ETV Bharat / entertainment

'ದೃಶ್ಯಂ 2' ಭರ್ಜರಿ ಕಲೆಕ್ಷನ್.. ಲಾಲ್, ವೆಂಕಿಗೆ ಸಿಗದ ಅವಕಾಶ ದೇವ್​​ಗನ್​ಗೆ!

ಈಗಾಗಲೇ ತಮಿಳು, ತೆಲುಗಿನಲ್ಲಿ ಓಟಿಟಿ ಅಲ್ಲಿ ಬಿಡುಗಡೆ ಆಗಿರುವ 'ದೃಶ್ಯಂ 2'ನ ಹಿಂದಿನ ರೀಮೇಕ್​​ ಚಿತ್ರಮಂದಿರಗಳಲ್ಲಿ ಬಿಡುಗಡೆ ಅಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

Drishyam 2 collection
ದೃಶ್ಯಂ 2 ಭರ್ಜರಿ ಕಲೆಕ್ಷನ್
author img

By

Published : Nov 22, 2022, 4:31 PM IST

ಟಾಪ್ ಹೀರೋಗಳಾದ ಮೋಹನ್ ಲಾಲ್ ಮತ್ತು ವೆಂಕಟೇಶ್ ಉತ್ತಮ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಹೌದು, ಅಜಯ್ ದೇವಗನ್ ಅವರಿಗೆ ಅದೃಷ್ಟ ಒಲಿದಿದೆ. ಲಾಲ್ ಮತ್ತು ವೆಂಕಿ ಕಳೆದುಕೊಂಡ ಉತ್ತಮ ಅವಕಾಶವನ್ನು ಅಜಯ್ ದೇವಗನ್ ಪಡೆದಿದ್ದಾರೆ.

ಮಲಯಾಳಂ ಬ್ಲಾಕ್‌ಬಸ್ಟರ್ ಚಿತ್ರ 'ದೃಶ್ಯಂ' ಹಲವು ಭಾಷೆಗಳಲ್ಲಿ ರೀಮೇಕ್ ಆಗಿದೆ. ಕಳೆದ ವರ್ಷ 'ದೃಶ್ಯಂ 2' ತೆರೆಕಂಡಿತ್ತು. ಕೋವಿಡ್‌ನಿಂದಾಗಿ, ಮೋಹನ್‌ಲಾಲ್ ಅಭಿನಯದ ಮಲಯಾಳಂ ಚಲನಚಿತ್ರವು ನೇರವಾಗಿ ಒಟಿಟಿ ಅಲ್ಲಿ ಬಿಡುಗಡೆಯಾಯಿತು. ಇತರೆ ಭಾಷೆಗಳಿಗೆ ರೀಮೇಕ್ ಹಕ್ಕುಗಳು ಮಾರಾಟವಾಯಿತು. ನಂತರ, ವೆಂಕಟೇಶ್ ಅವರ ಮುಖ್ಯ ಪಾತ್ರದಲ್ಲಿ ಜೀತು ಜೋಸೆಫ್ ಅವರು ತೆಲುಗಿನಲ್ಲಿ ಅದೇ ಚಿತ್ರವನ್ನು ನಿರ್ದೇಶನ ಮಾಡಿದರು. ಈ ಸಿನಿಮಾವನ್ನು ಥಿಯೇಟರ್‌ಗೆ ತರಲು ಶತಾಯಗತಾಯ ಪ್ರಯತ್ನ ಮಾಡಲಾಗಿತ್ತು. ಕೋವಿಡ್​ ಕಡಿಮೆಯಾಗದ ಪರಿಸ್ಥಿತಿಯಲ್ಲಿ, ಅವರು OTT ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.

ಇದೀಗ ಅದೇ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗಿದ್ದು, ಇತ್ತೀಚೆಗಷ್ಟೇ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಅಭಿಷೇಕ್ ಪಾಠಕ್ ಹಿಂದಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆ ಮಾಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಜಯ್ ಜೊತೆಗೆ ಅಕ್ಷಯ್ ಖನ್ನಾ, ಟಬು ಮತ್ತು ಶ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಿಂದಿಯ 'ದೃಶ್ಯಂ 2' ಬಿಡುಗಡೆಯಾದ ದಿನದಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಈವರೆಗೆ 64 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಚಿತ್ರ ವಿಶ್ಲೇಷಕ ತರುಣ್ ಆದರ್ಶ್ ಹೇಳಿದ್ದಾರೆ. ಸದ್ಯ ಹಿಂದಿಯಲ್ಲಿ ಯಾವುದೇ ಅದ್ಭುತ ಚಿತ್ರಗಳಿಲ್ಲ. ಕಾಂತಾರ ಟ್ರೆಂಡ್ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರೊಂದಿಗೆ ಹಿಂದಿ ಪ್ರೇಕ್ಷಕರು 'ದೃಶ್ಯಂ 2' ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ಇದನ್ನೂ ಓದಿ: ದೃಶ್ಯಂ 2 ಯಶಸ್ಸಿನಲ್ಲಿ ಅಜಯ್​ ದೇವಗನ್​​.. ಭೋಲಾ ಟೀಸರ್ ರಿಲೀಸ್​​

ಮೋಹನ್ ಲಾಲ್ ಮತ್ತು ವೆಂಕಟೇಶ್ ಥಿಯೇಟರ್​ನಲ್ಲಿ ಕಲೆಕ್ಷನ್​ಗಳ ಸುರಿಮಳೆ ನೋಡುವ ಅವಕಾಶ ಕಳೆದುಕೊಂಡರು. ಅವರ ಚಿತ್ರಗಳೂ ಕೂಡ ಥಿಯೇಟರ್​ನಲ್ಲಿ ಬಿಡುಗಡೆಯಾಗಿದ್ದರೆ ನಿರ್ಮಾಪಕರಿಗೆ ಇನ್ನೂ ಹೆಚ್ಚಿನ ಲಾಭವಾಗುತ್ತಿತ್ತು. ಆದಾಗ್ಯೂ, ಆ ಎರಡು ಚಿತ್ರಗಳ ನಿರ್ಮಾಣ ವೆಚ್ಚಕ್ಕೆ ಹೋಲಿಸಿದರೆ, OTT ಹಕ್ಕುಗಳು ಉತ್ತಮ ಬೆಲೆಗೆ ಮಾರಾಟವಾಗಿವೆ ಎಂದು ವ್ಯಾಪಾರ ಮೂಲಗಳು ಹೇಳಿವೆ. ಆದರೆ, ಇಂಥ ಚಿತ್ರಗಳನ್ನು ಥಿಯೇಟರ್​ನಲ್ಲಿ ನೋಡುವುದೇ ಚೆಂದ. ಇನ್ನೂ 'ದೃಶ್ಯಂ 3' ಇರಲಿದೆ ಎಂದು ಜೀತು ಜೋಸೆಫ್ ಈಗಾಗಲೇ ತಿಳಿಸಿದ್ದು, ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.