ನವದೆಹಲಿ: ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW)ವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸೋಮವಾರ ಮತ್ತೆ ಸಮನ್ಸ್ ಜಾರಿ ಮಾಡಿದೆ. ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಆಗಿರುವ ಜಾಕ್ವೆಲಿನ್‌ಗೆ ಸೆಪ್ಟೆಂಬರ್ 14ರ ರಂದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ.
-
Economic Offences Wing of Delhi Police issues fresh summons to Jacqueline Fernandez to appear on Sept 14
— ANI Digital (@ani_digital) September 12, 2022 " class="align-text-top noRightClick twitterSection" data="
Read @ANI Story | https://t.co/WbNZGh3Y2Q#DelhiPolice #JacquelineFernandez #Summons pic.twitter.com/ZPyI9iy8Sv
">Economic Offences Wing of Delhi Police issues fresh summons to Jacqueline Fernandez to appear on Sept 14
— ANI Digital (@ani_digital) September 12, 2022
Read @ANI Story | https://t.co/WbNZGh3Y2Q#DelhiPolice #JacquelineFernandez #Summons pic.twitter.com/ZPyI9iy8SvEconomic Offences Wing of Delhi Police issues fresh summons to Jacqueline Fernandez to appear on Sept 14
— ANI Digital (@ani_digital) September 12, 2022
Read @ANI Story | https://t.co/WbNZGh3Y2Q#DelhiPolice #JacquelineFernandez #Summons pic.twitter.com/ZPyI9iy8Sv
ನಟಿಯು ಕೆಲವು ಕಾರಣಗಳನ್ನು ಉಲ್ಲೇಖಿಸಿ ತಮ್ಮ ವಿಚಾರಣೆಯನ್ನು 15 ದಿನಗಳ ಕಾಲ ಮುಂದೂವಂತೆ ಕೇಳಿಕೊಂಡಿದ್ದರಿಂದ ದೆಹಲಿ ಪೊಲೀಸರು ಇಂದು (ಸೋಮವಾರ) ನಿಗದಿಯಾಗಿದ್ದ ವಿಚಾರಣೆಯನ್ನು ಮುಂದೂಡಿದ್ದಾರೆ. ಆದರೆ, ನಟಿಯ ಮನವಿಯನ್ನು ತಿರಸ್ಕರಿಸಿರುವ ದೆಹಲಿ ಪೊಲೀಸರು ಹೆಚ್ಚು ಸಮಯ ನೀಡದೇ ಬರುವ ಬುಧವಾರ (ಸೆ.14) ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದು ಮೂರನೇ ಸಮನ್ಸ್ ಆಗಿದ್ದು ತನಿಖೆಗೆ ಹಾಜರಾಗುವಂತೆ ಪೊಲೀಸರು ನಟಿ ಫರ್ನಾಂಡಿಸ್‌ಗೆ ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ಸೆಪ್ಟಂಬರ್ 14 ರಂದು ಇಲ್ಲಿಯ ಇಒಡಬ್ಲ್ಯೂ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಜರಾಗುವಂತೆ ಅವರಿಗೆ ಹೊಸದಾಗಿ ಸಮನ್ಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ವಿಚಾರಣೆಗೆ ಹಾಜರಾಗಿರಲಿಲ್ಲ: ಇದೇ ಪ್ರಕರಣ ಸಂಬಂಧ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಆಗಸ್ಟ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಹೀಗಾಗಿ, ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ. ಕೆಲವು ಕಾರಣಗಳನ್ನು ನಟಿಯು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.
200 ಕೋಟಿ ರೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಖೇಶ್ ಚಂದ್ರಶೇಖರ್ ವಿರುದ್ಧ ಆಗಸ್ಟ್ 17ರಂದು ದಿಲ್ಲಿ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೆಸರನ್ನು ಆರೋಪಿ ಎಂದು ನಮೂದಿಸಲಾಗಿದೆ. ಪ್ರಕರಣಗಳಲ್ಲಿ ಸುಕೇಶ್ ಭಾಗಿಯಾಗಿರುವ ಬಗ್ಗೆ ಫರ್ನಾಂಡೀಸ್ ಅವರಿಗೆ ತಿಳಿದಿತ್ತು.
ಆದರೆ, ಗೊತ್ತಿದ್ದರೂ ಅದನ್ನು ಕಡೆಗಣಿಸಿ ಆತನೊಂದಿಗೆ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖ ಮಾಡಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಬಾಲಿವುಡ್ನ ಖ್ಯಾತ ನೃತ್ಯಗಾರ್ತಿ ನೋರಾ ಫತೇಹಿ ಅವರ ಹೆಸರನ್ನು ನಮೂದಿಸಿತ್ತು. ಸದ್ಯ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯೂಸಿ: ಜಾಕ್ವೆಲಿನ್ ಫರ್ನಾಂಡಿಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಲಂಕಾದ ಈ ಸುಂದರಿ ಕೊನೆಯದಾಗಿ ಕನ್ನಡದ ವಿಕ್ರಾಂತ್ ರೋಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಸದ್ಯ ಹಲವು ಪ್ರಾಸಕ್ಟ್ಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡು ಓಡಾಡುತ್ತಿರುವ ಅವರು ಸಖತ್ ಬ್ಯುಸಿ ನಟಿಯಾಗಿದ್ದಾರೆ.
ಸುಕೇಶ್ ಚಂದ್ರಶೇಖರ್ ವಿರುದ್ಧ 10 ಕ್ರಿಮಿನಲ್ ಮೊಕದ್ದಮೆಗಳು: ಕರ್ನಾಟಕ ಮೂಲದ ಸುಕೇಶ್ ಚಂದ್ರಶೇಖರ್ ಸದ್ಯ ದೆಹಲಿ ಜೈಲಿನಲ್ಲಿದ್ದು, ಆತನ ವಿರುದ್ಧ 10 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ವ್ಯಕ್ತಿಯೊಬ್ಬರನ್ನು ಜಾಮೀನಿನ ಮೇಲೆ ಹೊರತರುವ ನೆಪದಲ್ಲಿ ಕೇಂದ್ರ ಕಾನೂನು ಸಚಿವಾಲಯ ಮತ್ತು ಪಿಎಂಒ ಅಧಿಕಾರಿಗಳಂತೆ ನಟಿಸಿ ಜೈಲಿನಲ್ಲಿರುವ ಮಾಜಿ ರಾನ್‌ಬಾಕ್ಸಿ ಮಾಲೀಕ ಶಿವಿಂದರ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ಭಾರಿ ಮೊತ್ತ ಹಣ ಸುಲಿಗೆ ಮಾಡಿದ್ದ. ಆದರೆ, ಸುಕೇಶ್ ಚಂದ್ರಶೇಖರ್ ಹಣಕ್ಕಾಗಿ ಮಾಡಿದ ನಟನೆ ಎಂದು ಗೊತ್ತಾಗುತ್ತಿದ್ದಂತೆ ಅದಿತಿ ಸಿಂಗ್ ಪೊಲೀಸರ ಮೊರೆ ಹೋದರು.
ಇವರಿಂದ ಪೀಕಿದ್ದ ಹಣದಲ್ಲೇ ಮಜಾ ಮಾಡಿದ್ದ ಸುಖಪುರುಷ ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಹಲವು ಬಾಲಿವುಡ್ ನಟಿರಿಗೆ ದುಬಾರಿ ಬೆಲೆಯುಳ್ಳ ಉಡುಗೊರೆಯನ್ನು ನೀಡಿದ್ದನು. ಸದ್ಯ ಇದೆಲ್ಲ ಪ್ರಕರಣದ ತನಿಖೆದಿಂದ ಒಂದೊಂದೇ ಮಾಹಿತಿ ಬಹರಿಂಗಗೊಳ್ಳುತ್ತಿದೆ.
ಇದನ್ನೂ ಓದಿ: ಬಾಲಿವುಡ್ ಡ್ಯಾನ್ಸ್ನತ್ತ ಮಂಗಳಮುಖಿಯರ ಆಕರ್ಷಣೆ.. ಮಂಗಳೂರಿನಲ್ಲಿ ನಿತ್ಯ ತರಬೇತಿ