ಬೆಂಗಳೂರು: ದಿಗಂತ್ಗೆ ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ. ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಂದೆ ಕೃಷ್ಣಮೂರ್ತಿ ತಿಳಿಸಿದರು.
ಮಣಿಪಾಲ್ ಆಸ್ಪತ್ರೆ ಎದುರು ಮಾತನಾಡಿದ ಅವರು, ಓಡಾಡುವಾಗ ಬೀಳೋದು ಸಹಜ. ಸ್ಪೈನಲ್ಗೆ ಮೈನರ್ ಇಂಜುರಿ ಆಗಿದೆ. ವೈದ್ಯರು ಆಪರೇಷನ್ ಮಾಡ್ತೀವಿ ಎಂದು ಕರೆದುಕೊಂಡು ಹೋಗಿದ್ದಾರೆ ಎಂದರು.
ಕಾಂಪ್ಲಿಕೇಷನ್ ಏನೂ ಇಲ್ಲ: ದಿಗಂತ್ ಜೊತೆ ಆತ್ಮೀಯ ಬಾಂಧವ್ಯ ಹೊಂದಿರುವ ನಿರ್ದೇಶಕ ಯೋಗರಾಜ್ ಭಟ್ ವಿಷಯ ತಿಳಿದು ಕೂಡಲೇ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ನಾನು ದಿಗಂತ್ ಹಾಗು ಐಂದ್ರಿತಾ ತಂದೆ ಜೊತೆ ಮಾತನಾಡಿದ್ದೇನೆ. ಆತ ತುಂಬಾ ಚೆನ್ನಾಗಿದ್ದಾನೆ. ಸಮುದ್ರ ದಡದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಆಯತಪ್ಪಿ ಬಿದ್ದು ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕಾಂಪ್ಲಿಕೇಷನ್ ಏನೂ ಇಲ್ಲ. ಗಾಬರಿಪಡುವ ಅವಶ್ಯಕತೆ ಇಲ್ಲ ಎಂದರು.
ಎರಡು-ಮೂರು ಗಂಟೆಯಲ್ಲಿ ಆಪರೇಷನ್ ಆಗಲಿದೆ. ದೊಡ್ಡ ಆಘಾತಕಾರಿ ವಿಚಾರ ಏನೂ ಇಲ್ಲ. ಸೈಕ್ಲಿಂಗ್ ಮಾಡಿ ಸದೃಢವಾಗಿದ್ದಾನೆ. ಆಗಿರೋದು ಸಣ್ಣ ಗಾಯ ಅಷ್ಟೇ. ಸರಿ ಹೋಗುತ್ತೆ ಎಂದು ಹೇಳಿದರು.
ಇದನ್ನೂ ಓದಿ: ನಟ ದೂದ್ ಪೇಡಾ ದಿಗಂತ್ ಕುತ್ತಿಗೆಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ