ETV Bharat / entertainment

ಅನುಷಾ ದಾಂಡೇಕರ್​ರನ್ನು ನಿರ್ಲಕ್ಷಿಸಿದ್ರಾ ಶಾರುಖ್​ ಪತ್ನಿ, ಪುತ್ರಿ?! - suhana Khan

ಅನುಷಾ ದಾಂಡೇಕರ್ ಅವರನ್ನು ಗೌರಿ ಖಾನ್ ಮತ್ತು ಸುಹಾನಾ ಖಾನ್​ ನಿರ್ಲಕ್ಷಿಸಿದ್ದಾರೆಂದು ಸೋಷಿಯಲ್​ ಮೀಡಿಯಾದಲ್ಲಿ ಅನುಷಾರನ್ನು ಟ್ರೋಲ್ ಮಾಡಲಾಗುತ್ತಿದೆ.

Did Gauri Khan insult Anusha Dandekar
ಅನುಷಾ ದಾಂಡೇಕರ್​ರನ್ನು ನಿರ್ಲಕ್ಷಿಸಿದ್ರಾ ಗೌರಿ ಖಾನ್
author img

By

Published : Apr 6, 2023, 4:50 PM IST

ಕಳೆದ ವಾರಾಂತ್ಯ ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಗ್ರ್ಯಾಂಡ್ ಲಾಂಚ್ ಪ್ರೋಗ್ರಾಮ್​ ನಡೆದಿದೆ. ಈ ಅದ್ದೂರಿ ಸಮಾರಂಭದಕ್ಕೆ ದೇಶ ವಿದೇಶಗಳ ಸ್ಟಾರ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಭಾಗಿ ಆಗಿದ್ದರು. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Anusha Dandekar
ಅನುಷಾ ದಾಂಡೇಕರ್ ಸೋಶಿಯಲ್​ ಮೀಡಿಯಾ ಸ್ಟೋರಿ

ವಿಡಿಯೋ ಜಾಕಿ, ನಟಿ, ನಿರೂಪಕಿ, ಗಾಯಕಿ ಅನುಷಾ ದಾಂಡೇಕರ್ ಅವರು ಬಾಲಿವುಡ್​ ಸೂಪರ್​ ಸ್ಟಾರ್ ಶಾರುಖ್​ ಖಾನ್​​ ಪತ್ನಿ ಗೌರಿ ಖಾನ್ ಮತ್ತು ಪುತ್ರಿ ಸುಹಾನಾ ಖಾನ್​ ಅವರನ್ನು ಭೇಟಿಯಾದ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅನುಷಾ ಅವರು ಬೈಟ್‌ಗಾಗಿ ತಾಯಿ ಮಗಳನ್ನು ಒಪ್ಪಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ, ಗೌರಿ ಖಾನ್ ಅವರು ಪುತ್ತಿ ಸುಹಾನಾ ಅವರ ಸಂದರ್ಶನವನ್ನು ತೆಗೆದುಕೊಳ್ಳಲು ಅನುಷಾರಿಗೆ ನಿರಾಕರಿಸಿದರು. ಈ ಒಂದು ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೌರಿ ಮತ್ತು ಸುಹಾನಾ ಅವರು ಅನುಷಾರನ್ನು ನಿರ್ಲಕ್ಷಿಸಿದ್ದಾರೆ ಎಂದು ಭಾವಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ಗುಂಪು ಅನುಷಾ ಅವರನ್ನು ಟ್ರೋಲ್ ಮಾಡಿದ್ದಾರೆ. ಗೌರಿ ಮತ್ತು ಸುಹಾನಾರ ಸಂದರ್ಶನಕ್ಕೆ ಒತ್ತಾಯಿಸಿದ್ದಕ್ಕಾಗಿ ಕೆಲವರು ಅನುಷಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಎಂತಹ ಅವಮಾನ' ಎಂದು ಒಬ್ಬರು ಕಮೆಂಟ್​ ಮಾಡಿದ್ದರೆ, ಮತ್ತೋರ್ವರು 'ತಾವು ಶೈನ್​ ಆಗಲು ಎಸ್​ಆರ್​ಕೆ ಫ್ಯಾಮಿಯನ್ನು ಬಳಸಿಕೊಳ್ಳಲು ಅನುಷಾ ಪ್ರಯತ್ನಿಸಿದ್ದರು' ಎಂದು ಟ್ರೋಲ್​ ಮಾಡಲಾಗಿದೆ.

ಭಾರೀ ಟೀಕೆ ಎದುರಿಸಿದ ವಿಡಿಯೋ ಜಾಕಿ ಅನುಷಾ ದಾಂಡೇಕರ್ ತಮ್ಮ ಇನ್​ಸ್ಟಾಗ್ರಾಮ್​​ ಪೇಜ್​ನಲ್ಲಿ ಟ್ರೋಲ್‌ಗಳಿಗೆ ತಿರುಗೇಟು ಕೊಟ್ಟಿದ್ದಾರೆ. ''ನೀವು ನನ್ನ ಶತ್ರುವಾಗಲು ಬಯಸಿ ಈ ರೀತಿಯ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ, ಏಕೆಂದರೆ ಈ ಸಮಾರಂಭಕ್ಕೆ ಆಹ್ವಾನಿಸಲ್ಪಡದ ಜನರ ಫ್ಯಾನ್ಸ್ ನೀವು. ನನ್ನನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸುತ್ತಿದ್ದೀರಿ. ಆದ್ರೆ ಕ್ಷಮಿಸಿ ನಿಮ್ಮ ಯೋಜನೆಯ ಭಾಗವಾಗಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚುನಾವಣೆಗೂ ಮುನ್ನ ಬಿ.ಸಿ ಪಾಟೀಲ್‌ ಗೆಲ್ತಾರೆಂದು ಭವಿಷ್ಯ ನುಡಿದ ನಟಿ ಪ್ರೇಮಾ

ಮತ್ತಷ್ಟು ಬರೆದುಕೊಂಡಿರುವ ಅನುಷಾ, "ಕೆಲವರು ಸಂದರ್ಶನಗಳನ್ನು ನೀಡಲು ಇಷ್ಟಪಡುವುದಿಲ್ಲ ಮತ್ತು ಎಂದಿಗೂ ಕೊಟ್ಟಿರುವುದಿಲ್ಲ, ಅದು ಪರವಾಗಿಲ್ಲ. ಮತ್ತು ಕೆಲವರು ಸಂದರ್ಶನ ಪಡೆಯಲು ಕಾಯಬೇಕಾಗುತ್ತದೆ. ಆದರೆ ನಾನು ಈ ಹಂತದವರೆಗೆ ಬಂಂದಿದ್ದೇನೆ. ನಾನು ಉತ್ತಮ ಕೆಲಸ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಮಾಡುವ ಕೆಲಸದಲ್ಲಿ ನನಗೆ ನಿಜವಾಗಿಯೂ ಖುಷಿ, ಹೆಮ್ಮೆ ಇದೆ. ನೀವು ಈ ಕೆಲಸ ಮಾಡಬೇಕೆಂದಿದ್ದರೆ ಮಾಡಿ, ನಾನು ನಿಮಗೆ ಒಳ್ಳೆಯದನ್ನೇ ಬಯಸುತ್ತೇನೆ. ನೀವು ಅಂತಿಮವಾಗಿ ಬೆದರಿಸುವುದನ್ನು ನಿಲ್ಲಿಸುತ್ತೀರಿ ಎಂದು ತಿಳಿದಿದ್ದೇನೆ ಅಂತಾ ಬರೆದುಕೊಂಡಿದ್ದಾರೆ. ಈ ಈವೆಂಟ್‌ನಲ್ಲಿ ತಾಯಿ ಮಗಳು ಅನುಷಾರಿಗೆ ಸಂದರ್ಶನ ನೀಡಲಿಲ್ಲ. ಆದರೆ ಶಾರುಖ್ ಖಾನ್ ಅನುಷಾ​​ ಅವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರಿದ 'ದಸರಾ': ಗೆಲುವಿನ ನಗೆ ಬೀರಿದ ಟಾಲಿವುಡ್​

ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ ಬಗ್ಗೆ ನೀತಾ ಅಂಬಾನಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಬಾಲಿವುಡ್​ ಸೂಪರ್​ ಸ್ಟಾರ್, "ನೀತಾ ಅವರು ಈ ಸೆಂಟರ್ ಮಾಡಲು ಹಲವು ವರ್ಷಗಳ ಸಮಯ ಮೀಸಲಿಟ್ಟಿದ್ದಾರೆ. 10 ರಿಂದ 12 ವರ್ಷಗಳ ಹಿಂದೆ ನಾವು ಇದನ್ನು ಚರ್ಚಿಸಿದ್ದೆವು. ಅವರು ನನ್ನೊಂದಿಗೆ ಮಾತನಾಡುತ್ತಾ, ನನಗೆ ನೀಲನಕ್ಷೆಯನ್ನು ತೋರಿಸಿದರು. ಅದನ್ನು ದೊಡ್ಡ ರೀತಿಯಲ್ಲಿ, ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಉತ್ಸಾಹದ ಪ್ರಯಾಣವಾಗಿದೆ ಎಂದು ಗುಣಗಾನ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.