ETV Bharat / entertainment

ವಾಮನ ಟೀಸರ್ ರಿಲೀಸ್.. ಧನ್ವೀರ್ ಗೌಡ ಆ್ಯಕ್ಷನ್​​ಗೆ ಅಭಿಮಾನಿಗಳು ಫಿದಾ - etv baharata kannada

ಧನ್ವೀರ್ ಗೌಡ ಅಭಿನಯದ ವಾಮನ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್​​ನಲ್ಲಿ ಧೂಳ್ ಎಬ್ಬಿಸುತ್ತಿದೆ.

Dhanveer Gowda starrer Vamana teaser released
ಧನ್ವೀರ್ ಗೌಡ ಅಭಿನಯದ ವಾಮನ ಟೀಸರ್ ರಿಲೀಸ್
author img

By

Published : Aug 16, 2022, 3:52 PM IST

ಚಂದನವನದಲ್ಲಿ ಭರವಸೆ ಹುಟ್ಟಿಸಿರೋ ಯುವ ನಟ ಧನ್ವೀರ್ ಗೌಡ ಸದ್ಯ ವಾಮನ ಸಿನಿಮಾ ಜಪ ಮಾಡುತ್ತಿದ್ದಾರೆ. ಧನ್ವೀರ್ ಅಭಿನಯದ ವಾಮನ ಟೀಸರ್ ರಿಲೀಸ್ ಆಗಿದ್ದು ಸಖತ್ ಜಬರ್ದಸ್ತ್ ಆಗಿ ಮೂಡಿಬಂದಿದೆ.

ಟೀಸರ್​ನಲ್ಲಿ ಧನ್ವೀರ್ ಗೌಡ ಮಾಸ್ ಲುಕ್​ನಲ್ಲಿ ಮಿಂಚಿದ್ದಾರೆ. ಅದ್ಧೂರಿ ಸೆಟ್, ಭರ್ಜರಿ ಆ್ಯಕ್ಷನ್, ಹೊಸ ಮಾಸ್ ಗೆಟಪ್, ಬ್ಯಾಗ್ರೌಂಡ್ ಮ್ಯೂಸಿಕ್, ವಿಷ್ಯೂವಲ್ಸ್ ಎಫೆಕ್ಟ್ ಟೀಸರ್​ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತ ಎಂಟ್ರಿ ಕೊಡುವ ಧನ್ವೀರ್ ಗೌಡ ಗುಣ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

'ನನ್ನತ್ರ ಏನಿಲ್ವೋ ಅದೇ ನನ್ ಹೆಸರು...ಗುಣ, ಐ ಆ್ಯಮ್ ಜಸ್ಟ್ ಕ್ಯಾರಕ್ಟರ್​ಲೆಸ್' ಅಂತಾ ಹೇಳುತ್ತ ಮಾಸ್ ಹೀರೋನ ಎಂಟ್ರಿ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1:50 ನಿಮಿಷ ಇರುವ ವಾಮನ ಸಿನಿಮಾದ ಟೀಸರ್ ತುಣುಕು ಯೂಟ್ಯೂಬ್​​ನಲ್ಲಿ ಧೂಳ್ ಎಬ್ಬಿಸುತ್ತಿದೆ.

ವಾಮನ ಟೀಸರ್ ರಿಲೀಸ್

ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಧನ್ವೀರ್​ಗೆ ಜೋಡಿಯಾಗಿ ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆ್ಯಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಖಳನಾಯಕನಾಗಿ ಸಂಪತ್ ನಟಿಸುತ್ತಿದ್ದು, ಉಳಿದಂತೆ ಅಚ್ಯುತ್ ಕುಮಾರ್, ತಾರಾ, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುದಿ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇನ್ ಸಿಂಹ ಕ್ಯಾಮರಾ ಕೈಚಳಕ, ಸುರೇಶ್ ಆರ್ಮುಖ ಸಂಕಲನ, ಅರ್ಜುನ್ ರಾಜ್ ಆ್ಯಕ್ಷನ್ ಸಿನಿಮಾಕ್ಕಿದೆ. ಈಗಾಗಲೇ 70 ದಿನದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಬಾಕಿ ಉಳಿದ ಚಿತ್ರೀಕರಣದಲ್ಲಿ ನಿರತವಾಗಿದೆ.

ಇದನ್ನೂ ಓದಿ: ಕಡಲೂರ ಕಣ್ಮಣಿ ಚಿತ್ರದ ಟೀಸರ್ ರಿಲೀಸ್....ದಸರಾಕ್ಕೆ ತೆರೆಕಾಣಲು ಸಜ್ಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.