ETV Bharat / entertainment

'ಸಲಾರ್​' ಸಿನಿಮಾ 'ಕೆಜಿಎಫ್​'ಗೆ ಹೋಲಿಸಿದ ಫ್ಯಾನ್ಸ್​: ನಿರ್ದೇಶಕ ಪ್ರಶಾಂತ್​ ನೀಲ್​ ಹೇಳಿದ್ದೇನು? - etv bharat kannada

Salaar: 'ಕೆಜಿಎಫ್​'ಗೂ 'ಸಲಾರ್​' ಸಿನಿಮಾಗೂ ಯಾವುದೇ ಲಿಂಕ್​ ಇಲ್ಲ ಎಂದು ನಿರ್ದೇಶಕ ಪ್ರಶಾಂತ್​ ನೀಲ್ ಸ್ಪಷ್ಟಪಡಿಸಿದ್ದಾರೆ.

Director Prashanth Neel reveals there is no connection between salaar and KGF
'ಸಲಾರ್​' ಸಿನಿಮಾವನ್ನು 'ಕೆಜಿಎಫ್​'ಗೆ ಹೋಲಿಸಿದ ಫ್ಯಾನ್ಸ್​: ನಿರ್ದೇಶಕ ಪ್ರಶಾಂತ್​ ನೀಲ್​ ಹೇಳಿದ್ದೇನು?
author img

By ETV Bharat Karnataka Team

Published : Dec 19, 2023, 5:22 PM IST

ಟಾಲಿವುಡ್​ ರೆಬೆಲ್​ ಸ್ಟಾರ್​ ಪ್ರಭಾಸ್​ ಮತ್ತು 'ಕೆಜಿಎಫ್​' ಖ್ಯಾತಿಯ ಪ್ರಶಾಂತ್ ನೀಲ್​​ ಕಾಂಬೋದಲ್ಲಿ ಮೂಡಿ ಬಂದಿರುವ ಸಿನಿಮಾ 'ಸಲಾರ್​'. ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ ಭಾರಿ ಬಂಡವಾಳ ಹೂಡಿ ಚಿತ್ರವನ್ನು ನಿರ್ಮಿಸಿದೆ. ಇದೇ ಡಿಸೆಂಬರ್​ 22ರಂದು 'ಸಲಾರ್​' ತೆರೆ ಕಾಣಲಿದೆ. ಪ್ರಭಾಸ್​ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸೋಮವಾರ ಚಿತ್ರತಂಡ ಅನಾವರಣಗೊಳಿಸಿರುವ ಎರಡನೇ ಟ್ರೇಲರ್​ನಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿವೆ.

ಆದರೆ, ಈ ಸಿನಿಮಾಗೂ 'ಕೆಜಿಎಫ್​'ಗೂ ಸಂಬಂಧವಿದೆ ಎಂಬ ಹಲವು ವರದಿಗಳಿವೆ. ಜುಲೈನಲ್ಲಿ ಬಿಡುಗಡೆಯಾದ 'ಸಲಾರ್​' ಟೀಸರ್​ನಲ್ಲಿ ಕೆಲ ದೃಶ್ಯಗಳನ್ನು ನೋಡಿದ ಅಭಿಮಾನಿಗಳು ಹಾಗೆ ಅಂದುಕೊಂಡಿದ್ದಾರೆ. ಕೆಜಿಎಫ್​ 2 ಕ್ಲೈಮ್ಯಾಕ್ಸ್​ನಲ್ಲಿ ಯಶ್​ ಮೇಲೆ ಅಟ್ಯಾಕ್​ ಆಗುವ ಸೀನ್​ ಹಾಗೂ 'ಸಲಾರ್​' ಟೀಸರ್​ನಲ್ಲಿ ತೋರಿಸಲಾಗಿರುವ ದೃಶ್ಯಗಳು ಒಂದೇ ಎನ್ನುತ್ತಾರೆ ಅಭಿಮಾನಿಗಳು. ಆದರೆ, ಸಿನಿಮಾ ಪ್ರಚಾರದ ಭಾಗವಾಗಿ ನಿರ್ದೇಶಕ ಪ್ರಶಾಂತ್​ ನೀಲ್​ ಈ ಎಲ್ಲದಕ್ಕೂ ಪ್ರತಿಕ್ರಿಯಿಸಿದ್ದಾರೆ. 'ಕೆಜಿಎಫ್​'ಗೂ 'ಸಲಾರ್​'ಗೂ ಯಾವುದೇ ಸಂಬಂಧವಿಲ್ಲ ಎಂದು ಮೊದಲೇ ಹೇಳಬೇಕಿತ್ತು. ಅದು ನನ್ನ ತಪ್ಪು' ಎಂದು ಪ್ರಶಾಂತ್​ ನೀಲ್​ ಸ್ಪಷ್ಟಪಡಿಸಿದ್ದಾರೆ.

'ಸಲಾರ್​' ಅಡ್ವಾನ್ಸ್​ ಬುಕ್ಕಿಂಗ್​: ಭಾರಿ ನಿರೀಕ್ಷೆಗಳನ್ನು ಮೂಡಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದೆ. 'ಸಲಾರ್​' ಈಗಾಗಲೇ ಮುಂಗಡ ಟಿಕೆಟ್​ ಬುಕ್ಕಿಂಗ್​ನಲ್ಲಿ 21 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ವರದಿಯಾಗಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಜೊತೆಗೆ 'ಕೆಜಿಎಫ್​' ದಾಖಲೆಯನ್ನು 'ಸಲಾರ್​' ಮುರಿಯಲು ಮುಂದಾಗಿದೆ.

'ಕೆಜಿಎಫ್​ 2' ವಿಶ್ವದಾದ್ಯಂತ ಮೊದಲ ದಿನ 170 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಆದರೆ, 'ಸಲಾರ್​' ಮೇಲಿನ ಕ್ರೇಜ್​ ನೋಡಿದರೆ ಈ ದಾಖಲೆ ಮುರಿಯುವುದು ಕಷ್ಟವೇನಲ್ಲ ಎನ್ನುತ್ತಾರೆ ಚಿತ್ರ ಪ್ರೇಮಿಗಳು. 'ಸಲಾರ್​' ಈ ದಾಖಲೆ ಮಾಡಿದರೆ, 2023ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಉಳಿಯಲಿದೆ. ಏನಾಗುತ್ತೋ ಕಾದು ನೋಡಲು ಸಿನಿಮಾ ರಿಲೀಸ್​ವರೆಗೂ ಕಾಯಲೇಬೇಕು.

ಕೆಜಿಎಫ್​, ಕಾಂತಾರ ಮುಂತಾದ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ 'ಸಲಾರ್​' ಸಿನಿಮಾ ನಿರ್ಮಿಸಿದೆ. ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಜೊತೆಗೆ ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​, ಮೀನಾಕ್ಷಿ ಚೌಧರಿ, ಈಶ್ವರಿ ರಾವ್​, ಶರಣ್​ ಶಕ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Salaar vs Dunki: ಅಡ್ವಾನ್ಸ್​ ಟಿಕೆಟ್​ನಲ್ಲಿ ಶಾರುಖ್​​ ಸಿನಿಮಾ ಮುಂದು, ಪ್ರಭಾಸ್​​ ಚಿತ್ರದಿಂದಲೂ ಪೈಪೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.