ETV Bharat / entertainment

ಪವರ್​ಫುಲ್ ರಾಜಕಾರಣಿ ಪಾತ್ರದಲ್ಲಿ ಕೇರಳ‌ ಸುಂದರಿ: ಕಲ್ಯಾಣ್‌ ರಾಮ್‌ ಚಿತ್ರದಲ್ಲಿ ಮಾಳವಿಕಾ ನಾಯರ್ - Malavika Nair poster

ನಟ ಕಲ್ಯಾಣ್‌ ರಾಮ್‌ ನಟನೆಯ 'ಡೆವಿಲ್' ಚಿತ್ರದ ಹೊಸ ಪೋಸ್ಟರ್ ಅನಾವರಣಗೊಂಡಿದೆ.

Devil poster release
ಮಾಳವಿಕಾ ನಾಯರ್ ಪೋಸ್ಟರ್
author img

By ETV Bharat Karnataka Team

Published : Oct 17, 2023, 1:24 PM IST

ದಕ್ಷಿಣ ಚಿತ್ರರಂಗದ ನಟ ಕಲ್ಯಾಣ್‌ ರಾಮ್‌ ಸದಾ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸತನಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಖ್ಯಾತ ನಟನ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಡೆವಿಲ್'. ಶೀರ್ಷಿಕೆಯೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಫಸ್ಟ್ ಗ್ಲಿಂಪ್ಸ್ ಮೂಲಕ ಸಖತ್​ ಸದ್ದು ಮಾಡಿರುವ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಗೂಢಾಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ವಿಚಾರಗಳಿಂದ ಸಿನಿಪ್ರಿಯರ ಗಮನ ಸೆಳೆದಿರುವ ಡೆವಿಲ್ ಚಿತ್ರತಂಡ ಇದೀಗ ಪವರ್ ಫುಲ್ ಪೊಲಿಟಿಕಲ್ ಲೇಡಿ ಲೀಡರ್​ ಅನ್ನು ಪರಿಚಯಿಸಿದೆ.

Devil poster release
ಮಾಳವಿಕಾ ನಾಯರ್ ಪೋಸ್ಟರ್

ಪ್ರಬಲ ರಾಜಕಾರಣಿ ಮಣಿಮೇಕಲಾ ಪಾತ್ರದಲ್ಲಿ ಮಾಳವಿಕಾ: 'ಡೆವಿಲ್' ಸಿನಿಮಾ ಅಂಗಳಕ್ಕೆ ಮಾಳವಿಕಾ ನಾಯರ್ ಎಂಟ್ರಿ ಕೊಟ್ಟಿದ್ದಾರೆ. ಮಣಿಮೇಕಲಾ ಎಂಬ ಪ್ರಬಲ ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜಕಾರಣಿಯಂತೆ ಬಿಳಿ ಬಣ್ಣದ ಕಾಟನ್ ಸೀರೆ ಧರಿಸಿ ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಅವರ ಫಸ್ಟ್ ಲುಕ್ ಅನಾವರಣಗೊಳಿಸಲಾಗಿದೆ. ಪೋಸ್ಟರ್​​ನಲ್ಲಿ ಶಾಂತಿಯ ಸಂಕೇತ ಪಾರಿವಾಳವೂ ಇದೆ. ರಾಜಕಾರಣಿ ಪಾತ್ರದಲ್ಲಿ ಪವರ್​ ಫುಲ್ ಲುಕ್​ ಬೀರಿದ್ದಾರೆ.

ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿ ಅಭಿಷೇಕ್ ನಾಮಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ 'ಡೆವಿಲ್' ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಸೌಂದರ್ಯ ರಾಜನ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕನ್ನಡ‌, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದ್ದು,‌ ಮುಂದಿನ ತಿಂಗಳು ನವೆಂಬರ್ 24 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಪ್ರಯಾಣ: ರಣ್​​ಬೀರ್​ ಜೊತೆ ಆಲಿಯಾ ಭಟ್ - ವಿಡಿಯೋ ನೋಡಿ

ಇನ್ನೂ, ಕಲ್ಯಾಣ್ ರಾಮ್ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಸ್ಟಾರ್ ಡಮ್​​ ಹೊಂದಿರುವ ನಟ. ಅತ್ಯುತ್ತಮ ಅಭಿನಯದಿಂದ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಹೊಸ ಬಗೆಯ ಕಥೆಗಳಿಗೆ ಹೆಚ್ಚಿನ ಆದ್ಯತೆ ಕೊಡುವ ಇವರೀಗ ಡೆವಿಲ್​​ ಸಲುವಾಗಿ ಸುದ್ದಿಯಲ್ಲಿದ್ದಾರೆ. ಜುಲೈನಲ್ಲಿ ನಟ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬರ್ತ್ ಡೇ ಗಿಫ್ಟ್ ಆಗಿ 'ಡೆವಿಲ್' ಸಿನಿಮಾದ ಸಣ್ಣ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಚಿತ್ರದ ಪ್ರಮುಖ ಪಾತ್ರವೊಂದರ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಕಲ್ಯಾಣ್‌ ರಾಮ್‌ ಸಜ್ಜಾಗಿದ್ದಾರೆ. ಸಿನಿಮಾ ಕುರಿತು ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಚಿತ್ರತಂಡ ಸಹ ಸಿನಿಪ್ರಿಯರ ಕುತೂಹಲ ಹೆಚ್ಚಿಸುವ ಕೆಲ ಮಾಡುತ್ತಿದೆ.

ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಮಯ, ಸ್ಥಳ, ವಿಜೇತರು ಸೇರಿ ಸಂಪೂರ್ಣ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.