಅವರನ್ನು ಪೂರ್ಣ ಪ್ರಮಾಣದಲ್ಲಿ ತೆರೆಯ ಮೇಲೆ ಕಾಣುವುದು ಅಪರೂಪ. ಆದರೆ ಆರ್​ಆರ್​ಆರ್​​ ಡೈರೆಕ್ಟರ್​​ ರಾಜಮೌಳಿ ಅವರು ಇದೀಗ ಜಾಹೀರಾತಿನ ಚಿತ್ರೀಕರಣದಲ್ಲಿ ನಟಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಖಾಸಗಿ ಮೊಬೈಲ್​​ ತಯಾರಿಕಾ ಕಂಪನಿಯ ಜಾಹೀರಾತಿನಲ್ಲಿ ಡೈರೆಕ್ಟರ್​ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಮೊಬೈಲ್ ಕಂಪನಿಯೊಂದು ಭಾರತೀಯ ಪ್ರತಿಭಾನ್ವಿತ ನಿರ್ದೇಶಕ ರಾಜಮೌಳಿ ಅವರನ್ನು ತಮ್ಮ ಬ್ರ್ಯಾಂಡ್​​ ಅಂಬಾಸಿಡರ್ ಆಗಿ ಮಾಡಿಕೊಂಡಿದೆ. ಈ ಕ್ರಮದಲ್ಲಿ ತಮ್ಮ ಹೊಸ ಫೋನ್ ಪ್ರಚಾರಕ್ಕಾಗಿ ಹೊಸ ಜಾಹೀರಾತೊಂದನ್ನು ಚಿತ್ರೀಕರಿಸಿದ್ದಾರೆ. ರಾಜಮೌಳಿ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಕ್ಕಣ್ಣ ಸಹಜವಾಗಿ ಯಾವಾಗಲೂ ಬಹಳ ಸಿಂಪಲ್ ಆಗಿ ಕಾಣ್ತಾರೆ. ಆದ್ರೆ ಈ ಜಾಹೀರಾತಿನಲ್ಲಿ ಸಖತ್​ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ನೋಟಕ್ಕೆ ಯುವಕರೂ ಕೂಡ ಹುಬ್ಬೇರಿಸಿದ್ದು, ಜಕಣ್ಣ ಸೂಪರ್ ಎಂಬ ಕಾಮೆಂಟ್​​​ಗಳು ಬರುತ್ತಿವೆ.

ಇದನ್ನೂ ಓದಿ: Parineeti Chopra: 'ಪರಿ'ಯ ಸೌಂದರ್ಯ ಹೆಚ್ಚಿಸಿದ ಸರಳತೆ - ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳ ಮೆಚ್ಚುಗೆ

ರಾಜಮೌಳಿ ನಿರ್ದೇಶನದ ಸಿನಿಮಾ : 'RRR' ಮೂಲಕ ಸಿನಿ ಉದ್ಯಮಕ್ಕೆ ದೊಡ್ಡ ಬ್ಲಾಕ್‌ಬಸ್ಟರ್ ನೀಡಿದ ಜಕ್ಕಣ್ಣ, ತೆಲುಗು ಚಿತ್ರರಂಗದ ಖ್ಯಾತಿಯನ್ನು 'ಆಸ್ಕರ್' ವರೆಗೆ ಕೊಂಡೊಯ್ದರು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ತಯಾರಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1,200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹಲವು ದಾಖಲೆ ಬರೆಯಿತು. ಈ ಸಿನಿಮಾದ ನಂತರ ರಾಜಮೌಳಿ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳ ಜೊತೆಗೆ ಪ್ರೀ-ಪ್ರೊಡಕ್ಷನ್ ಕೆಲಸವೂ ನಡೆಯುತ್ತಿದೆ. ಆ್ಯಕ್ಷನ್ ಅಡ್ವೆಂಚರ್ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಈ ವರ್ಷಾಂತ್ಯದಲ್ಲಿ ಸಿನಿಮಾ ಸೆಟ್ಟೇರಲಿದೆ. ರಾಜಮೌಳಿ ಅವರ ತಂದೆ ಹಾಗೂ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಇದನ್ನೂ ಓದಿ: Rashmika Mandanna: ಅಭಿಮಾನಿಗಳಿಗೊಂದು ಪ್ರಶ್ನೆ ಕೇಳಿದ ನ್ಯಾಷನಲ್​ ಕ್ರಶ್ - ನಿಮ್ಮ ಉತ್ತರವೇನು?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.