ETV Bharat / entertainment

Gadar 2: ಸನ್ನಿ ಡಿಯೋಲ್​ ಮುಖ್ಯಭೂಮಿಕೆಯ ಗದರ್ 2 ವೀಕ್ಷಿಸಿದ ಡಿಂಪಲ್​ ಕಪಾಡಿಯಾ! - ಗದರ್ 2

Dimple Kapadia Watches Gadar 2: ನಟಿ ಡಿಂಪಲ್​ ಕಪಾಡಿಯಾ ಗದರ್ 2 ಸಿನಿಮಾ ವೀಕ್ಷಿಸಿದ್ದಾರೆ.

dimple kapadia watches gadar 2
ಗದರ್ 2 ವೀಕ್ಷಿಸಿದ ಡಿಂಪಲ್​ ಕಪಾಡಿಯಾ
author img

By ETV Bharat Karnataka Team

Published : Aug 23, 2023, 2:06 PM IST

ಗದರ್ 2 ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ಹೆಚ್ಚಿನವರ ತಲೆತಿರುಗುವಂತೆ ಮಾಡಿದೆ. ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದವರೂ ಕೂಡ ಸಿನಿಮಾಗೆ ಮನಸೋತಿದ್ದಾರೆ. ಇದೀಗ ಬಾಲಿವುಡ್​ ಹಿರಿಯ ನಟಿ ಡಿಂಪಲ್​ ಕಪಾಡಿಯಾ (Dimple Kapadia) ಕೂಡ ಸಿನಿಮಾ ವೀಕ್ಷಿಸಿದ್ದಾರೆ.

ಎರಡು ವಾರಗಳ ಬಳಿಕ ಸಿನಿಮಾ ವೀಕ್ಷಣೆ: ಒಂದು ಸಮಯದಲ್ಲಿ ನಟಿ ಡಿಂಪಲ್​ ಕಪಾಡಿಯಾ ಮತ್ತು ನಟ ಸನ್ನಿ ಡಿಯೋಲ್​ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಡಿಂಪಲ್​​ ಸನ್ನಿಯ ಸಿನಿಮಾ ವೀಕ್ಷಿಸಿದ್ದಾರೆ. ಬಿಡುಗಡೆ ಆದ ಎರಡು ವಾರಗಳ ಬಳಿಕ ಮಂಗಳವಾರದಂದು ಮುಂಬೈನ ಥಿಯೇಟರ್​ನಲ್ಲಿ ಬ್ಲಾಕ್​ಬಸ್ಟರ್​ ಸಿನಿಮಾ ವೀಕ್ಷಿಸಿದ್ದಾರೆ.

ಡಿಂಪಲ್​ ಕಪಾಡಿಯಾ ವಿಡಿಯೋ ಶೇರ್: ಮಂಗಳವಾರದಂದು ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನಟಿ ಡಿಂಪಲ್​ ಕಪಾಡಿಯಾ ಅವರ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಚಿತ್ರಮಂದಿರದಿಂದ ನಟಿ ನಿರ್ಗಮಿಸುತ್ತಿರುವುದುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಡಿಂಪಲ್​​ ಬಿಳಿ ಶರ್ಟ್, ಕಪ್ಪು ಪ್ಯಾಂಟ್​, ಕ್ಯಾಪ್​ ಧರಿಸಿದ್ದರು ಜೊತೆಗೊಂದು ಹ್ಯಾಂಡ್​ ಬ್ಯಾಗ್​ ಹಿಡಿದಿದ್ದರು. ಥಿಯೇಟರ್​ನಿಂದ ಹೊರಬುತ್ತಿದ್ದಂತೆ ನಟಿಯ ಸುತ್ತ ಪಾಪರಾಜಿಗಳು ಸುತ್ತುವರೆದರು. ಆದ್ರೆ ಡಿಂಪಲ್​​ ಸೀದಾ ತಮ್ಮ ಕಾರಿನೆಡೆಗೆ ನಡೆದರು.

ಸನ್ನಿ ಡಿಂಪಲ್​ ಡೇಟಿಂಗ್​ ವದಂತಿ: ಹಲವು ವರ್ಷಗಳ ಹಿಂದೆ ನಟಿ ಡಿಂಪಲ್​ ಕಪಾಡಿಯಾ ಅವರು ನಟ ಸನ್ನಿ ಡಿಯೋಲ್​ ಜೊತೆ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳು ಎದ್ದಿತ್ತು. 1973 ರಲ್ಲಿ ಡಿಂಪಲ್​​ ನಟಿ ರಾಜೇಶ್​ ಖನ್ನಾ ಅವರನ್ನು ಮದುವೆಯಾದರು. ದಂಪತಿಗೆ ಟ್ವಿಂಕಲ್​ ಮತ್ತು ರಿಂಕೆ ಎಂಬ ಇಬ್ಬರು ಮಕ್ಕಳಿದ್ದಾರೆ. ನಟ ಸನ್ನಿ ಡಿಯೋಲ್ 1984 ರಲ್ಲಿ ಪೂಜಾ ಅವರನ್ನು ಮದುವೆಯಾದರು. ದಂಪತಿಗೆ ಕರಣ್​ ಮತ್ತು ರಾಜ್​ವೀರ್​ ಎಂಬ ಇಬ್ಬರು ಪುತ್ರರಿದ್ದಾರೆ.

ಇತ್ತೀಚೆಗಷ್ಟೇ ನಿರ್ಮಾಪಕ ಕರೀಂ ಮೊರಾನಿ ಅವರ ಬರ್ತ್ ಡೇ ಪಾರ್ಟಿಯಲ್ಲಿ ಸನ್ನಿ, ಡಿಂಪಲ್​ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅರ್ಜುನ್​, ಆಗ್​ ಕಾ ಗೋಲಾ, ಮಂಜಿಲ್​ ಮಂಜಿಲ್​​, ನರಸಿಂಹ, ಗುನ್ಹಾ ದಂತಹ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಶಿವಣ್ಣ, ರಿಷಬ್​ ಶೆಟ್ಟಿ, ಯೋಗರಾಜ್​ ಭಟ್​ ಸೇರಿ ಸಿನಿ ಗಣ್ಯರಿಂದ ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಕೆ

ಅನಿಲ್​ ಶರ್ಮಾ ನಿರ್ದೇಶನದ ಗದರ್​ 2ನಲ್ಲಿ ಸನ್ನಿ ಡಿಯೋಲ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಮಿಷಾ ಪಟೇಲ್​ ಚಿತ್ರದ ನಾಯಕ ನಟಿ. ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಭಾಗಿಯಾಗುವ ಸಲುವಾಗಿ ಸನ್ನಿ ಡಿಯೋಲ್ ಸದ್ಯ ಲಂಡನ್​ನಲ್ಲಿದ್ದಾರೆ.

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ! ಸ್ಯಾಂಡಲ್​ವುಡ್​ ಜನಪ್ರಿಯ ನಟ ಡಾಲಿ ಧನಂಜಯ್​ ಸಿನಿಪಯಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.