ETV Bharat / entertainment

ಅಂತಿಮ ಹಂತದಲ್ಲಿ 'ದೇಸಾಯಿ' ಶೂಟಿಂಗ್​: ಪ್ರವೀಣ್ ಕುಮಾರ್, ರಾಧ್ಯ ಸಿನಿಮಾದ ಮಾಹಿತಿ - ಪ್ರವೀಣ್ ಕುಮಾರ್

ದೇಸಾಯಿ ಸಿನಿಮಾ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದೆ.

Desai movie
ದೇಸಾಯಿ ಸಿನಿಮಾ
author img

By ETV Bharat Karnataka Team

Published : Jan 16, 2024, 6:09 PM IST

'ಲವ್ 360' ಕನ್ನಡ ಪ್ರೇಕ್ಷಕರ ಮನಗೆದ್ದ ಚಿತ್ರ. ಈ ಸಿನಿಮಾ ಮೂಲಕ ಯುವನಟ ಪ್ರವೀಣ್ ಕುಮಾರ್ ಭರವಸೆಯ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಚಿತ್ರದ ಬಳಿಕ ಪ್ರವೀಣ್ ಕುಮಾರ್ ಎಲ್ಲಿ ಹೋದ್ರು? ಅಂತಾ ಗಾಂಧಿನಗರದ ಪಂಡಿತರು ಮಾತನಾಡುವ ಹೊತ್ತಿಗೆ 'ದೇಸಾಯಿ' ಎಂಬ ಫ್ಯಾಮಿಲಿ ಎಂಟರ್​ಟೈನ್ಮೆಂಟ್​ ಸಿನಿಮಾದೊಂದಿಗೆ ಬರಲು ಸಜ್ಜಾಗಿದ್ದಾರೆ. ನಿರ್ದೇಶಕ ನಾಗಿರೆಡ್ಡಿ ಭಡ ರಚನೆ ಜೊತೆಗೆ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

Desai movie
ದೇಸಾಯಿ ಚಿತ್ರತಂಡ

ಪ್ರವೀಣ್ ಕುಮಾರ್ ನಾಯಕನಾಗಿ ನಟಿಸುತ್ತಿರುವ 'ದೇಸಾಯಿ' ಚಿತ್ರದ ಹಾಡೊಂದರ ಚಿತ್ರೀಕರಣ ಬೆಂಗಳೂರು ನಗರದ ಹೊರವಲಯದ ಡೆಸ್ಟಿನೊ ರೆಸಾರ್ಟ್​ನ ಸುಂದರ ಪರಿಸರದಲ್ಲಿ ನಡೆಯಿತು. ಗೀತೆ ರಚನೆಕಾರ ಶಿವು ಬೇರ್ಗಿ ಬರೆದಿರುವ, ಸಾಯಿಕಾರ್ತಿಕ್ ಸಂಗೀತವಿರುವ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನಾಯಕ ಪ್ರವೀಣ್ ಕುಮಾರ್ ಹಾಗೂ ನಾಯಕಿ ರಾಧ್ಯ ಈ ಸಾಂಗ್​ಗೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಹಾಗೂ ಚಿತ್ರದ ಬಗ್ಗೆ ಚಿತ್ರತಂಡವರು ಕೆಲ ಮಾಹಿತಿ ಹಂಚಿಕೊಂಡರು.

'ದೇಸಾಯಿ' ಒಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತು ಶುರು ಮಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, ಸುಮಾರು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿರುವ ನನಗಿದು ನಿರ್ದೇಶನದ ಮೊದಲ ಚಿತ್ರ. ತಾತ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ‌. ಸೆಂಟಿಮೆಂಟ್ ಸನ್ನಿವೇಶಗಳು ಸಖತ್ತಾಗಿ ಮೂಡಿ ಬಂದಿವೆ. ಪ್ರೇಕ್ಷಕರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

Desai movie
ತೆರೆ ಹಂಚಿಕೊಂಡ ಪ್ರವೀಣ್ ಕುಮಾರ್, ರಾಧ್ಯ

ಯುವನಟ ಪ್ರವೀಣ್ ಕುಮಾರ್ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಆಟಗಾರ (ಅಥ್ಲೆಟಿಕ್)ನ ಪಾತ್ರ. "ಲವ್ 360" ಚಿತ್ರದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸುತ್ತಿದ್ದೇನೆ ಎಂದು ತಿಳಿಸಿದರು. ಬಳಿಕ ನಾಯಕನಟಿ ರಾಧ್ಯ ಮಾತನಾಡಿ, ದೇಸಾಯಿ ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿಯ ಪಾತ್ರ. ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಭರತ್, ತಾಂಡವ್​ ಕಾಂಬಿನೇಶನ್​ನ 'ದೇವನಾಂಪ್ರಿಯ' ಫಸ್ಟ್ ಲುಕ್ ರಿವೀಲ್​

ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಾಹಣವಿದೆ. ಮಹಂತೇಶ್ ವಿ ನಿರ್ಮಾಪಕರು.

ಇದನ್ನೂ ಓದಿ: 75ನೇ 'ಎಮ್ಮಿ' ಅವಾರ್ಡ್ಸ್: ಪ್ರತಿಷ್ಠಿತ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ

ನಿರ್ಮಾಪಕ ಮಹಂತೇಶ್ ವಿ ಚೋಳಚಗುಡ್ಡ ಮಾತನಾಡಿ ನಾನು ಮೂಲತಃ ಬಾಗಲಕೋಟೆಯವನು. ಸಿನಿಮಾ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು. ಅದು ಈ ಸಿನಿಮಾ ಮೂಲಕ ಈಡೇರಿದೆ. ಇದೊಂದು ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಚಿತ್ರ. ಸಂಭಾಷಣೆ ಕೂಡ ಅದೇ ಸೊಗಡಿನಲ್ಲಿರುತ್ತದೆ. ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಹೆಚ್ಚಿನ ಚಿತ್ರೀಕರಣ ಬಾದಾಮಿ, ಬಾಗಲಕೋಟೆಯಲ್ಲಿ ನಡೆದಿದೆ ಎಂದು ತಿಳಿಸಿದರು. ಸದ್ಯ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ತಂಡ ಶೀಘ್ರದಲ್ಲೇ ಟ್ರೇಲರ್ ಅನಾವರಣಗೊಳಿಸುವ ಯೋಜನೆಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.