ETV Bharat / entertainment

'ಕಬ್ಜ 2'ಗೆ ನಿರ್ದೇಶಕ ಆರ್ ಚಂದ್ರು ತಯಾರಿ: ಶಿವಣ್ಣನ ಜೊತೆ ಬಾಲಿವುಡ್ ನಟನ ಎಂಟ್ರಿ? - Kabzaa latest news

ಕಬ್ಜ 2 ಚಿತ್ರಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Kabzaa 2
ಶಿವಣ್ಣನ ಜೊತೆ ನಾನಾ ಪಾಟೇಕರ್ ನಟನೆ
author img

By

Published : Mar 22, 2023, 3:20 PM IST

ರಿಯಲ್ ಸ್ಟಾರ್ ಉಪೇಂದ್ರ. ಅಭಿನಯ ಚಕ್ರವರ್ತಿ ಸುದೀಪ್, ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್ ಅಭಿನಯದ ಕಬ್ಜ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ದಾಖಲೆಗಳು ಪುಡಿಗಟ್ಟುತ್ತಿವೆ. ಪ್ರತಿ ದಿನ ಹೌಸ್ ಫುಲ್ ಬೋರ್ಡ್​ಗಳು ಥಿಯೇಟರ್ ಎದುರು ರಾರಾಜಿಸ್ತಿವೆ. ಇದು ಕೇವಲ ಮೂರು ದಿನದ ಕ್ರೇಜ್, ಸೋಮವಾರ ನೋಡಿ ಅಂದೋರ ಬಾಯಿ ಮುಚ್ಚಿಸಿದೆ ಬಾಕ್ಸ್ ಆಫೀಸ್​ ಕಲೆಕ್ಷನ್​. ಸೋಮವಾರ ಕೂಡ ವಿರೋಧಿಗಳ ತಲೆ ಕೆಡುವಷ್ಟರ ಮಟ್ಟಿಗೆ ಹೌಸ್​ ಫುಲ್​ ಆಗಿತ್ತು. ವಾರದ ಮೊದಲ ದಿನ, ಸೋಮವಾರ ಅಂದ್ರೂ ಸಹ ಕಬ್ಜದ್ದೇ ಹವಾ.

ಒಂದು ಕಡೆ ಮುಂಬೈನಿಂದ ಕಾಲ್, ಇನ್ನೊಂದು ‌ಕಡೆ ಚೆನ್ನೈನಿಂದ ಕಾಲ್, ಹೈದರಾಬಾದ್, ತಿರುವನಂತಪುರಂ, ಅಷ್ಟೇ ಏಕೆ ಮಸ್ಕತ್, ಮಲೇಶಿಯಾಗಳಿಂದಲೂ ಫೋನ್ ಕರೆಗಳು ಬರುತ್ತಲೇ ಇವೆ. ಚಂದ್ರಣ್ಣ ಸೂಪರ್ ಕಲೆಕ್ಷನ್ ಅಣ್ಣಾ ಅನ್ನೋ ಮಾತುಗಳು ಆರ್.ಚಂದ್ರು ಕಿವಿಯಲ್ಲಿ ಗುಯ್ ಗುಡುತ್ತಿವೆ. ಹಾಗಾಂತ ಗೆಲುವಿನ ಅಲೆಯಲ್ಲಿ ತೇಲಾಡ್ತಿಲ್ಲ ನಿರ್ದೇಶಕ ಆರ್​ ಚಂದ್ರು. ಇಷ್ಟು ದಿನ ನಿದ್ದೆ ಇಲ್ಲದೇ ಕೆಲ್ಸ ಮಾಡಿದೆ, ಫೋನ್ ಸ್ವಿಚ್ ಆಫ್ ಮಾಡಿ ಒಳ್ಳೇ ನಿದ್ದೆ ಮಾಡ್ತೀನಿ ಅನ್ನೋ ಪಾರ್ಟಿಯಲ್ಲ ಆರ್ ಚಂದ್ರು.

ಇತ್ತ ಕಬ್ಜ ಬಗ್ಗೆ ಹೊಗಳಿಕೆಯ ಸುರಿಮಳೆ, ಬಾಕ್ಸ್​​ ಆಫೀಸ್​ನಲ್ಲಿ ಹಣದ ಹೊಳೆ, ಅತ್ತ ಆರ್. ಚಂದ್ರು ಕಬ್ಜ-2 ಸ್ಕೆಚ್ ಹಾಕುತ್ತಿದ್ದಾರೆ. ಇದೇ ಬಿರುಸಿನಲ್ಲೇ ಕಬ್ಜ 2 ಮಾಡಿಬಿಡೋಣ ಎಂಬ ವೇಗದಲ್ಲಿ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ಅಂದಹಾಗೆ ಕಬ್ಜ 2ನಲ್ಲಿ ಶಿವರಾಜ್​ಕುಮಾರ್ ಪಾತ್ರಕ್ಕೆ ಸ್ಕೋಪ್ ಇರಲಿದೆ. ಇಡೀ ಸಿನಿಮಾವನ್ನು ಸ್ಯಾಂಡಲ್​​ವುಡ್ ಕಿಂಗ್​ ಅವರೇ ಲೀಡ್ ಮಾಡಲಿದ್ದಾರೆ ಅನ್ನೋದನ್ನು ಸಿನಿಮಾ ನೋಡಿದ ಯಾರು ಬೇಕಾದರೂ ಊಹಿಸಬಹುದು.

ಇದನ್ನೂ ಓದಿ: 'ಗ್ಯಾಸ್‌ಲೈಟ್' ಪ್ರಚಾರದಲ್ಲಿ ಸಾರಾ ಬ್ಯುಸಿ: ಬಟ್ಟೆ ಬೆಲೆ ಕೇಳಿ ಅಭಿಮಾನಿಗಳು ದಂಗು!

ಚಿತ್ರರಸಿಕರ ಊಹೆ ನಿಜ ಮಾಡಲು ಆರ್ ಚಂದ್ರು ಹೊರಟಿದ್ದಾರೆ. ಕಬ್ಜ 2ಗಾಗಿ ಶಿವಣ್ಣನ ಜೊತೆ ಒಂದು ಸುತ್ತು ಮಾತುಕತೆ ಕೂಡ ನಡೆಸಿದ್ದಾರೆ. ಕಬ್ಜದಲ್ಲಿ ಶಿವಣ್ಣ ಬರೋದೇ 120 ಸೆಕೆಂಡು. ಅಷ್ಟರಲ್ಲೇ ಥಿಯೇಟರ್ ಮಾಳಿಗೆ ಕಿತ್ತೋಗುವಷ್ಟು ಶಿಳ್ಳೆ, ಚಪ್ಪಾಳೆಗಳು ಮಾರ್ದನಿಸುತ್ತಿವೆ. ಎರಡು ನಿಮಿಷದಲ್ಲೇ ಅವರ ಎಂಟ್ರಿ, ಸೀನ್​ಗಳು ಹೀಗಿರಬೇಕಾದರೆ, ಇನ್ನೂ ಸಂಪೂರ್ಣ ಸಿನಿಮಾದಲ್ಲಿ ಶಿವಣ್ಣನ ಎನರ್ಜಿಯನ್ನು ಆರ್.ಚಂದ್ರು ಯಾವ ರೀತಿ ಬಳಸಿಕೊಳ್ಳಬಹುದು ಎಂದು ಪ್ರೇಕ್ಷಕರು ಲೆಕ್ಕಾಚಾರ ಹಾಕಿದ್ದಾರೆ. ಹ್ಯಾಟ್ರಿಕ್ ಹೀರೋ ಕೂಡ ಸಖತ್​ ಉತ್ಸಾಹದಲ್ಲಿದ್ದಾರೆ.

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ ಬಾಲಿವುಡ್ ಪವರ್​ಫುಲ್ ಕಪಲ್​ 'ವಿಕ್ಯಾಟ್​'

ಇಷ್ಟಕ್ಕೆ ಸುಮ್ಮನಾಗದೇ ಪ್ರಮುಖ ವಿಲನ್ ಪಾತ್ರಕ್ಕೆ ಬಾಲಿವುಡ್ ಕ್ಷೇತ್ರದ ದೊಡ್ಡ ನಟರೊಬ್ಬರ ಬಳಿ ಕೂಡ ಮಾತನಾಡಿದ್ದಾರೆ‌ ಆರ್ ಚಂದ್ರು. ಅವರೇ ಬೇಸ್ ವಾಯ್ಸ್​ನಿಂದಲೇ ಬಾಲಿವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಾನಾ ಪಾಟೇಕರ್. ಅವರನ್ನು ಕನ್ನಡಕ್ಕೆ ಕರೆತರುವ ಪ್ಲ್ಯಾನ್​​ ಮಾಡಿದ್ದಾರೆ. ಈ ಬಾರಿ ಕನ್ನಡಿಗರಿಗೆ ಡಿಫರೆಂಟ್ ಫೀಲ್‌ ಕೂಡಬೇಕು ಅಂತಾ ಆರ್. ಚಂದ್ರು ನಿರ್ಧಾರ ಮಾಡಿದ್ದಾರಂತೆ. ಹೀಗಾಗಿ ದೊಡ್ಡ ರೈಟರ್ ಅನ್ನು ಕರೆತರುವ ಚಾನ್ಸ್​ ಕೂಡ ಇದೆ ಎನ್ನುವ ಮಾಹಿತಿ ಇದ್ದು, ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ. ಹೀಗೆ ಕಬ್ಜ 2ಗೆ ದೊಡ್ಡ ತಯಾರಿಯನ್ನೇ ನಡೆಸಿರೋ ನಿರ್ದೇಶಕ ಆರ್​ ಚಂದ್ರು ಏಪ್ರಿಲ್​ನಲ್ಲಿ ಕಬ್ಜ 2 ಅನೌನ್ಸ್ ಮಾಡಿದ್ರೂ ಅಚ್ಚರಿ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.